ಅಂಗನವಾಡಿಗಳಲ್ಲಿ ಉದ್ಯೋಗಾವಕಾಶ: 4ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಿ

| Updated By: ಝಾಹಿರ್ ಯೂಸುಫ್

Updated on: Jan 02, 2022 | 6:52 PM

Recruitment 2022: ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 10ನೇ ತರಗತಿ (ಎಸ್​ಎಸ್​ಎಲ್​ಸಿ) ಪಾಸ್ ಆಗಿರಬೇಕು. ಸಹಾಯಕಿಯರ ಹುದ್ದೆಗೆ ಕನಿಷ್ಟ 4ನೇ ತರಗತಿ ಉತ್ತೀರ್ಣರಾಗಿರಬೇಕು. ಹಾಗೆಯೇ 9ನೇ ತರಗತಿಯವರೆಗೆ ಪಾಸಾದವರು ಕೂಡ ಅರ್ಜಿ ಸಲ್ಲಿಸಬಹುದು.

ಅಂಗನವಾಡಿಗಳಲ್ಲಿ ಉದ್ಯೋಗಾವಕಾಶ: 4ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಿ
ಸಾಂದರ್ಭಿಕ ಚಿತ್ರ
Follow us on

ಬೀದರ್ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿಯಿರುವ ಹಲವು ಹುದ್ದೆಗಳ ನೇಮಕಾತಿ ಪ್ರಕಟಿಸಲಾಗಿದೆ. ಈ ವಿಭಾಗದಲ್ಲಿ 28 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 66 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ ಪಾಸಾದ ಬೀದರ್ ಜಿಲ್ಲೆಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.

ಹುದ್ದೆಗಳ ಹೆಸರು ಮತ್ತು ಒಟ್ಟು ಹುದ್ದೆಗಳು:
ಅಂಗನವಾಡಿ ಕಾರ್ಯಕರ್ತೆ- 28 ಹುದ್ದೆಗಳು
ಅಂಗನವಾಡಿ ಸಹಾಯಕಿ – 66 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ- 94

ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 10ನೇ ತರಗತಿ (ಎಸ್​ಎಸ್​ಎಲ್​ಸಿ) ಪಾಸ್ ಆಗಿರಬೇಕು.
ಸಹಾಯಕಿಯರ ಹುದ್ದೆಗೆ ಕನಿಷ್ಟ 4ನೇ ತರಗತಿ ಉತ್ತೀರ್ಣರಾಗಿರಬೇಕು. ಹಾಗೆಯೇ 9ನೇ ತರಗತಿಯವರೆಗೆ ಪಾಸಾದವರು ಕೂಡ ಅರ್ಜಿ ಸಲ್ಲಿಸಬಹುದು.
10ನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸುವಾಗ ನೀಡಬೇಕಾದ ದಾಖಲೆಗಳು:
-ಜನನ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
-ವಾಸಸ್ಥಳ ದೃಢೀಕರಣ ಪತ್ರ.
-ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.
-ಮೀಸಲಾತಿ ಇದ್ದರೆ, ಅದರ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ.
– ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.
-ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಅದರ ಪ್ರಮಾಣ ಪತ್ರ.
-ಯೋಜನಾ ನಿರಾಶ್ರಿತರಾಗಿದ್ದಲ್ಲಿ ಅದರ ಪ್ರಮಾಣ ಪತ್ರ.
-ಅಂಗವಿಕಲರಾಗಿದ್ದಲ್ಲಿ ಅದರ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸುವುದು ಹೇಗೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ www.anganwadirecruitment.kar.nic.in ಗೆ ಭೇಟಿ ನೀಡಿ. ಅಲ್ಲಿ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಿ ಅರ್ಜಿ ಭರ್ತಿ ಮಾಡಿ. ಅಲ್ಲದೆ ನೀವು ನೀಡಬೇಕಾದ ದಾಖಲೆಗಳನ್ನು ಅಪ್​ಲೋಡ್ ಮಾಡಿ. ಸಬ್​ಮಿಟ್​ ಬಟನ್​ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 01-01-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-01-2022

ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  South Africa vs India: ಭಾರತ- ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಮಾಹಿತಿ

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(WCD Karnataka Anganwadi Recruitment 2022)