AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

South Africa vs India: ಭಾರತ- ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಮಾಹಿತಿ

India vs South Africa 2nd Test: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಯಾವಾಗ ಆರಂಭ?, ಪಂದ್ಯ ನಡೆಯುತ್ತಿರುವುದು ಎಲ್ಲಿ?, ಎಷ್ಟು ಗಂಟೆಗೆ ಶುರು?, ಪಿಚ್ ರಿಪೋರ್ಟ್ ಬಗೆಗಿನ ಎಲ್ಲ ಮಾಹಿತಿ ಇಲ್ಲಿದೆ ನೋಡಿ.

South Africa vs India: ಭಾರತ- ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ ಯಾವಾಗ?, ಎಲ್ಲಿ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಮಾಹಿತಿ
India vs South Africa 3rd Test
TV9 Web
| Updated By: Vinay Bhat|

Updated on: Jan 02, 2022 | 9:51 AM

Share

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಭಾರತ (India vs South Africa) ತಂಡ ಇದೀಗ ಎರಡನೇ ಫೈಟ್​ಗೆ ಸಜ್ಜಾಗುತ್ತಿದೆ. ಹರಿಣಗಳ ನಾಡಲ್ಲಿ ಈವರೆಗೆ ಟೆಸ್ಟ್ ಸರಣಿ ಗೆಲ್ಲದ ಟೀಮ್ ಇಂಡಿಯಾ (Team India) ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು ವಿರಾಟ್ ಕೊಹ್ಲಿ (Virat Kohli) ಪಡೆ ಇತಿಹಾಸ ಸೃಷ್ಟಿಸುತ್ತಾ ಎಂಬುದು ಕಾದುನೋಡಬೇಕಿದೆ. ಈಗಾಗಲೇ ಹೊಸ ವರ್ಷದ ಸಂಭ್ರಮ ಮುಗಿಸಿ ಅಭ್ಯಾಸ ಶುರು ಮಾಡಿರುವ ಭಾರತ ನೆಟ್​ನಲ್ಲಿ ಬೆವರು ಹರಿಸುತ್ತಿದೆ. ಕೋಚ್ ರಾಹುಲ್ ದ್ರಾವಿಡ್ (Rahul Dravid) ಆಟಗಾರರಿಗೆ ವಿಶೇಷ ಟಿಪ್ಸ್ ನೀಡುತ್ತಿದ್ದಾರೆ. ಹಾಗಾದ್ರೆ ಭಾರತ ಹಾಗೂ ದಕ್ಷಿಣ ಆಫ್ರಿಕಾ (IND vs SA) ನಡುವಣ ಎರಡನೇ ಟೆಸ್ಟ್ ಪಂದ್ಯ ಯಾವಾಗ ಆರಂಭ?, ಪಂದ್ಯ ನಡೆಯುತ್ತಿರುವುದು ಎಲ್ಲಿ?, ಎಷ್ಟು ಗಂಟೆಗೆ ಶುರು?, ಪಿಚ್ ರಿಪೋರ್ಟ್ ಬಗೆಗಿನ ಎಲ್ಲ ಮಾಹಿತಿ ಇಲ್ಲಿದೆ ನೋಡಿ.

ಪಂದ್ಯ ನಡೆಯುವ ಸ್ಥಳ: ಜೋಹನ್ಸ್‌ ಬರ್ಗ್​​ನ ವಂಡರರ್ಸ್‌ ಸ್ಟೇಡಿಯಂ

ದಿನಾಂಕ: ಜನವರಿ 3, 2022

ಪಂದ್ಯ ಆರಂಭದ ಸಮಯ: ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 1: 30ಕ್ಕೆ ಆರಂಭವಾಗಲಿದೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್‌ ನೆಟ್​ವರ್ಕ್, ಡಿಸ್ನಿ ಪ್ಲಸ್ ಹಾಟ್​​ಸ್ಟಾರ್​​ನಲ್ಲೂ ನೇರ ಪ್ರಸಾರ ಕಾಣಲಿದೆ

ಜೋಹನ್ಸ್‌ಬರ್ಗ್‌ ವಾತಾವರಣ: ಸೆಂಚೂರಿಯನ್‌ನಂತೆಯೇ ಜೋಹನ್ಸ್‌ಬರ್ಗ್‌ನಲ್ಲಿಯೂ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮೊದಲನೇ ದಿನ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಳಾಗಿದೆ.

ವಂಡರ್‌ ಆಫ್ ಕ್ರಿಕೆಟ್‌ ಎನಿಸಿರುವ ಜೋಹನ್ಸ್‌ಬರ್ಗ್‌ನ ವಾಂಡರರ್ ಸ್ಟೇಡಿಯಂ ಭಾರತದ ಪಾಲಿನ ಅದೃಷ್ಟದ ತಾಣ. 1992ರಿಂದ ಇದುವರೆಗೆ ಭಾರತ ತಂಡ ವಂಡರರ್ಸ್‌ನಲ್ಲಿ 5 ಟೆಸ್ಟ್ ಆಡಿದ್ದು, ಒಂದರಲ್ಲೂ ಸೋತಿಲ್ಲ. 2 ಗೆಲುವು ದಾಖಲಿಸಿರುವ ಭಾರತ ತಂಡ, 3 ರಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ ಜೊಹಾನ್ಸ್‌ಬರ್ಗ್ ಭಾರತ ತಂಡಕ್ಕೆ ವಿದೇಶದ ತವರು ಮೈದಾನದಂತಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಆಡಿದ 42 ಟೆಸ್ಟ್‌ ಗಳಲ್ಲಿ 18 ಜಯ ಸಾಧಿಸಿದರೂ ಭಾರತವನ್ನು ಇನ್ನೂ ಸೋಲಿಸಿಲ್ಲ ಎಂಬುದೊಂದು ಅಚ್ಚರಿ. ಜೊಹಾನ್ಸ್‌ಬರ್ಗ್‌ನಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ಟೀಮ್‌ ಇಂಡಿಯಾ ಇದನ್ನು ಮುಂದುವರಿಸುತ್ತಾ ಎಂಬುದು ನೋಡಬೇಕಿದೆ.

ಮೊದಲ ಟೆಸ್ಟ್ ಹೇಗಿತ್ತು?:

ಮೊದಲನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 327 ರನ್‌ಗಳನ್ನು ಕಲೆ ಹಾಕಿತ್ತು. ಇದರ ಫಲವಾಗಿ ದ್ವಿತೀಯ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲ್‌ ಔಟಾದರೂ ಕೊಹ್ಲಿ ಪಡೆಗೆ ಯಾವುದೇ ತೊಂದರೆಯಾಗಲಿಲ್ಲ. ನಂತರ 305 ರನ್‌ ಕಠಿಣ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ 191 ರನ್‌ಗಳಿಂದ ಆಲ್‌ಔಟ್‌ ಆಗುವ ಮೂಲಕ 113 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ 123 ರನ್‌ ಗಳಿಸಿದ್ದ ಕೆ.ಎಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಜೊತೆ ಆರಂಭಿಕ ವಿಕೆಟ್‌ಗೆ 117 ರನ್ ಜೊತೆಯಾಟವಾಡಿದ್ದ ಮಯಾಂಕ್‌ ಅಗರ್ವಾಲ್‌ ಕೂಡ ಪ್ರಥಮ ಇನಿಂಗ್ಸ್‌ನಲ್ಲಿ 60 ರನ್‌ ಗಳಿಸಿದ್ದರು.

South Africa vs India: ನ್ಯೂ ಇಯರ್ ಪಾರ್ಟಿ ಆಯ್ತು ಇದೀಗ ಪ್ರ್ಯಾಕ್ಟೀಸ್ ಸೆಷನ್: ನೆಟ್​ನಲ್ಲಿ ಕೊಹ್ಲಿ ಹುಡುಗರ ಭರ್ಜರಿ ಅಭ್ಯಾಸ

Pro Kabaddi League: ಪ್ರೋ ಕಬಡ್ಡಿ ಲೀಗ್​ನಲ್ಲೊಂದು ಅಚ್ಚರಿ: ಒಂದೇ ದಿನ ಮೂರು ಪಂದ್ಯ ಕೂಡ ರೋಚಕ ಡ್ರಾ

(IND vs SA Live Streaming 2nd Test When and Where to Watch SA vs IND Test Match Online Johannesburg pitch report )