South Africa vs India: ನ್ಯೂ ಇಯರ್ ಪಾರ್ಟಿ ಆಯ್ತು ಇದೀಗ ಪ್ರ್ಯಾಕ್ಟೀಸ್ ಸೆಷನ್: ನೆಟ್​ನಲ್ಲಿ ಕೊಹ್ಲಿ ಹುಡುಗರ ಭರ್ಜರಿ ಅಭ್ಯಾಸ

Team India Practice: ಭಾರತೀಯ ಆಟಗಾರರು ಉತ್ಸಾಹದಿಂದ ಅಭ್ಯಾಸಕ್ಕೆ ಇಳಿದಿದ್ದು, ನೆಟ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ವಿಶೇಷ ಎಂದರೆ ಜೋಹಾನ್ಸ್ ಬರ್ಗ್​​ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. ಹಾಗಾಗಿ ಈ ಬಾರಿಯೂ ಗೆಲುವು ಓಲೈಸಿಕೊಂಡು ಚಾರಿತ್ರಿಕ ಸಾಧನೆ ಮಾಡುವ ಉತ್ಸಾಹದಲ್ಲಿದೆ.

South Africa vs India: ನ್ಯೂ ಇಯರ್ ಪಾರ್ಟಿ ಆಯ್ತು ಇದೀಗ ಪ್ರ್ಯಾಕ್ಟೀಸ್ ಸೆಷನ್: ನೆಟ್​ನಲ್ಲಿ ಕೊಹ್ಲಿ ಹುಡುಗರ ಭರ್ಜರಿ ಅಭ್ಯಾಸ
Team India Practice IND vs SA
Follow us
TV9 Web
| Updated By: Vinay Bhat

Updated on: Jan 02, 2022 | 8:33 AM

ಹೊಸ ವರ್ಷವನ್ನು (New Year) ಪಾರ್ಟಿ ಮಾಡಿ ಭರ್ಜರಿ ಆಗಿ ಸ್ವಾಗತಿಸಿದ ಭಾರತೀಯ ಆಟಗಾರರು ಈಗ ಮೈದಾನಕ್ಕೆ ಮರಳಿದ್ದಾರೆ. ಸೆಂಚುರಿಯನ್​ನಲ್ಲಿ ದಕ್ಷಿಣ ಆಫ್ರಿಕಾ (India vs South Africa) ವಿರುದ್ಧ ಮೊದಲ ಟೆಸ್ಟ್​ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಟೀಮ್ ಇಂಡಿಯಾ (Team India) ಇದೀಗ ಎರಡನೇ ಟೆಸ್ಟ್ ಕದನಕ್ಕೆ ಸಜ್ಜಾಗುತ್ತಿದೆ. ಜನವರಿ 3 ಸೋಮವಾರದಿಂದ ಜೋಹಾನ್ಸ್​ ಬರ್ಗ್​​ನಲ್ಲಿ ದ್ವಿತೀಯ ಟೆಸ್ಟ್ ಶುರುವಾಗಲಿದ್ದು ಹೊಸ ವರ್ಷದ ದಿನದಿಂದಲೇ ವಿರಾಟ್ ಕೊಹ್ಲಿ (Virat Kohli) ಪಡೆ ಅಭ್ಯಾಸ ಮಾಡಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ (Rahul Dravid) ಆಟಗಾರರನ್ನು ಒಟ್ಟುಗೂಡಿಸಿ ಕೆಲ ಟಿಪ್ಸ್ ನೀಡಿದ್ದಾರೆ. ಇದು ವರೆಗೆ ಆಫ್ರಿಕಾ ನೆಲದಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಗೆಲ್ಲದ ಭಾರತಕ್ಕೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಅತ್ಯುತ್ತಮ ಅವಕಾಶವಿದೆ.

ಟೀಮ್ ಇಂಡಿಯಾ ಸೆಂಚುರಿಯನ್​ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯವನ್ನು 113 ರನ್​ಗಳಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 1-0 ಯಲ್ಲಿ ಮುನ್ನಡೆ ಸಾಧಿಸಿತ್ತು. 2021ಅನ್ನು ಅವಿಸ್ಮರಣೀಯ ಗೆಲುವಿನೊಂದಿಗೆ ಮುಗಿಸಿರುವ ಕೊಹ್ಲಿ ಪಡೆ 2022ರಲ್ಲಿ ಅಭೂತಪರ್ವ ಜಯಕ್ಕಾಗಿ ಹಾತೊರೆಯುತ್ತಿದೆ. ಒಂದು ವೇಳೆ ಜೋಹನ್ಸ್​ಬರ್ಗ್​ನಲ್ಲಿ ಭಾರತ ಗೆದ್ದರೆ ಹರಿಣಗಳ ನಾಡಿನಲ್ಲಿ ಭಾರತಕ್ಕೆ ಚೊಚ್ಚಲ ಸರಣಿ ಗೆದ್ದಂತಾಗುತ್ತದೆ.

ಇದಕ್ಕಾಗಿ ಭಾರತೀಯ ಆಟಗಾರರು ಉತ್ಸಾಹದಿಂದ ಅಭ್ಯಾಸಕ್ಕೆ ಇಳಿದಿದ್ದು, ನೆಟ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ವಿಶೇಷ ಎಂದರೆ ಜೋಹಾನ್ಸ್ ಬರ್ಗ್​​ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. ಹಾಗಾಗಿ ಈ ಬಾರಿಯೂ ಗೆಲುವು ಓಲೈಸಿಕೊಂಡು ಚಾರಿತ್ರಿಕ ಸಾಧನೆ ಮಾಡುವ ಉತ್ಸಾಹದಲ್ಲಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟ್ವಿಟರ್ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾದ ಮೊದಲ ಅಭ್ಯಾಸ ಅವಧಿಯ ಚಿತ್ರಗಳನ್ನು ಹಂಚಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್ ಹಾಘೂ ವೃದ್ದಿಮಾನ್ ಸಾಹ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್​ಪ್ರೀತ್ ಬುಮ್ರಾ ಬೌಲಿಂಗ್​ ಪ್ರ್ಯಾಕ್ಟೀಸ್ ಮಾಡಿದರು.

ಭಾರತದ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್.

Pro Kabaddi League: ಪ್ರೋ ಕಬಡ್ಡಿ ಲೀಗ್​ನಲ್ಲೊಂದು ಅಚ್ಚರಿ: ಒಂದೇ ದಿನ ಮೂರು ಪಂದ್ಯ ಕೂಡ ರೋಚಕ ಡ್ರಾ

(Virat Kohli Indian cricket team hit the ground running on the first day of the New Year South Africa vs India)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ