Pro Kabaddi League: ಪ್ರೋ ಕಬಡ್ಡಿ ಲೀಗ್​ನಲ್ಲೊಂದು ಅಚ್ಚರಿ: ಒಂದೇ ದಿನ ಮೂರು ಪಂದ್ಯ ಕೂಡ ರೋಚಕ ಡ್ರಾ

Bengaluru Bulls vs Telugu Titans: ಪ್ರೋ ಕಬಡ್ಡಿ ಲೀಗ್ (Pro Kabaddi League) ಇತಿಹಾಸದಲ್ಲೇ ಇದು ಮೊದಲು ಯು ಮುಂಬಾ-ಯುಪಿ ಯೋಧ, ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ಮತ್ತು ದಬಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ನಡುವಿನ ಮೂರೂ ಪಂದ್ಯ ಕೂಡ ಡ್ರಾನಲ್ಲಿ ಅಂತ್ಯಕಂಡಿತು.

Pro Kabaddi League: ಪ್ರೋ ಕಬಡ್ಡಿ ಲೀಗ್​ನಲ್ಲೊಂದು ಅಚ್ಚರಿ: ಒಂದೇ ದಿನ ಮೂರು ಪಂದ್ಯ ಕೂಡ ರೋಚಕ ಡ್ರಾ
Pro Kabaddi League
Follow us
TV9 Web
| Updated By: Vinay Bhat

Updated on: Jan 02, 2022 | 7:23 AM

ಪ್ರೋ ಕಬಡ್ಡಿ ಲೀಗ್ (Pro Kabaddi League) ಇತಿಹಾಸದಲ್ಲೇ ಇದು ಮೊದಲು ಇರಬೇಕು. ಒಂದು ದಿನದಲ್ಲಿ ನಡೆದ ಮೂರು ಪಂದ್ಯ ಕೂಡ ರೋಚಕ ಡ್ರಾನಲ್ಲಿ ಅಂತ್ಯಕಂಡಿದ್ದು. ಹೌದು, ಶನಿವಾರ ನಡೆದ ಯು ಮುಂಬಾ-ಯುಪಿ ಯೋಧ (U Mumba vs UP Yoddh), ಬೆಂಗಳೂರು ಬುಲ್ಸ್‌-ತೆಲುಗು ಟೈಟಾನ್ಸ್‌ (Bengaluru Bulls vs Telugu Titans) ಮತ್ತು ಮೂರನೇ ದಬಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ (Dabang Delhi vs Tamil Thalaivas) ಪಂದ್ಯ ಎಲ್ಲವೂ ಟೈ ಆಯಿತು. ಕೊನೇ ಕ್ಷಣದ ವರೆಗೂ ರೋಚಕತೆ ಸೃಷ್ಟಿಸಿದ್ದ ಪಂದ್ಯ ಸಮಬಲ ಸಾಧಿಸಿ ಕೊನೆಗೊಂಡಿತು. ಯು ಮುಂಬಾ ಮತ್ತು ಯುಪಿ ಯೋಧ ನಡುವಿನ ಪಂದ್ಯ 28-28 ಅಂಕಗಳಿಂದ ಡ್ರಾನಲ್ಲಿ ಅಂತ್ಯಗೊಂಡಿತು. ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ಪಂದ್ಯ ಕೂಡ 34-34 ಅಂಕಗಳಿಂದ ಡ್ರಾ ಆಯಿತು. ಮೂರನೇ ಪಂದ್ಯದಲ್ಲಿ ದಬಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ಪಂದ್ಯ 30-30 ಅಂಕಗಳಿಂದ ಡ್ರಾ ಆಯಿತು.

ಯು ಮುಂಬಾ-ಯುಪಿ ಯೋಧ ನಡುವಿನ ಮೊದಲ ಮುಖಾಮುಖಿ ಸೀಟ್ ಎಡ್ಜ್ ಥ್ರಿಲ್ಲರ್ ಎಂಬಂತ್ತಿತ್ತು. ಎರಡೂ ತಂಡಗಳಲ್ಲಿ ಜಿದ್ದಾಜಿದ್ದಿ ಹೋರಾಟ ಕಂಡುಬಂತು. ವಿರಾಮದ ವೇಳೆ ಮುಂಬಾ 16-13 ಅಂತರದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ವಿರಾಮದ ಬಳಿಕ ಎರಡೂ ತಂಡಗಳ ಆಟಗಾರರು ಜಿದ್ದಿಗೆ ಬಿದ್ದವರಂತೆ ಆಡಿದರು. ಮುಂಬಾ ತುಸು ಮೇಲುಗೈ ಸಾಧಿಸಿತಾದರೂ ಯೋಧ ಸೋಲು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಯುಪಿ ರೈಡರ್‌ ಪದೀಪ್‌ ನರ್ವಾಲ್‌ (4 ಅಂಕ) ಲಯದಲ್ಲಿ ಇಲ್ಲದಿದ್ದುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಮತ್ತೋರ್ವ ರೈಡರ್‌ ಸುರೇಂದರ್‌ ಗಿಲ್‌ (8 ಅಂಕ), ಡಿಫೆಂಡರ್‌ ಸುಮಿತ್‌ (6 ಅಂಕ) ಉತ್ತಮ ಪ್ರದರ್ಶನವಿತ್ತರು. ಮುಂಬಾ ಪರ ಅಜಿತ್‌ ರೈಡಿಂಗ್‌ನಲ್ಲಿ ಮಿಂಚಿ 9 ಅಂಕ ತಂದಿತ್ತರು. ಅಭಿಷೇಕ್‌ ಸಿಂಗ್‌ ಮತ್ತು ರಿಂಕು ತಲಾ 4 ಅಂಕ ಗಳಿಸಿದರು.

ಬೆಂಗಳೂರು ಬುಲ್ಸ್​ಗೆ ರೋಚಕ ಟೈ:

ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ರೋಚಕ ಕಾದಾಟದಲ್ಲಿ ಕಡೆಯ ನಿಮಿಷ ಬೆಂಗಳೂರಿನ ನಾಯಕ ಪವನ್ ಶೆರವತ್, ಟೈಟಾನ್ಸ್ ನಾಯಕ ರೋಹಿತ್ ಕುಮಾರ್ ಅವರನ್ನು ಹಿಡಿಯುವ ಮೂಲಕ ಪಂದ್ಯವನ್ನು 34-34 ಅಂಕಗಳಿಂದ ಟೈ ಗೊಳಿಸಲು ಯಶಸ್ವಿಯಾದರು. ಪಂದ್ಯದ ಮೊದಲ 10 ನಿಮಿಷಗಳ ಆಟದಲ್ಲಿ ಟೈಟಾನ್ಸ್ ತಂಡವೇ ಮೇಲುಗೈ ಸಾಧಿಸಿತ್ತು. ಆದರೆ ನಂತರ ತಿರುಗೇಟು ನೀಡುತ್ತ ಸಾಗಿದ ಬುಲ್ಸ್ ತಂಡ ಮೊದಲಾರ್ಧದ ಅಂತ್ಯದ ವೇಳೆಗೆ 14-12ರಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಾಯಕ ಪವನ್ ಶೆರಾವತ್ ಆರಂಭಿಕ ರೈಡ್‌ಗಳಲ್ಲಿ ವೈಫಲ್ಯ ಕಂಡಿದ್ದು ಬುಲ್ಸ್‌ಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಬೆಂಗಳೂರು ಪರ ಚಂದ್ರನ್ ರಂಜಿತ್ 3 ರೈಡ್, 6 ಬೋನಸ್ ಪಾಯಿಂಟ್ ಸೇರಿ ಒಟ್ಟು 9 ಅಂಕಗಳಿಸಿದರೆ, ಟೈಟಾನ್ಸ್ ಪರ ಅಂಕಿತ್ ಬೇನಿವಾಲ್ 10 ರೈಡ್ ಪಾಯಿಂಟ್ ಗಳಿಸಿ ಮಿಂಚಿದರು. ಆದರೆ ಜಿದ್ದಾಜಿದ್ದಿನ ಕಾದಾಟ ಕೊನೆಗೆ ಸಮಬಲ ಸಾಧಿಸಿ ಅಭಿಮಾನಿಗಳಿಗೆ ಕಬಡ್ಡಿ ರಸದೌತಣವನ್ನು ಉಣಬಡಿಸಿತು.

ಡೆಲ್ಲಿ-ತಲೈವಾಸ್ ಸಮಬಲ:

ದಬಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ನಡುವಿನ ಕೊನೆಯ ಪಂದ್ಯ ನವೀನ್ vs ತಮಿಳ್ ತಲೈವಾಸ್ ಎಂಬಂತಾಗಿತ್ತು. ನವೀನ್ ಸತತ 26ನೇ ಬಾರಿ ಸೂಪರ್10 ಅಂಕ ಗಳಿಸಿ ತಮ್ಮ ದಾಖಲೆಯ ಓಟವನ್ನು ಮುಂದುವರಿಸಿದರು. ಆದರೆ, ತಮಿಳ್ ತಲೈವಾಸ್ ವೀರೋಚಿತ ಹೋರಾಟ ತೋರಿತು. ಸರಾಗವಾಗಿ ಸ್ಕೋರ್ ಮಾಡುತ್ತಿದ್ದ ನವೀನ್ ಕುಮಾರ್ ಅವರನ್ನ ಮೂರು ಬಾರಿ ಕೆಡವಿ ಹಾಕಿದರು. ತಮಿಳ್ ತಂಡದ ಡಿಫೆನ್ಸ್​ನಲ್ಲಿ ಇದ್ದ ಸಾಗರ್ ಪ್ರದರ್ಶನ ಅಮೋಘವಾಗಿತ್ತು. ಜೊತೆಗೆ ಮೋಹಿತ್ ಮತ್ತು ಸುರ್ಜೀತ್ ಅವರೂ ಒಳ್ಳೊಳ್ಳೆಯ ಟ್ಯಾಕಲ್ ಮಾಡಿದರು. ಡೆಲ್ಲಿ ತಂಡ ಮೊದಲಾರ್ಧದಲ್ಲಿ 16-14ರಿಂದ ಮುನ್ನಡೆ ಸಾಧಿಸಿದ್ದರೂ, ದ್ವಿತೀಯಾರ್ಧದಲ್ಲಿ ತಿರುಗೇಟು ಎದುರಿಸಿತು. ಅಂತಿಮವಾಗಿ ತಮಿಳ್ ತಲೈವಾಸ್ ಈ ಪಂದ್ಯವನ್ನ 30-30 ಅಂಕಗಳಿಂದ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

IPL ನಲ್ಲಿ ಒಂದೇ ಒಂದು ಫೋರ್ ಬಾರಿಸದೇ ಅರ್ಧಶತಕ ಸಿಡಿಸಿದ ಐವರು ಆಟಗಾರರು ಯಾರು ಗೊತ್ತಾ?

(Dabang Delhi vs Tamil Thalaivas Bengaluru Bulls vs Telugu Titans and U Mumba and UP Yoddha all play out ties in PKL 8)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ