- Kannada News Photo gallery Cricket photos IPL 2022: 5 times a batsman completed his 50 without hitting a four in tournament history
IPL ನಲ್ಲಿ ಒಂದೇ ಒಂದು ಫೋರ್ ಬಾರಿಸದೇ ಅರ್ಧಶತಕ ಸಿಡಿಸಿದ ಐವರು ಆಟಗಾರರು ಯಾರು ಗೊತ್ತಾ?
IPL Records: ಶೆಲ್ಡನ್ ಕಾಟ್ರೆಲ್ ಓವರ್‌ನಲ್ಲಿ ಐದು ಸಿಕ್ಸ್ಗಳನ್ನು ಬಾರಿಸುವ ಮೂಲಕ ತೆವಾಟಿಯಾ ರಾಜಸ್ಥಾನ್ ರಾಯಲ್ಸ್ಗೆ ರೋಚಕ ಜಯ ತಂದುಕೊಟ್ಟಿದ್ದರು.
Updated on: Jan 01, 2022 | 10:36 PM

ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿ ಕೆಲ ದಾಖಲೆಗಳು ಅಪರೂಪದಲ್ಲಿ ಅಪರೂಪ ಎನಿಸಿಕೊಂಡಿದೆ. ಏಕೆಂದರೆ ಕಳೆದ 14 ಸೀಸನ್ ಐಪಿಎಲ್‌ನಲ್ಲಿ ಐವರು ಬ್ಯಾಟರ್ಗಳು ಮಾತ್ರ ಒಂದೇ ಒಂದು ಫೋರ್ ಬಾರಿಸದೇ ಅರ್ಧಶತಕ ಸಿಡಿಸಿದ್ದಾರೆ. ಹೀಗೆ ಬಲು ಅಪರೂಪ ಎನಿಸುವ ಈ ದಾಖಲೆಯನ್ನು ಬರೆದ ಆಟಗಾರರ ಪಟ್ಟಿ ಹೀಗಿದೆ.

5. ರಾಹುಲ್ ತೆವಾಟಿಯಾ: ರಾಜಸ್ಥಾನ ರಾಯಲ್ಸ್ ತಂಡದ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಐಪಿಎಲ್ 2020 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಅದ್ಭುತ ಪ್ರದರ್ಶನ ನೀಡಿದ್ದರು. ಶೆಲ್ಡನ್ ಕಾಟ್ರೆಲ್ ಓವರ್‌ನಲ್ಲಿ ಐದು ಸಿಕ್ಸ್ಗಳನ್ನು ಬಾರಿಸುವ ಮೂಲಕ ತೆವಾಟಿಯಾ ರಾಜಸ್ಥಾನ್ ರಾಯಲ್ಸ್ಗೆ ರೋಚಕ ಜಯ ತಂದುಕೊಟ್ಟಿದ್ದರು. ಈ ವೇಳೆ 31 ಎಸೆತಗಳಲ್ಲಿ 53 ಬಾರಿಸಿದ್ದ ತೆವಾಟಿಯಾ ಒಂದೇ ಒಂದು ಫೋರ್ ಬಾರಿಸಿರಲಿಲ್ಲ ಎಂಬುದು ವಿಶೇಷ.

4. ನಿತೀಶ್ ರಾಣಾ: ಕಳೆದ ಸೀಸನ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ನಿತೀಶ್ ರಾಣಾ ಐಪಿಎಲ್ ಹತ್ತನೇ ಆವೃತ್ತಿಯಲ್ಲಿ (2017) ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಈ ವೇಳೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ರಾಣಾ ಕೇವಲ 34 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸಿದ್ದರು. ಈ ಭರ್ಜರಿ ಇನಿಂಗ್ಸ್ನಲ್ಲಿ ನಿತೀಶ್ ರಾಣಾ 7 ಸಿಕ್ಸ್ ಸಿಡಿಸಿದರೂ ಒಂದೇ ಒಂದು ಫೋರ್ ಬಾರಿಸಿರಲಿಲ್ಲ ಎಂಬುದು ವಿಶೇಷ.

3. ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 2018 ರಲ್ಲಿ ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಅಬ್ಬರಿಸಿದ್ದರು. 45 ಎಸೆತಗಳಲ್ಲಿ ಅಜೇಯ 92 ರನ್ ಬಾರಿಸಿದ್ದ ಸ್ಯಾಮ್ಸನ್ ಹತ್ತು ಸಿಕ್ಸರ್ಗಳನ್ನು ಸಿಡಿಸಿದ್ದರು. ಇನ್ನು ಈ ಇನಿಂಗ್ಸ್ನಲ್ಲಿ ಫೋರ್ ಬಾರಿಸದೇ ಅರ್ಧಶತಕ ಪೂರೈಸಿದ್ದ ಸ್ಯಾಮ್ಸನ್ ಅರ್ಧಶತಕದ ಬಳಿಕ ಬೌಂಡರಿ ಬಾರಿಸಿದ್ದರು.

2. ಡೇವಿಡ್ ಮಿಲ್ಲರ್: 2014 ರ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಆಡಿದ್ದ ಡೇವಿಡ್ ಮಿಲ್ಲರ್ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ಈ ಇನಿಂಗ್ಸ್ನಲ್ಲಿ ಮಿಲ್ಲರ್ ಬ್ಯಾಟ್ನಿಂದ 6 ಸಿಕ್ಸ್ ಸಿಡಿದರೂ ಒಂದೇ ಒಂದು ಫೋರ್ ಬಂದಿರಲಿಲ್ಲ.

1. ಸಂಜು ಸ್ಯಾಮ್ಸನ್: IPL 2017 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಗುಜರಾತ್ ಲಯನ್ಸ್ ವಿರುದ್ಧ 31 ಎಸೆತಗಳಲ್ಲಿ 61 ರನ್ ಬಾರಿಸಿದ್ದರು. ಈ ವೇಳೆ ಸ್ಯಾಮ್ಸನ್ ಬ್ಯಾಟ್ನಿಂದ 7 ಭರ್ಜರಿ ಸಿಕ್ಸ್ ಮೂಡಿಬಂದಿತ್ತು. ಆದರೆ ಸ್ಯಾಮ್ಸನ್ ಒಂದೇ ಒಂದು ಫೋರ್ ಬಾರಿಸಿರಲಿಲ್ಲ ಎಂಬುದು ವಿಶೇಷ.
