‘418’ ಟ್ರೈಲರ್ ರಿಲೀಸ್, ಇದು ನಿಜಕ್ಕೂ ಭೀಕರ, ಭಯಾನಕ

‘418’ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾದಲ್ಲಿರುವ ಭಯಾನಕ ಹಾರರ್ ಅಂಶದ ಬಗ್ಗೆ ಮೊದಲಿನಿಂದಲೂ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಸಿನಿಮಾದ ಟ್ರೈಲರ್ ಆ ಎಲ್ಲ ಸುದ್ದಿಗಳನ್ನು ಖಾತ್ರಿಪಡಿಸಿದೆ. ಸಿನಿಮಾದ ಟ್ರೈಲರ್​​ನಲ್ಲಿಯೇ ಚಿತ್ರದಲ್ಲಿ ಇರಬಹುದಾದ ಭಯಾನಕ ಹಾರರ್ ಅಂಶಗಳ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ. ಹಲವು ಹಾರರ್ ಮತ್ತು ಥ್ರಿಲ್ಲರ್ ಅಂಶಗಳನ್ನು ಸಿನಿಮಾ ಒಳಗೊಂಡಿರುವುದು ಟ್ರೈಲರ್​​ನಿಂದಲೇ ತಿಳಿಯುತ್ತದೆ.

‘418’ ಟ್ರೈಲರ್ ರಿಲೀಸ್, ಇದು ನಿಜಕ್ಕೂ ಭೀಕರ, ಭಯಾನಕ
418 Movie Trailer

Updated on: Oct 20, 2026 | 11:38 AM

ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿರುವ ಹಾರರ್ ಸಿನಿಮಾ ‘418’ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾದಲ್ಲಿರುವ ಭಯಾನಕ ಹಾರರ್ ಅಂಶದ ಬಗ್ಗೆ ಮೊದಲಿನಿಂದಲೂ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಸಿನಿಮಾದ ಟ್ರೈಲರ್ ಆ ಎಲ್ಲ ಸುದ್ದಿಗಳನ್ನು ಖಾತ್ರಿಪಡಿಸಿದೆ. ಸಿನಿಮಾದ ಟ್ರೈಲರ್​​ನಲ್ಲಿಯೇ ಚಿತ್ರದಲ್ಲಿ ಇರಬಹುದಾದ ಭಯಾನಕ ಹಾರರ್ ಅಂಶಗಳ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ. ಹಲವು ಹಾರರ್ ಮತ್ತು ಥ್ರಿಲ್ಲರ್ ಅಂಶಗಳನ್ನು ಸಿನಿಮಾ ಒಳಗೊಂಡಿರುವುದು ಟ್ರೈಲರ್​​ನಿಂದಲೇ ತಿಳಿಯುತ್ತದೆ.

‘418’ ಎಂಬುದು ರೂಂ ಸಂಖ್ಯೆ. 18 ವರ್ಷಗಳಿಂದ ಬಂದ್ ಆಗಿರುವ 418 ರೂಂ ಬಾಗಿಲು ತೆಗೆದಾಗ ನಡೆಯುವ ಭಯಾನಕ ಸಂಗತಿಗಳ ಕತೆಯನ್ನು ‘418’ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಚೈತ್ರಾ ಆಚಾರ್, ರಮೇಶ್ ಇಂದಿರಾ ಸೇರಿದಂತೆ ಹಲವು ಪ್ರತಿಭಾವಂತ ನಟ-ನಟಿಯರು ಇದ್ದಾರೆ. ಕೆಲ ಹೊಸ ಪ್ರತಿಭೆಗಳು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾದ ಟ್ರೈಲರ್​​ನಲ್ಲಿ ತೋರಿಸಿರುವಂತೆ ಸಿನಿಮಾದ ಬಹುತೇಕ ಭಾಗ ಕತ್ತಲಲ್ಲಿಯೇ ಚಿತ್ರೀಕರಣ ಆದಂತಿದೆ. ರಕ್ತ ಸಿಕ್ತ ಮುಖಗಳಂತೂ ಟ್ರೈಲರ್ ಉದ್ದಕ್ಕೂ ಇವೆ.

ಪ್ರಶಾಂತ್ ನೀಲ್ ಈ ಸಿನಿಮಾ ಅನ್ನು ಪ್ರೆಸೆಂಟ್ ಮಾಡುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಸಿನಿಮಾ ಅನ್ನು ಕೀರ್ತನ್ ನಾಡಗೌಡ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ವೆಂಕಿ ಜಿಜಿ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಅಕ್ಟೋಬರ್ 23ಕ್ಕೆ ರಿಲೀಸ್ ಆಗಲಿದೆ.

ಇದನ್ನೂ ಓದಿ:ಕೊನೆಗೂ ಸಿಬಿಎಫ್​​ಸಿ ಪರೀಕ್ಷೆ ಪಾಸಾಯ್ತು ಪ್ರಶಾಂತ್ ನೀಲ್ ಸಿನಿಮಾ

‘418’ ಸಿನಿಮಾ ಕಳೆದ ಕೆಲ ವಾರಗಳಿಂದಲೂ ಸುದ್ದಿಯಲ್ಲಿದೆ. ಸಿನಿಮಾನಲ್ಲಿ ಇರುವ ಭಯಾನಕತೆಯ ಕಾರಣಕ್ಕೆ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರವನ್ನೇ ನೀಡಲಾಗಿರಲಿಲ್ಲ. ಬಳಿಕ ಸಿನಿಮಾದ ಹಲವು ಭಯಾನಕ ಹಾರರ್ ಮತ್ತು ವಯಲೆಂಟ್ ದೃಶ್ಯಗಳನ್ನು ಕತ್ತರಿಸಿದ ಬಳಿಕ ಇದೀಗ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us