AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಸಿಬಿಎಫ್​​ಸಿ ಪರೀಕ್ಷೆ ಪಾಸಾಯ್ತು ಪ್ರಶಾಂತ್ ನೀಲ್ ಸಿನಿಮಾ

ಪ್ರಶಾಂತ್ ನೀಲ್ ಅವರ ಸಿನಿಮಾಗಳು ಸಿಬಿಎಫ್​​ಸಿಯಿಂದ ಪ್ರಮಾಣ ಪತ್ರ ನಿರಾಕರಣೆಗೆ ಒಳಪಟ್ಟಿಲ್ಲ. ಆದರೆ ಇದೀಗ ಅವರೇ ಪ್ರೆಸೆಂಟ್ ಮಾಡುತ್ತಿರುವ ಹೊಸ ಸಿನಿಮಾ ಒಂದು ಸಿಬಿಎಫ್​​ಸಿಯಿಂದ ಪ್ರಮಾಣ ಪತ್ರ ನಿರಾಕರಣೆಗೆ ಒಳಗಾಗಿಗಿತ್ತು. ‘418’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡುವುದಿಲ್ಲ ಎಂದಿತ್ತು. ಆದರೆ ಕೊನೆಗೂ ಸಿನಿಮಾಕ್ಕೆ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.

ಕೊನೆಗೂ ಸಿಬಿಎಫ್​​ಸಿ ಪರೀಕ್ಷೆ ಪಾಸಾಯ್ತು ಪ್ರಶಾಂತ್ ನೀಲ್ ಸಿನಿಮಾ
418 Movie
ಮಂಜುನಾಥ ಸಿ.
|

Updated on: Sep 10, 2026 | 12:28 PM

Share

ಮುಖ್ಯಾಂಶಗಳು

  • ಪ್ರಶಾಂತ್ ನೀಲ್ ಪ್ರಸ್ತುತ ಪಡಿಸಿರುವ ಸಿನಿಮಾ
  • ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿರಲಿಲ್ಲ
  • ಆದರೆ ಕೊನೆಗೂ ಪ್ರಮಾಣ ಪತ್ರ ನೀಡಲಾಗಿದೆ.

ಪ್ರಶಾಂತ್ ನೀಲ್ (Prashant Neel) ಸಿನಿಮಾಗಳಲ್ಲಿ ಸಾಕಷ್ಟು ಆಕ್ಷನ್, ಹಿಂಸಾಚಾರದ ದೃಶ್ಯಗಳು ಇರುತ್ತವೆ. ಆದರೆ ಅವರ ಸಿನಿಮಾಗಳೆಂದೂ ಸಿಬಿಎಫ್​​ಸಿಯಲ್ಲಿ ಸಮಸ್ಯೆಗೆ ಒಳಪಟ್ಟಿಲ್ಲ. ಎಲ್ಲವನ್ನೂ ತುಸು ಮಿತಿಯಲ್ಲಿಯೇ ಚಿತ್ರೀಕರಣ ಮಾಡುತ್ತಾರೆ ಪ್ರಶಾಂತ್ ನೀಲ್. ಆದರೆ ಇತ್ತೀಚೆಗೆ ಪ್ರಶಾಂತ್ ನೀಲ್ ಪ್ರಸ್ತುತ ಪಡಿಸುತ್ತಿರುವ ಸಿನಿಮಾ ಒಂದು ಸಿಬಿಎಫ್​​ಸಿಯಲ್ಲಿ ಸಿಲುಕಿಕೊಂಡಿತ್ತು. ಸಿಬಿಎಫ್​​ಸಿಯು, ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿತ್ತು. ಆದರೆ ಇದೀಗ ಕೊನೆಗೂ ಸಿನಿಮಾಕ್ಕೆ ಪ್ರಮಾಣ ಪತ್ರ ದೊರೆತಿದೆ. ಯಾವುದು ಆ ಸಿನಿಮಾ? ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದು ಏಕೆ?

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿ, ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡುತ್ತಿರುವ ‘418’ ಹೆಸರಿನ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಆದರೆ ಈ ಸಿನಿಮಾಕ್ಕೆ ಸಿಬಿಎಫ್​​ಸಿಯು ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿತ್ತು. ‘418’ ಒಂದು ಹಾರರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಅತಿಯಾಗಿ ಹೆದರಿಸುವ ದೃಶ್ಯಗಳಿವೆ. ಸಿನಿಮಾನಲ್ಲಿರುವ ಹಾರರ್ ದೃಶ್ಯಗಳು ಎಲ್ಲ ವಯೋವರ್ಗದ ಪ್ರೇಕ್ಷಕರಿಗೂ ಸಮಸ್ಯೆ ಉಂಟು ಮಾಡಬಲ್ಲವು ಎಂಬ ಕಾರಣ ನೀಡಿ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡಿರಲಿಲ್ಲ. ಆದರೆ ಇದೀಗ ಕೆಲ ಬದಲಾವಣೆಗಳ ಬಳಿಕ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ.

‘418’ ಸಿಸಿನಿಮಾವನ್ನು ಕೀರ್ತನ್ ನಾಡಗೌಡ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿದ್ದಾರೆ. ಇದೊಂದು ಬಲು ಗಂಭೀರ ಹಾರರ್ ಥ್ರಿಲ್ಲರ್ ಆಗಿದ್ದು, ಸಿನಿಮಾನಲ್ಲಿ ಕೇವಲ ಹಾರರ್ ಮತ್ತು ಥ್ರಿಲ್ಲರ್ ಅಂಶಗಳು ಮಾತ್ರವೇ ಇವೆಯಂತೆ. ಇತ್ತೀಚೆಗೆ ಬರುತ್ತಿರುವ ಹಾರರ್ ಸಿನಿಮಾಗಳಲ್ಲಿ ಕಾಮಿಡಿ, ರೊಮ್ಯಾನ್ಸ್ ಇನ್ನಿತರೆ ಅಂಶಗಳನ್ನು ಸೇರಿಸಲಾಗುತ್ತದೆ. ಆದರೆ ಈ ಸಿನಿಮಾನಲ್ಲಿ ಮೊದಲಿನಿಂದ ಕೊನೆಯ ವರೆಗೆ ಕೇವಲ ಹಾರರ್ ಅಂಶಗಳೇ ಇವೆ ಎನ್ನಲಾಗಿದೆ. ತೀರಾ ಭಯಗೊಳಿಸುವ ದೃಶ್ಯಗಳು, ವಾತಾವರಣ, ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತಗಳಿಂದಾಗಿ ಸಿನಿಮಾ ಪ್ರೇಕ್ಷಕರನ್ನು ಸಾಕಷ್ಟು ಭೀತಿಗೆ ಒಳಪಡಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ:‘ಎಲ್ಲ ರೆಡಿ ಇದೆ’: ‘ಕೆಜಿಎಫ್ 3’ ಬಗ್ಗೆ ಪ್ರಶಾಂತ್ ನೀಲ್ ಮಾತು

ಸೆನ್ಸಾರ್ ಸಮಸ್ಯೆ ಉಂಟಾದ ಬಳಿಕ ಚಿತ್ರತಂಡವು ಸಾಕಷ್ಟು ದೃಶ್ಯಗಳನ್ನು ಬದಲಾಯಿಸಿ, ಹಿನ್ನೆಲೆ ಸಂಗೀತಗಳನ್ನು ಕಡಿಮೆ ಮಾಡಿ ಒಟ್ಟಾರೆಯಾಗಿ ತುಸು ಹಾರರ್ ಅಂಶಗಳನ್ನು ಕಡಿಮೆ ಮಾಡಿದ್ದು, ಇದೇ ಕಾರಣಕ್ಕೆ ಇದೀಗ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿದೆ. ಸಿನಿಮಾ ಸೆಪ್ಟೆಂಬರ್ 18ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ಪೋಸ್ಟರ್​​ಗಳು ಸಹ ಸಾಕಷ್ಟು ಭಯಾನಕವಾಗಿವೆ. ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತ ಬಗ್ಗೆ ಬಿಡುಗಡೆ ಆದ ಪೋಸ್ಟನಲ್ಲಿ ಸಹ, ವ್ಯಕ್ತಿಯೊಬ್ಬ ರಕ್ತದಲ್ಲಿ ‘ಎ’ ಬರೆದಿರುವ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಪ್ರಶಾಂತ್ ನೀಲ್ ಶಿಷ್ಯ ನಿರ್ದೇಶಿಸಿರುವ ಸಿನಿಮಾ ಇದೆನ್ನಲಾಗುತ್ತಿದೆ.

ಪ್ರಶಾಂತ್ ನೀಲ್ ಪ್ರಸ್ತುತ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅದಾದ ಬಳಿಕ ಅವರು ‘ಸಲಾರ್ 2’ ನಿರ್ದೇಶಿಸಲಿದ್ದಾರೆ. ತಮಿಳಿನ ಅಜಿತ್ ಅವರೊಟ್ಟಿಗೆ ಸಿನಿಮಾ ಒಂದನ್ನು ಮಾಡಲಿದ್ದಾರೆ. ಅದಾದ ಬಳಿಕ ‘ಕೆಜಿಎಫ್ 3’ ಸಿನಿಮಾ ಅನ್ನು ಅವರು ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ಮೂರ್ತಿ ಧ್ವಂಸ!
ಹುಬ್ಬಳ್ಳಿಯ ಜೈನ ಮಂದಿರದಲ್ಲಿ ದರೋಡೆ: ಮುಸುಕುಧಾರಿಗಳಿಂದ ಮೂರ್ತಿ ಧ್ವಂಸ!
ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಸಿಎಂ ನಿವಾಸದ ಬಳಿ ಪೊಲೀಸರ ಮೇಲೆಯೇ ಶಾಸಕ ಕೊತ್ತೂರು ಮಂಜುನಾಥ್ ಗರಂ
ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್ ಜಾಮ್!
ಬೆಂಗಳೂರು- ಹೊಸೂರು ಹೆದ್ದಾರಿಯಲ್ಲಿ ಫುಲ್‌ ಟ್ರಾಫಿಕ್ ಜಾಮ್!
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು