ದೊಣ್ಣೆ ನಾಯಕನ ವಿರುದ್ಧ ಸಮರ ನಿರಂತರ: ಸ್ವಪಕ್ಷದ ಹಿರಿಯ ನಾಯಕನ ವಿರುದ್ಧವೇ ತಿರುಗಿ ಬಿದ್ದ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಅಲ್ಲಿನ ಸ್ಥಳೀಯ ಕಾಂಗ್ರೆಸ್ ಮುಖಂಡರ ಮಧ್ಯೆ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ಮಧ್ಯೆ ನೇರ ಹಣಾಹಣಿ ಶುರುವಾಗಿದ್ದು, ಈ ಸಂಬಂಧ ಎಂ.ಸಿ.ಸುಧಾಕರ್ ನೇತೃತ್ವದ ನಿಯೋಗ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಗೆ ದೂರು ನೀಡಿದೆ. ಇದರ ಬೆನ್ನಲ್ಲೇ ಎಂ.ಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಸಮರ ಸಾರಿದ್ದಾರೆ.

ಚಿಕ್ಕಬಳ್ಳಾಪುರ, (ಅಕ್ಟೋಬರ್ 05): ಸ್ವಪಕ್ಷದ ಶಾಸಕ ಎಂ.ಸಿ.ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಸಮರ ಸಾರಿದ್ದಾರೆ. ಎರಡು ದಿನಗಳ ಹಿಂದೆ, ಟ್ವೀಟ್ ಮೂಲಕ, ಪರೋಕ್ಷವಾಗಿ ಚಿಂತಾಮಣಿ ಕಾಂಗ್ರೆಸ್ ಶಾಸಕರ ವಿರುದ್ದ ಗುಡುಗಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ , ಇಂದು (ಅ.5) ಮತ್ತೆ ’ಚಿಂತಾಮಣಿಯ ದೊಣ್ಣೆ ನಾಯಕ’ ಎಂದು ಟ್ವೀಟ್ ಸಮರ ಮುಂದುವರಿಸಿದ್ದಾರೆ. ಇಲ್ಲಿ ಚಿಂತಾಮಣಿ ದೊಣ್ಣೆನಾಯಕ ಎಂದು ಅವರು ಹೇಳಿದ್ದು ತಮ್ಮ ಪಕ್ಷದ ಶಾಸಕ ಎಂ.ಸಿ.ಸುಧಾಕರ್ ಅವರಿಗೆ. ಹಾಗಿದ್ದಾಗ್ಯೂ ಅವರೆಲ್ಲೂ ಸುಧಾಕರ್ ಹೆಸರನ್ನ ಬಳಸಿಲ್ಲ. ಇದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸೌಮ್ಯ ಸ್ವಭಾವದ ವ್ಯಕ್ತಿ ನಾನಲ್ಲ ಎಂದ ಪ್ರದೀಪ್ ಈಶ್ವರ್
ಇದೀಗ ಮತ್ತೆ ಸುಧಾರ್ ಅವರನ್ನೇ ಟಾರ್ಗೆಟ್ ಮಾಡಿ ಟ್ವೀಟ್ ಮಾಡಿರುವ ಪ್ರದೀಪ್ ಈಶ್ವರ್, ʼಚಿಂತಾಮಣಿಯ ದೊಣ್ಣೆ ನಾಯಕನಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಕೋಲಾರದ ಮಾಜಿ ಸಂಸದರು ಮತ್ತು ನಮ್ಮ ರಾಜ್ಯ ಸರ್ಕಾರದ ಇಂದಿನ ಸಚಿವರಾದ ಕೆ.ಎಚ್. ಮುನಿಯಪ್ಪನವರನ್ನ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ target ಮಾಡುತ್ತಾ ಬಂದಿದ್ದೀರ. ಅವರ ಕುಟುಂಬದ ವ್ಯಕ್ತಿಗೆ ticket ಕೊಡಬಾರದೆಂದು ಹಠಕ್ಕೆ ಬಿದ್ದು ಟಿಕೆಟ್ ತಪ್ಪಿಸಿದ್ದೀರ ಮತ್ತು ಶಿಡ್ಲಘಟ್ಟಾದ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ರಾಜುಗೌಡರನ್ನ ವಿನಾಕಾರಣ ಟಾರ್ಗೆಟ್ ಮಾಡಿ ಆತನ ರಾಜಕೀಯ ಭವಿಷ್ಯವನ್ನು ಮುಗಿಸಿದ್ದೀರ. ಈಗ ಚಿಕ್ಕಬಳ್ಳಾಪುರಕ್ಕೆ ನೀವು ಪಾದಾರ್ಪಣೆ ಮಾಡುತ್ತಿದ್ದೀರ. ದೊಣ್ಣೆ ನಾಯಕನಿಗೆ ಹೇಳಲು ಬಯಸುತ್ತೇನೆ, ಕೆ.ಎಚ್. ಮುನಿಯಪ್ಪನವರಷ್ಟು ಸೌಮ್ಯ ಸ್ವಭಾವದ ವ್ಯಕ್ತಿ ನಾನಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ತಣ್ಣಗಾಗದ ಕಾಂಗ್ರೆಸ್ ಮನೆಯಲ್ಲಿನ ಮುನಿಸು: ಸ್ಫೋಟಗೊಂಡ ಆಂತರಿಕ ಭಿನ್ನಾಭಿಪ್ರಾಯಗಳು
ಚಿಂತಾಮಣಿಯ ದೊಣ್ಣೆ ನಾಯಕನಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಕೋಲಾರದ ಮಾಜಿ ಸಂಸದರು ಮತ್ತು ನಮ್ಮ ರಾಜ್ಯ ಸರ್ಕಾರದ ಇಂದಿನ ಸಚಿವರಾದ ಕೆ.ಎಚ್. ಮುನಿಯಪ್ಪನವರನ್ನ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ target ಮಾಡುತ್ತಾ ಬಂದಿದ್ದೀರ. ಅವರ ಕುಟುಂಬದ ವ್ಯಕ್ತಿಗೆ ticket ಕೊಡಬಾರದೆಂದು ಹಠಕ್ಕೆ ಬಿದ್ದು ticket ತಪ್ಪಿಸಿದ್ದೀರ ಮತ್ತು ಶಿಡ್ಲಘಟ್ಟಾದ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದ ರಾಜುಗೌಡರನ್ನ ವಿನಾಕಾರಣ target ಮಾಡಿ ಆತನ ರಾಜಕೀಯ ಭವಿಷ್ಯವನ್ನು ಮುಗಿಸಿದ್ದೀರ. ಈಗ ಚಿಕ್ಕಬಳ್ಳಾಪುರಕ್ಕೆ ನೀವು ಪಾದಾರ್ಪಣೆ ಮಾಡುತ್ತಿದ್ದೀರ.
ದೊಣ್ಣೆ ನಾಯಕನಿಗೆ ಹೇಳಲು ಬಯಸುತ್ತೇನೆ, ಕೆ.ಎಚ್. ಮುನಿಯಪ್ಪನವರಷ್ಟು ಸೌಮ್ಯ ಸ್ವಭಾವದ ವ್ಯಕ್ತಿ ನಾನಲ್ಲ. ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಬಿಸಾಕಿ ಮಾತುಕತೆಗೆ ಬರುವ ವ್ಯಕ್ತಿತ್ವ ನನ್ನದು. ನಿಮ್ಮ ತಾಕತ್ತು ಎಷ್ಟಿದೆಯೋ ಅಷ್ಟು ಬಿಸಾಕಿ. ನಾನು ಹತ್ತರಷ್ಟು ತಿರುಗಿಸಿ ಕೊಡುವುದು ನನಗೆ ಗೊತ್ತಿದೆ. ದೊಣ್ಣೆ ನಾಯಕನಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಿಮ್ಮ ವಿರುದ್ಧ ಸಮರ ನಿರಂತರ.
— Pradeep Eshwar (@Pradeep__Eshwar) October 5, 2026
ದೊಣ್ಣೆ ನಾಯಕನಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಿಮ್ಮ ವಿರುದ್ಧ ಸಮರ ನಿರಂತರ
ಒಂದು ಕಲ್ಲು ಬಿದ್ದರೆ ಹತ್ತು ಕಲ್ಲು ಬಿಸಾಕಿ ಮಾತುಕತೆಗೆ ಬರುವ ವ್ಯಕ್ತಿತ್ವ ನನ್ನದು. ನಿಮ್ಮ ತಾಕತ್ತು ಎಷ್ಟಿದೆಯೋ ಅಷ್ಟು ಬಿಸಾಕಿ. ನಾನು ಹತ್ತರಷ್ಟು ತಿರುಗಿಸಿ ಕೊಡುವುದು ನನಗೆ ಗೊತ್ತಿದೆ. ದೊಣ್ಣೆ ನಾಯಕನಿಗೆ ಮತ್ತೊಮ್ಮೆ ಹೇಳುತ್ತಿದ್ದೇನೆ ನಿಮ್ಮ ವಿರುದ್ಧ ಸಮರ ನಿರಂತರʼ ಎಂದಿದ್ದಾರೆ.
ಅತಿ ಶೀಘ್ರದಲ್ಲೇ ಸ್ಫೋಟಕ ಮಾಹಿತಿ ನೀಡುತ್ತೇನೆ
ಚಿಂತಾಮಣಿ ತಾಲೂಕಿನ ಪ್ರಭಾವಿ ರಾಜಕಾರಣಿಯೊಬ್ಬ ಮತ್ತು ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ಕುಡಿಯೊಬ್ಬ ನಿರಂತರವಾಗಿ ನನ್ನ ವಿರುದ್ಧ ದ್ವೇಷ ಸಾರುತ್ತಿದ್ದಾರೆ ಮತ್ತು ಚಿಕ್ಕಬಳ್ಳಾಪುರದಲ್ಲಿ ನನ್ನ ವಿರುದ್ಧ ಕೆಲವರನ್ನ ಎತ್ತಿಕಟ್ಟಿ ನನ್ನ ವಿರುದ್ಧ ಮಾತನಾಡಿಸುತ್ತಿದ್ದಾರೆ. ಯಾವ ವಿಮರ್ಶೆಗೂ ಹೆದರುವ ವ್ಯಕ್ತಿ ನಾನಲ್ಲ. ಆದರೆ ಒಂದೊಂತು ಹೇಳುತ್ತೇನೆ, ಆ ಚಿಂತಾಮಣಿ ಪ್ರಭಾವಿ ನಾಯಕನ ಎಲ್ಲಾ ಅಕ್ರಮಗಳು, ಹೈದ್ರಾಬಾದಿನಲ್ಲಿ ಕಟ್ಟಿರುವ Diagnostic center, ಮುಂಬೈನಲ್ಲಿ ತೆಗೆದುಕೊಂಡಿರುವ commercial complex ಮತ್ತು ಬೆಂಗಳೂರಿನ ಪ್ರತಿಷ್ಠಿತ ಕುಡಿಯ ಎಲ್ಲಾ ಆಸ್ತಿಗಳ ಬಗ್ಗೆ ಅತಿ ಶೀಘ್ರದಲ್ಲೇ ಸ್ಫೋಟಕ ಮಾಹಿತಿ ನೀಡುತ್ತೇನೆ. ನಾನು ಯಾರಿಗೂ ಹೆದರುವ, ಅಂಜುವ ವ್ಯಕ್ತಿಯಲ್ಲ. ಚಿಂತಾಮಣಿ ಪ್ರಭಾವಿ ವ್ಯಕ್ತಿ ಮತ್ತು ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ಕುಡಿಗೆ all the best, wait and see ಎಂದೂ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Mon, 5 October 26




