AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರೇಮದ ಊರಲಿ’ ಚಿತ್ರದಲ್ಲಿ ನಟಿಸಬೇಕಿತ್ತು ರುಕ್ಮಿಣಿ ವಸಂತ್; ಯೋಜನೆ ಕೈ ಬಿಟ್ಟಿದ್ದೇಕೆ?

‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ಮನೋಜ್ ಕುಮಾರ್ ಚಿತ್ರದ ನಾಯಕಿಯರ ಹೆಸರುಗಳ ರಹಸ್ಯ ಬಿಚ್ಚಿಟ್ಟಿದ್ದಾರೆ. ನಟಿ ರುಕ್ಮಿಣಿ ವಸಂತ್ ಅವರ ಅಭಿಮಾನಿಯಾದ ನಿರ್ದೇಶಕರು, ಅವರನ್ನೇ ನಾಯಕಿಯಾಗಿಸಲು ಯತ್ನಿಸಿ ಸಾಧ್ಯವಾಗದೆ, ಕೊನೆಗೆ ಕಥೆಯ ಇಬ್ಬರು ನಾಯಕಿಯರ ಪಾತ್ರಗಳಿಗೆ ‘ರುಕ್ಮಿಣಿ’ ಹಾಗೂ ‘ವಸಂತ’ ಎಂದು ಹೆಸರಿಟ್ಟು ಸಿನಿಮಾ ನಿರ್ಮಿಸಿದ ಕುತೂಹಲಕಾರಿ ಕಥೆಯನ್ನು ಹಂಚಿಕೊಂಡಿದ್ದಾರೆ.

‘ಪ್ರೇಮದ ಊರಲಿ’ ಚಿತ್ರದಲ್ಲಿ ನಟಿಸಬೇಕಿತ್ತು ರುಕ್ಮಿಣಿ ವಸಂತ್; ಯೋಜನೆ ಕೈ ಬಿಟ್ಟಿದ್ದೇಕೆ?
Rukmini (1)
ರಾಜೇಶ್ ದುಗ್ಗುಮನೆ
|

Updated on: Oct 05, 2026 | 2:46 PM

Share

ಮುಖ್ಯಾಂಶಗಳು

  • ರುಕ್ಮಿಣಿ ವಸಂತ್ ಕಾಲ್‌ಶೀಟ್ ಸಿಗದೆ ಮಾಡಿದ ಮಾಸ್ಟರ್ ಪ್ಲ್ಯಾನ್
  • ‘ರುಕ್ಮಿಣಿ ವಸಂತ’ ಹೆಸರೇ ನಾಯಕಿಯರ ಪಾತ್ರಗಳಿಗೆ ಪ್ರೇರಣೆ
  • ನಿಸರ್ಗದ ರೂಪಕ ‘ವಸಂತ’ ಹಾಗೂ ‘ಪ್ರೇಮದ ಊರಲಿ’ ಬಾಕ್ಸ್ ಆಫೀಸ್ ಸಕ್ಸಸ್

‘ಪ್ರೇಮದ ಊರಲಿ’ ಚಿತ್ರದ ಗೆಲುವಿನ ಬಗ್ಗೆ ನಿರ್ದೇಶಕ ಮನೋಜ್ ಕುಮಾರ್ ಖುಷಿ ಹೊರಹಾಕಿದ್ದಾರೆ. ಅವರು ಸಾಲು ಸಾಲು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಖ್ಯಾತ ನಟಿ ರುಕ್ಮಿಣಿ ವಸಂತ್ ಹಾಗೂ ಚಿತ್ರದ ಪಾತ್ರಕ್ಕೂ ಏನಾದರೂ ಸಂಬಂಧ ಇದೆಯೇ ಎಂದು ಕೇಳಲಾಯಿತು. ಈ ವೇಳೆ ಅವರು ಸ್ವಾರಸ್ಯಕರ ವಿಷಯವನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತವೇ ಪ್ರಸ್ತುತ ನಟಿ ರುಕ್ಮಿಣಿ ವಸಂತ್ ಅವರ ನಟನೆಗೆ ಅಭಿಮಾನಿಯಾಗಿದೆ. ತಾವು ಕೂಡ ರುಕ್ಮಿಣಿ ವಸಂತ್ ಅವರ ದೊಡ್ಡ ಅಭಿಮಾನಿಯಾಗಿದ್ದು, ತಮ್ಮ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಅವರನ್ನು ಅಭಿನಯಿಸುವಂತೆ ಮಾಡಬೇಕು ಎನ್ನುವ ಆಸೆ ಇತ್ತು ಎಂದು ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ರುಕ್ಮಿಣಿ ವಸಂತ್ ಅವರನ್ನು ಸಂಪರ್ಕಿಸಲು ಚಿತ್ರತಂಡ ಪ್ರಯತ್ನಿಸಿತ್ತು. ಆದರೆ, ನಟಿಯ ಕಾಲ್‌ಶೀಟ್ ಹಾಗೂ ಡೇಟ್ಸ್‌ಗಳ ಕೊರತೆ ಜೊತೆಗೆ ಸಿನಿಮಾ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದರಿಂದ, ನಟಿಯನ್ನು ತಲುಪಲು ಮತ್ತು ಚಿತ್ರಕ್ಕೆ ಕರೆತರುವ ಪ್ಲಾನ್ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ರುಕ್ಮಿಣಿ ವಸಂತ್ ಅವರನ್ನು ಸಿನಿಮಾಗೆ ನಾಯಕಿಯಾಗಿ ತರಲು ಸಾಧ್ಯವಾಗದಿದ್ದರೂ, ‘ರುಕ್ಮಿಣಿ ವಸಂತ’ ಎನ್ನುವ ಹೆಸರು ಅವರಿಗೆ ತುಂಬಾ ಇಷ್ಟವಾಗಿತ್ತು. ಹೀಗಾಗಿ, ಸಿನಿಮಾದ ಇಬ್ಬರು ನಾಯಕಿಯರ ಪಾತ್ರಗಳಿಗೆ ‘ರುಕ್ಮಿಣಿ’ ಮತ್ತು ‘ವಸಂತ’ ಎಂದು ಪ್ರತ್ಯೇಕವಾಗಿ ಹೆಸರಿಡಲು ನಿರ್ಧರಿಸಿದರು.

ಇದನ್ನೂ ಓದಿ: ಮಾಲಾಶ್ರೀ-ರುಕ್ಮಿಣಿ ವಸಂತ್ ಕಾಂಬಿನೇಷನ್​ನಲ್ಲಿ ಬರ್ತಿದೆ ಮಂಗಳಗೌರಿ ಸಿನಿಮಾ

ಈ ಹೆಸರುಗಳ ಪೈಕಿ ‘ವಸಂತ’ ಎನ್ನುವ ಪಾತ್ರವು ರೂಪಕವಾಗಿ ನಿಸರ್ಗ ಅಥವಾ ಪ್ರಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಿರ್ದೇಶಕ ಮನೋಜ್ ಕುಮಾರ್ ವಿವರಿಸಿದ್ದಾರೆ. ವಿಶೇಷ ಎಂದರೆ ಈ ಮೊದಲು ಸಿನಿಮಾಗೆ ‘ರುಕ್ಮಿಣಿ ವಸಂತ’ ಅಂತಲೇ ಟೈಟಲ್ ಇಡಲಾಗಿತ್ತು. ಕೊನೆಗೆ ಈ ಟೈಟಲ್​​ನ ‘ಪ್ರೇಮದ ಊರಲಿ’ ಎಂದು ಬದಲಾಯಿಸಲಾಗಿತ್ತು. ಈ ಸಿನಿಮಾ 10 ದಿನಕ್ಕೆ 16 ಕೋಟಿ ರೂಪಾಯಿ ಗಳಿಕೆ ಮಾಡಿ ಗೆದ್ದು ಬೀಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More