AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲಾಶ್ರೀ-ರುಕ್ಮಿಣಿ ವಸಂತ್ ಕಾಂಬಿನೇಷನ್​ನಲ್ಲಿ ಬರ್ತಿದೆ ‘ಮಂಗಳಗೌರಿ’ ಸಿನಿಮಾ

ಕನಸಿನ ರಾಣಿ ಮಾಲಾಶ್ರೀ ಹಾಗೂ ನಟಿ ರುಕ್ಮಿಣಿ ವಸಂತ್ ಹೊಸ ಸಿನಿಮಾದಲ್ಲಿ ಒಂದಾಗಿದ್ದಾರೆ. 'ಮಂಗಳಗೌರಿ' ಹೆಸರಿನ ಈ ಚಿತ್ರಕ್ಕೆ ರಾಹುಲ್ ಪಿ.ಕೆ ನಿರ್ದೇಶನ ಮಾಡುತ್ತಿದ್ದು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಗಣೇಶ ಹಬ್ಬದಂದು ಬಿಡುಗಡೆಯಾದ ಪೊಲೀಸ್ ಹಾಗೂ ಮಾಸ್ ಲುಕ್‌ನ ಫಸ್ಟ್ ಲುಕ್ ಪೋಸ್ಟರ್ ಸಖತ್ ವೈರಲ್ ಆಗಿದೆ.

ಮಾಲಾಶ್ರೀ-ರುಕ್ಮಿಣಿ ವಸಂತ್ ಕಾಂಬಿನೇಷನ್​ನಲ್ಲಿ ಬರ್ತಿದೆ 'ಮಂಗಳಗೌರಿ' ಸಿನಿಮಾ
ಮಂಗಳ ಗೌರಿ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Sep 14, 2026 | 5:19 PM

Share

ಮುಖ್ಯಾಂಶಗಳು

  • ಲೇಡಿ ಸೂಪರ್ ಸ್ಟಾರ್- ಹಿಟ್ ನಾಯಕಿಯ ಜುಗಲ್ಬಂದಿ
  • ಖಾಕಿ ತೊಟ್ಟ ರುಕ್ಮಿಣಿ; ಮಾಸ್ ಲುಕ್‌ನಲ್ಲಿ ಮಾಲಾಶ್ರೀ
  • ಹೇಮಂತ್ ಎಂ. ರಾವ್-ಕೆವಿಎನ್ ಕಾಂಬಿನೇಷನ್ ನಿರ್ಮಾಣ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಹಾಗೂ ಅಪರೂಪದ ಕಾಂಬಿನೇಷನ್ ಒಂದಾಗುತ್ತಿದೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟಿ ರುಕ್ಮಿಣಿ ವಸಂತ್ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಮಂಗಳಗೌರಿ’ ಎಂದು ಹೆಸರಿಡಲಾಗಿದೆ. ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೈಟಲ್ ಬಿಡುಗಡೆ ಮಾಡಿದೆ.

ಪೋಸ್ಟರ್‌ನಲ್ಲಿ ರುಕ್ಮಿಣಿ ವಸಂತ್ ಪೊಲೀಸ್ ಅಧಿಕಾರಿಯ ಗೆಟಪ್‌ನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಕ್ಕದಲ್ಲೇ ಲಗೇಜ್ ಸೂಟ್‌ಕೇಸ್ ಹಿಡಿದು ನಿಂತಿರುವ ಮಾಲಾಶ್ರೀ ಮಾಸ್ ಲುಕ್ ನೀಡಿದ್ದಾರೆ. ಪೋಸ್ಟರ್ ಹಿನ್ನೆಲೆಯಲ್ಲಿ ‘ಲಕ್ನೋ’ ಎಂದು ಕಾಣಿಸಿದೆ. ಇಬ್ಬರ ನಡುವಿನ ಜುಗಲ್ಬಂದಿ ಸಿನಿಮಾದಲ್ಲಿ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ಈ ಚಿತ್ರವನ್ನು ‘ಸಕುಟುಂಬ ಸಮೇತ’ ಸಿನಿಮಾ ಖ್ಯಾತಿಯ ರಾಹುಲ್ ಪಿ.ಕೆ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಹೇಮಂತ್ ಎಂ. ರಾವ್ ಅವರ ದಾಕ್ಷಾಯಣಿ ಟಾಕೀಸ್ ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿವೆ. ರಾಹುಲ್ ಪಿ.ಕೆ ಮತ್ತು ಪೂಜಾ ಸುಧೀರ್ ಈ ಸಿನಿಮಾಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಚಿತ್ರಕ್ಕೆ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ವಿಶಾಲ್ ಕೃಷ್ಣಮೂರ್ತಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ನಟನೆಯಲ್ಲಿ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಬೋಲ್ಡ್ ದೃಶ್ಯಕ್ಕೆ ರುಕ್ಮಿಣಿ ವಸಂತ್ ಟ್ರೋಲ್: ನಟಿಯ ಬೆಂಬಲಕ್ಕೆ ನಿಂತ ಫ್ಯಾನ್ಸ್

ಇಬ್ಬರು ವಿಭಿನ್ನ ತಲೆಮಾರಿನ ನಟಿಯರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿರುವುದು ಪ್ರೇಕ್ಷಕರಿಗೆ ರೋಮಾಂಚನ ತಂದಿದೆ. ಪೋಸ್ಟರ್ ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಈ ಸಿನಿಮಾದ ಚಿತ್ರೀಕರಣ ಅಪ್​​ಡೇಟ್​ನ ಶೀಘ್ರವೇ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ
ಗಣೇಶ ಚತುರ್ಥಿಯಂದೇ ಗಜರಾಜನ ಎಂಟ್ರಿ