150 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದರೂ ಜನ ಬರಲಿಲ್ಲ; ಉಲ್ಟಾ ಆಯ್ತು ‘ಆದಿಪುರುಷ್’ ಪ್ಲಾನ್

ತಂಡದವರು 150 ರೂಪಾಯಿ ಟಿಕೆಟ್ ಆಫರ್ ಕೊಟ್ಟರೂ ಜನರು ಸಿನಿಮಾ ನೋಡುತ್ತಿಲ್ಲ. ಈ ಬೆಳವಣಿಗೆಯಿಂದ ಪ್ರಭಾಸ್ ಸಿನಿಮಾ ಅತೀ ಶೀಘ್ರದಲ್ಲೇ ಒಟಿಟಿಗೆ ಕಾಲಿಡಲಿದೆ ಎನ್ನಲಾಗುತ್ತಿದೆ.

150 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದರೂ ಜನ ಬರಲಿಲ್ಲ; ಉಲ್ಟಾ ಆಯ್ತು ‘ಆದಿಪುರುಷ್’ ಪ್ಲಾನ್
ಆದಿಪುರುಷ್

Updated on: Jun 23, 2023 | 2:51 PM

‘ಆದಿಪುರುಷ್’ ಚಿತ್ರ (Adipurush Movie) ಮೊದಲ ದಿನ ಅಬ್ಬರಿಸಿದ ಪರಿ ನೋಡಿ ಅನೇಕರು ಅಚ್ಚರಿಗೊಂಡರು. ಈ ಚಿತ್ರ ವೀಕೆಂಡ್​ನಲ್ಲಿ ಕಮಾಯಿ ಮಾಡಿದ್ದಷ್ಟೇ, ವಾರದ ದಿನಗಳಲ್ಲಿ ಸಿನಿಮಾ ನೆಲಕಚ್ಚಿತು. ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 140 ಕೋಟಿ ರೂಪಾಯಿ ಬಾಚಿಕೊಂಡಿದ್ದ ಈ ಚಿತ್ರ ಏಳನೇ ದಿನಕ್ಕೆ ಕೇವಲ 5.5 ಕೋಟಿ ರೂಪಾಯಿ ಕಮಾಯಿ ಮಾಡಿ ತೃಪ್ತಿಪಟ್ಟುಕೊಂಡಿದೆ. ತಂಡದವರು 150 ರೂಪಾಯಿ ಟಿಕೆಟ್ ಆಫರ್ ಕೊಟ್ಟರೂ ಜನರು ಸಿನಿಮಾ ನೋಡುತ್ತಿಲ್ಲ. ಈ ಬೆಳವಣಿಗೆಯಿಂದ ಪ್ರಭಾಸ್ (Prabhas) ಸಿನಿಮಾ ಅತೀ ಶೀಘ್ರದಲ್ಲೇ ಒಟಿಟಿಗೆ ಕಾಲಿಡಲಿದೆ ಎಂಬುದು ಬಹುತೇಕ ಖಚಿತವಾಗಿದೆ.

ಮೊದಲು ಸಿನಿಮಾ ರಿಲೀಸ್ ಆಗಿ ಹಲವು ತಿಂಗಳ ಬಳಿಕ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಅದರಲ್ಲೂ ಸೂಪರ್ ಹಿಟ್ ಚಿತ್ರಗಳು ಟಿವಿಯಲ್ಲಿ ಪ್ರಸಾರ ಕಾಣಬೇಕು ಎಂದರೆ ವಿಶೇಷ ದಿನ ಬರಬೇಕು. ಈ ಕಾರಣಕ್ಕೆ ಅನೇಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಬಯಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಜನರು ಮೊದಲು ವಿಮರ್ಶೆ ನೋಡುತ್ತಾರೆ. ಚಿತ್ರ ಚೆನ್ನಾಗಿದ್ದರೆ ಮಾತ್ರ ಥಿಯೇಟರ್​ಗೆ ಹೋಗುತ್ತಾರೆ. ವಿಮರ್ಶಕರು ಸ್ವಲ್ಪ ನೆಗೆಟಿವ್ ವಿಮರ್ಶೆ ನೀಡಿದರೂ ಸಿನಿಮಾನ ಒಟಿಟಿಯಲ್ಲಿ ನೋಡೋಣ ಎಂದು ಸುಮ್ಮನಾಗುತ್ತಾರೆ. ಈಗ ‘ಆದಿಪುರುಷ್’ ಚಿತ್ರವನ್ನು ಒಟಿಟಿಯಲ್ಲಿ ನೋಡೋಣ ಎಂದು ಅನೇಕರು ಸುಮ್ಮನಾಗಿದ್ದಾರೆ. ಹೀಗಾಗಿ, ಚಿತ್ರದ ಗಳಿಕೆಯಲ್ಲಿ ಇಳಿಕೆ ಆಗಿದೆ.

ಇದನ್ನೂ ಓದಿ: ‘ಆದಿಪುರುಷ್’ ಸಿನಿಮಾ ನೋಡಲು 5,500 ಕಿಮೀ ಪ್ರಯಾಣಿಸಿದ ಪ್ರಭಾಸ್ ಮಹಿಳಾ ಅಭಿಮಾನಿ

‘ಆದಿಪುರುಷ್’ ಸಿನಿಮಾ ವಿಶ್ವಮಟ್ಟದಲ್ಲಿ 400+ ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಈ ಚಿತ್ರ ಗಳಿಕೆ ಮಾಡಿದ್ದು 250+ ಕೋಟಿ ರೂಪಾಯಿ. ಗುರುವಾರ (ಜೂನ್ 22) ಈ ಚಿತ್ರ 5.5 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಈ ವೀಕೆಂಡ್​ನಲ್ಲಿ ಸಿನಿಮಾ ಯಾವ ರೀತಿಯಲ್ಲಿ ಕಮಾಯಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಗುರುವಾರ ಮಲ್ಟಿಪ್ಲೆಕ್ಸ್​​ಗಳಲ್ಲಿ 150 ರೂಪಾಯಿಗೆ ಟಿಕೆಟ್ ಬೆಲೆ ಇಳಿಸಲಾಗಿತ್ತು. ಐನಾಕ್ಸ್, ಪಿವಿಆರ್ ಮೊದಲಾದ ಕಡೆಗಳಲ್ಲಿ ಈ ಆಫರ್ ಇತ್ತು. ಇಷ್ಟೇ ಅಲ್ಲದೆ ಸಿನಿಮಾದ ವಿವಾದಾತ್ಮಕ ಡೈಲಾಗ್​ಗಳನ್ನು ಬದಲಿಸಲಾಗಿದೆ. ಆದಾಗ್ಯೂ ಜನರು ಸಿನಿಮಾ ನೋಡಲು ಬರುತ್ತಿಲ್ಲ. ಇದು ಚಿತ್ರತಂಡಕ್ಕೆ ಹಿನ್ನಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 11:18 am, Fri, 23 June 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us