ಪ್ರಭಾಸ್ ಅವರು ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಸಲಾರ್’ ಸಿನಿಮಾ (Salaar Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಈ ಬೆನ್ನಲ್ಲೇ ಪ್ರಭಾಸ್ (Prabhas) ವಿದೇಶಕ್ಕೆ ಹಾರಿದ್ದಾರೆ ಎಂದು ವರದಿ ಆಗಿದೆ. ಆದರೆ, ಯಾವುದೂ ಅಧಿಕೃತವಾಗಿಲ್ಲ.
‘ಸಲಾರ್’ ಸಿನಿಮಾ ರಿಲೀಸ್ಗಾಗಿ ಕಾದಿದ್ದರು ಪ್ರಭಾಸ್. ಸಾಲು ಸಾಲು ಸೋಲು ಕಾಣುತ್ತಿರುವುದರಿಂದ ಅವರಿಗೆ ‘ಸಲಾರ್’ ಮೂಲಕ ಒಂದು ದೊಡ್ಡ ಗೆಲವು ಬೇಕಿತ್ತು. ಆದರೆ, ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಇನ್ನೂ ಹೆಚ್ಚಿನ ಸಮಯ ಬೇಕು ಎಂದು ನಿರ್ದೇಶಕ ಪ್ರಶಾಂತ್ ನೀಲ್ಗೆ ಅನಿಸಿದೆ. ಈ ಕಾರಣದಿಂದ ಅವರು ಸಿನಿಮಾ ರಿಲೀಸ್ ಪೋಸ್ಟ್ಪೋನ್ ಮಾಡಿದ್ದಾರೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಹೀಗಾಗಿ, ಪ್ರಭಾಸ್ ಬೇರೆ ದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಕೆಲವು ವರದಿಗಳ ಪ್ರಕಾರ ಪ್ರಭಾಸ್ ಅವರು ವಿದೇಶಕ್ಕೆ ತೆರಳಿದ್ದು ಕಾಲಿನ ಸರ್ಜರಿಗೆ ಎನ್ನಲಾಗುತ್ತಿದೆ. ಕಾಲಿನ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಈ ಮೊದಲು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ಎರಡನೇ ಬಾರಿಗೆ ಅವರು ಸರ್ಜರಿ ಮಾಡಿಸಿಕೊಳ್ಳಬೇಕಿದೆ. ಇನ್ನೂ ಕೆಲವು ವರದಿಗಳು ಹೇಳೋದೇ ಬೇರೆ. ‘ಆದಿಪುರುಷ್’ ರಿಲೀಸ್ ಬಳಿಕ ಅವರು ಒಂದಷ್ಟು ಸಮಯ ವಿದೇಶದಲ್ಲಿ ಕಳೆದು ಬಂದಿದ್ದರು. ಆ ಬಳಿಕ ಅವರು ನಿರಂತರವಾಗಿ ‘ಕಲ್ಕಿ 2898 ಎಡಿ’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಆದರು. ಅವರಿಗೆ ಒಂದು ಬ್ರೇಕ್ ಬೇಕಿದೆ. ಹೀಗಾಗಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಪ್ರಭಾಸ್ ಉಳಿದ ಸೆಲೆಬ್ರಿಟಗಳಂತಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟೀವ್ ಆಗಿಲ್ಲ. ಅವರು ಫೋಟೋಗಳನ್ನು ಹಂಚಿಕೊಳ್ಳೋದು ತುಂಬಾನೇ ಕಡಿಮೆ. ಈ ಕಾರಣಕ್ಕೆ ಅವರು ಯಾವ ದೇಶಕ್ಕೆ ತೆರಳಿದ್ದಾರೆ, ಯಾವ ಕಾರಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ರಿವೀಲ್ ಆಗೋ ಸಾಧ್ಯತೆ ಕಡಿಮೆ.
ಇದನ್ನೂ ಓದಿ: ‘ಸಲಾರ್’ ರಿಲೀಸ್ ಡೇಟ್ನಲ್ಲಿ ಬರುತ್ತಿದೆ ಶ್ರೀಲೀಲಾ ಸಿನಿಮಾ; ಪ್ರಮೋಷನ್ಗೆ ಭರ್ಜರಿ ಪ್ಲಾನ್
‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರು ಇದನ್ನು ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ