
ಎಐ ಜಗತ್ತನೇ ಬದಲಾಯಿಸುತ್ತಿದೆ. ಕೋಟ್ಯಂತರ ಮಂದಿ ಎಐ ಬಳಸಿಕೊಂಡು ತಮ್ಮ ದಿನವಹಿ ಕೆಲಸಗಳನ್ನು ಸುಲಭ ಮಾಡಿಕೊಂಡಿದ್ದಾರೆ. ಆದರೆ ಕೆಲ ದುಷ್ಕರ್ಮಿಗಳು ಇದೇ ಎಐ ಅನ್ನು ದುಷ್ಕೃತ್ಯಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಿನಿಮಾ ನಟಿಯರ ಅಶ್ಲೀಲ ವಿಡಿಯೋಗಳನ್ನು, ಚಿತ್ರಗಳನ್ನು ಎಐ ಬಳಸಿ ಸೃಷ್ಟಿಸಿ ಹರಿಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಜಾನ್ಹವಿಯ ಕೆಟ್ಟ ವಿಡಿಯೋ ಹರಿಬಿಡಲಾಗಿತ್ತು. ನಟ ಜೂ ಎನ್ಟಿಆರ್ ಈ ಕಾರ್ಯವನ್ನು ತೀವ್ರವಾಗಿ ಖಂಡಿಸಿದ್ದು, ‘ದುಷ್ಟರನ್ನು ಸುಮ್ಮನೆ ಬಿಡಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ನಟನೆಯ ‘ದೇವರಾ’ ಸಿನಿಮಾದ ಸೂಪರ್ ಹಿಟ್ ‘ಚುಟ್ಟಮಲ್ಲೇ’ ಹಾಡಿನಲ್ಲಿ ಜೂ ಎನ್ಟಿಆರ್ ಮತ್ತು ಜಾನ್ಹವಿ ನಟಿಸಿದ್ದರು. ಎಐ ಬಳಸಿ ಆ ಹಾಡನ್ನು ಕೆಟ್ಟದಾಗಿ ಬದಲಾಯಿಸಿ ಹಂಚಿಕೊಳ್ಳಲಾಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜೂನಿಯರ್ ಎನ್ಟಿಆರ್, ಇದೊಂದು ಅಸಹ್ಯಕರ ಮತ್ತು ನಾಚಿಕೆಗೇಡಿನ ವರ್ತನೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Disgusting, Sick and Shameless.
In a land that worships women as mothers and goddesses, where “Matrudevo Bhava” is not just a phrase but a part of our culture, some people have fallen so low that they are using AI to disrespect a woman in the most degrading way possible. Using AI to create something this vile is shameful beyond words.
To the scumbags behind this morphed Chuttamalle video, I will not spare any of you. I will take every possible legal action against those who created it and those who are spreading it.
Please do not watch, share or engage with such content. Today it is someone else. Tomorrow, it could be your mother, sister, wife or daughter.
This is a serious issue, and I urge all the state governments and the Government of India to act strongly and bring in strict regulations against the misuse of AI.
— Jr NTR (@tarak9999) October 3, 2026
‘ಮಹಿಳೆಯರನ್ನು ತಾಯಂದಿರು ಮತ್ತು ದೇವತೆಯರಂತೆ ಪೂಜಿಸುವ, ‘ಮಾತೃದೇವೋ ಭವ’ ಎನ್ನುವುದನ್ನು ಸಂಸ್ಕೃತಿಯ ಭಾಗವಾಗಿ ಹೊಂದಿರುವ ನಮ್ಮ ದೇಶದಲ್ಲಿ, ಕೆಲವರು ಎಐ ಬಳಸಿ ಮಹಿಳೆಯರನ್ನು ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಎನ್ಟಿಆರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವಿಕೃತ ಮನಸ್ಥಿತಿಯ ಕೆಲಸಕ್ಕೆ ಪದಗಳೇ ಇಲ್ಲ ಎಂದು ಅವರು ಕಿಡಿಕಾರಿದ್ದಾರೆ. ಮಾರ್ಫ್ ಮಾಡಿದ ಈ ‘ಚುಟ್ಟಮಲ್ಲೇ’ ವಿಡಿಯೋದ ಹಿಂದೆ ಇರುವ ಕಿಡಿಗೇಡಿಗಳನ್ನು ತಾವೂ ಬಿಡುವುದಿಲ್ಲ ಎಂದು ಎನ್ಟಿಆರ್ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಸೃಷ್ಟಿಸಿದವರ ವಿರುದ್ಧ ಹಾಗೂ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ:ಮುಂದಕ್ಕೆ ಹೋಯ್ತು ‘ಎಕೆ 47’ ಸಿನಿಮಾ ರಿಲೀಸ್, ಕ್ಷಮೆ ಕೇಳಿದ ನಿರ್ಮಾಪಕ
ಯಾರೂ ಸಹ ಇಂತಹ ಅಸಹ್ಯಕರ ಕಂಟೆಂಟ್ ಅನ್ನು ವೀಕ್ಷಿಸಬೇಡಿ, ಶೇರ್ ಮಾಡಬೇಡಿ ಅಥವಾ ಇದರೊಂದಿಗೆ ಯಾವುದೇ ರೀತಿಯಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇಂದು ಇದು ಬೇರೆಯವರ ವಿಚಾರವಾಗಿರಬಹುದು, ಆದರೆ ನಾಳೆ ಇದು ನಿಮ್ಮ ತಾಯಿ, ತಂಗಿ, ಪತ್ನಿ ಅಥವಾ ಮಗಳಿಗೂ ಸಂಭವಿಸಬಹುದು ಎಂದು ಎನ್ಟಿಆರ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೃತ್ಯವನ್ನು ಜೂ ಎನ್ಟಿಆರ್ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗದ ಹಲವರು ಖಂಡಿಸಿದ್ದಾರೆ. ಈ ವಿಷಯದ ಕುರಿತಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಸರ್ಕಾರಗಳಿಗೆ ಸಹ ದೂರು ನೀಡುವುದಾಗಿ ಹೇಳಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Tue, 6 October 26