ಅಜಿತ್​ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ನಿರ್ಮಾಪಕರ ಹಿಂದೇಟು? ಶುರುವಾಗಿದೆ ಭಯ

ತಮಿಳು ನಟ ಅಜಿತ್ ಕುಮಾರ್ ಅವರ ಮುಂದಿನ ಸಿನಿಮಾ AK64 ಸಂಭಾವನೆ ವಿಚಾರವಾಗಿ ಭಾರಿ ಚರ್ಚೆಯಲ್ಲಿದೆ. ಇತ್ತೀಚಿನ ಸೋಲುಗಳ ನಂತರ, ಅಜಿತ್ ತಮ್ಮ ಸಂಭಾವನೆಯನ್ನು 150 ಕೋಟಿ ರೂ.ಗೆ ಇಳಿಸಿದ್ದಾರೆ. ಆದರೂ, ನಿರ್ಮಾಪಕರು ಈ ಮೊತ್ತ ನೀಡಲು ಹಿಂದೇಟು ಹಾಕಿ, ಇನ್ನಷ್ಟು ಕಡಿಮೆ ಮಾಡುವಂತೆ ಕೇಳುತ್ತಿದ್ದಾರೆ. ಇದು ಅವರ ಹೊಸ ಸಿನಿಮಾ ಯೋಜನೆಗಳ ಘೋಷಣೆಗೆ ವಿಳಂಬಕ್ಕೆ ಕಾರಣವಾಗಿದೆ.

ಅಜಿತ್​ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ನಿರ್ಮಾಪಕರ ಹಿಂದೇಟು? ಶುರುವಾಗಿದೆ ಭಯ
ಅಜಿತ್

Updated on: Jun 13, 2026 | 7:00 AM

ತಮಿಳು ನಟ ಅಜಿತ್ ಕುಮಾರ್ ಅವರ (Ajit Kumar) ಮುಂದಿನ ಸಿನಿಮಾ ‘AK64’ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳ ಕಥೆ ಅಥವಾ ನಿರ್ದೇಶಕರ ಬಗ್ಗೆ ಚರ್ಚೆಯಾಗುವುದು ಸಹಜ. ಆದರೆ, ಈ ಬಾರಿ ಅಜಿತ್ ಕುಮಾರ್ ಅವರ ಸಂಭಾವನೆ ವಿಚಾರವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಅಜಿತ್ ಅವರ ಹೊಸ ಪ್ರಾಜೆಕ್ಟ್ ಘೋಷಣೆಯಾಗದೇ ತಡವಾಗುತ್ತಿದೆ. ಇದಕ್ಕೆ ಅವರ ಭಾರಿ ಮೊತ್ತದ ಸ್ಯಾಲರಿ ಮಾತುಕತೆಗಳೇ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅಜಿತ್ ಅವರಿಗೆ ಸಾಲು ಸಾಲು ಸೋಲುಗಳು ಎದುರಾಗಿವೆ. ಅವರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಾವಾಗಿಯೇ ತಮ್ಮ ಸಂಭಾವನೆಯನ್ನು ಸುಮಾರು 150 ಕೋಟಿ ರೂಪಾಯಿಗೆ ಇಳಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದು ಅವರ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗೆ ಪಡೆದಿದ್ದಕ್ಕಿಂತ ಕಡಿಮೆ ಮೊತ್ತವಾಗಿದೆ. ಆದಾಗ್ಯೂ, ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಅಜಿತ್ ಕೇಳುತ್ತಿರುವ ಈ ಭಾರಿ ಮೊತ್ತವನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸಂಭಾವನೆಯನ್ನು ಇನ್ನೂ ಕಡಿಮೆ ಮಾಡುವಂತೆ ನಿರ್ಮಾಣ ಸಂಸ್ಥೆಗಳು ಅಜಿತ್​​ಗೆ ಬೇಡಿಕೆ ಇಡುತ್ತಿವೆ.

ನಿರ್ಮಾಣ ಸಂಸ್ಥೆಗಳ ಆಫರ್ ಎಷ್ಟು?:

ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ತಮಿಳಿನ ಮುಂಚೂಣಿ ನಿರ್ಮಾಣ ಸಂಸ್ಥೆಯೊಂದು ಅಜಿತ್ ಅವರೊಂದಿಗೆ ಮಾತುಕತೆ ನಡೆಸಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಸಹಮತ ಮೂಡದ ಕಾರಣ ಮಾತುಕತೆ ಅರ್ಧಕ್ಕೆ ನಿಂತಿದೆ. ಆ ಪ್ರಮುಖ ಬ್ಯಾನರ್ ಅಜಿತ್ ಅವರಿಗೆ ಗರಿಷ್ಠ 90 ಕೋಟಿ ರೂಪಾಯಿ ನೀಡಲು ಮಾತ್ರ ಸಿದ್ಧವಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಮತ್ತೊಂದು ನಿರ್ಮಾಣ ಸಂಸ್ಥೆಯು ಅಜಿತ್ ಅವರಿಗೆ ಸುಮಾರು 110 ಕೋಟಿ ರೂಪಾಯಿ ಆಫರ್ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಅಜಿತ್ ಸಂಭಾವನೆ 170 ರಿಂದ 200 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇತ್ತು ಎನ್ನಲಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಫೀಲ್ಡ್​​ನಲ್ಲಿ ನಟ ಅಜಿತ್ ಕುಮಾರ್ ವಿಡಿಯೋ ನೋಡಿ

ಯಾರ ಜೊತೆ ಸಿನಿಮಾ?:

ಪ್ರಸ್ತುತ ಅಜಿತ್ ಕುಮಾರ್ ಅವರ ಮುಂದೆ ಎರಡು ಪ್ರಮುಖ ಪ್ರಾಜೆಕ್ಟ್‌ಗಳು ಇವೆ. ಒಂದು ‘ಗುಡ್ ಬ್ಯಾಡ್ ಅಗ್ಲಿ’ ಖ್ಯಾತಿಯ ಅಧಿಕ್ ರವಿಚಂದ್ರನ್ ಅವರೊಂದಿಗಿನ ಸಿನಿಮಾ ಹಾಗೂ ಮತ್ತೊಂದು ಅವರ ಆಪ್ತ ನಿರ್ದೇಶಕ ಸಿರುತೈ ಶಿವ ಅವರೊಂದಿಗಿನ ಚಿತ್ರ. ಇವೆರಡೂ ದೊಡ್ಡ ಬಜೆಟ್‌ನ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಸಂಭಾವನೆ ಗೊಂದಲ ಮುಗಿಯದ ಕಾರಣ ಯಾವುದೇ ಪ್ರಾಜೆಕ್ಟ್ ಇನ್ನೂ ಅಧಿಕೃತವಾಗಿ ಆರಂಭ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us