‘ಪುಷ್ಪ 2’ ಸಿನಿಮಾ ಮೂಲಕ ಸುದ್ದಿಯಲ್ಲಿರುವ ನಟ ಅಲ್ಲು ಅರ್ಜುನ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಈಗ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ 2′ ಚಿತ್ರದ ಪ್ರದರ್ಶನದ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆ ನಿಧನ ಹೊಂದಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ಬಿಡುಗಡೆ ಕಂಡಿದ್ದಾರೆ. ಅವರು ಜೈಲಿಗೆ ತೆರಳುವುದಕ್ಕೂ ಮೊದಲು ಪತ್ನಿ ಸ್ನೇಹಾ ರೆಡ್ಡಿಯನ್ನು ಸಮಾಧಾನಪಡಿಸಿದ್ದರು. ಅವರ ಪತ್ನಿ ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
ಅಲ್ಲು ಅರ್ಜುನ್ ಮತ್ತು ಸ್ನೇಹಾ ಮೊದಲು ಭೇಟಿಯಾದದ್ದು ಮದುವೆಯೊಂದರಲ್ಲಿ. ಆ ಸಮಯದಲ್ಲಿ ಅಲ್ಲು ಅರ್ಜುನ್‌ಗೆ ಸ್ನೇಹಾ ಅವರನ್ನು ಮೊದಲ ಬಾರಿಗೆ ಭೇಟಿಯಾಗುವ ಅವಕಾಶ ಸಿಕ್ಕಿತು. ಮೊದಲ ನೋಟದಲ್ಲೇ ಪ್ರೀತಿ ಮೂಡಿತು. ಅಲ್ಲು ಅರ್ಜುನ್ ಅವರು ಸ್ನೇಹಾ ಅವರ ಸೌಂದರ್ಯ ಮತ್ತು ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದರು. ಕ್ರಮೇಣ ಇಬ್ಬರೂ ಸ್ನೇಹಿತರಾಗಿ ಪರಸ್ಪರ ಪ್ರೀತಿಸತೊಡಗಿದರು. ಸ್ನೇಹಾ ಮತ್ತು ಅಲ್ಲು ಅರ್ಜುನ್ 2011ರಲ್ಲಿ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು.
ಸ್ನೇಹಾ ಮತ್ತು ಅಲ್ಲು ಅರ್ಜುನ್‌ಗೆ ಇಬ್ಬರು ಮಕ್ಕಳಿದ್ದಾರೆ. ಸ್ನೇಹಾ ಕುಟುಂಬಕ್ಕೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ಆದರೆ, ಅಲ್ಲು ಅರ್ಜುನ್ ಅವರ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ನೇಹಾ ಕುಟುಂಬದ ಜವಾಬ್ದಾರಿಗಳು ಮತ್ತು ವ್ಯವಹಾರವನ್ನು ನಿರ್ವಹಿಸುತ್ತಾರೆ.
ಸ್ನೇಹಾ ಯಶಸ್ವಿ, ಶ್ರೀಮಂತ ವ್ಯಾಪಾರ ಕುಟುಂಬದಿಂದ ಬಂದವರು. ಹೈದರಾಬಾದ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಅವರು 2016 ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಅವರು ಹೈದರಾಬಾದ್‌ನ ಜುಬಿಲಿ ಪ್ರದೇಶದಲ್ಲಿ ‘ಪಿಕಾಬೂ’ ಎಂಬ ಆನ್‌ಲೈನ್ ಫೋಟೋ ಸ್ಟುಡಿಯೊವನ್ನು ಪ್ರಾರಂಭಿಸಿದರು. ಸ್ನೇಹಾ ಅವರ ಸ್ಟುಡಿಯೋ ಯಶಸ್ವಿಯಾಗಿ ನಡೆಯುತ್ತಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಪರ ವಾದ ಮಂಡಿಸಿದ ನಿರಂಜನ್ ರೆಡ್ಡಿ ಪಡೆಯೋ ಸಂಭಾವನೆ ಇಷ್ಟೊಂದಾ?
ವರದಿಗಳ ಪ್ರಕಾರ, ಸ್ನೇಹಾ ರೆಡ್ಡಿ ಅವರ ನಿವ್ವಳ ಮೌಲ್ಯ ಸುಮಾರು 42 ಕೋಟಿ ರೂಪಾಯಿ. ಅವರು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರಿಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. ಅಲ್ಲು ಅರ್ಜುನ್ ಅವರು ಬಿಡುಗಡೆ ಕಂಡಿರೋದು ಅವರಿಗೆ ಖುಷಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.