ಅಲ್ಲು ಅರ್ಜುನ್ ಪರ ವಾದ ಮಂಡಿಸಿದ ನಿರಂಜನ್ ರೆಡ್ಡಿ ಪಡೆಯೋ ಸಂಭಾವನೆ ಇಷ್ಟೊಂದಾ?
ಅಲ್ಲು ಅರ್ಜುನ್ ಅವರ ಬಂಧನ ಮತ್ತು ಬಿಡುಗಡೆಯ ಸುದ್ದಿ ಚರ್ಚೆಯ ವಿಷಯವಾಗಿದೆ. ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಬಂಧನಕ್ಕೊಳಗಾದ ಅವರಿಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಿರಂಜನ್ ರೆಡ್ಡಿ ಅವರು ಅಲ್ಲು ಅರ್ಜುನ್ ಪರ ವಾದ ಮಂಡಿಸಿದ ವಕೀಲರು. ನಿರಂಜನ್ ರೆಡ್ಡಿ ಅವರ ಶುಲ್ಕದ ಬಗ್ಗೆ ಇಲ್ಲಿದೆ ವಿವರ.
ಅಲ್ಲು ಅರ್ಜುನ್ ಅವರು ಒಂದೇ ದಿನದಲ್ಲಿ ಎಲ್ಲವನ್ನೂ ನೋಡಿ ಬಂದರು. ‘ಪುಷ್ಪ 2’ ಯಶಸ್ಸಿನಲ್ಲಿದ್ದ ಅವರು ನಾನಾ ಕಡೆಗಳಿಗೆ ತೆರಳಿ ಸಕ್ಸಸ್ ಮೀಟ್ನಲ್ಲಿ ಭಾಗಿ ಆಗುತ್ತಿದ್ದಾರೆ. ಹೀಗಿರುವಾಗಲೇ ಡಿಸೆಂಬರ್ 4ರಂದು ಹೈದರಾಬಾದ್ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಅವರು ಡಿಸೆಂಬರ್ 13ರಂದು ಬಂಧನಕ್ಕೆ ಒಳಗಾಗಿ, ಇಂದು (ಡಿಸೆಂಬರ್ 15) ಬಿಡುಗಡೆ ಹೊಂದಿದ್ದಾರೆ. ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ಗೆ ಮಧ್ಯಂತರ ಜಾಮೀನು ನೀಡಿದೆ. ರಾತ್ರಿ ಇಡೀ ಜೈಲಿನಲ್ಲೇ ಇದ್ದ ಅಲ್ಲು ಅರ್ಜುನ್ ಅವರು ಇಂದು ಬಿಡುಗಡೆ ಹೊಂದಿದ್ದಾರೆ. ಅವರ ಪರ ವಕೀಲರು ಇಟ್ಟ ಮುಖ್ಯವಾದ ಪಾಯಿಂಟ್ಗಳನ್ನು ಕೋರ್ಟ್ ಪರಿಗಣಿಸಿದೆ. ಹಾಗಾದರೆ ಆ ವಕೀಲರ ಹೆಸರು ಏನು? ಅವರು ಚಾರ್ಜ್ ಮಾಡೋದು ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.
ಅಲ್ಲು ಅರ್ಜುನ್ ಪರ ವಾದ ಮಾಡಿದವರು ನಿರಂಜನ್ ರೆಡ್ಡಿ. ಅವರು ವೈಎಸ್ ಜಗನ್ ಮೋಹನ ರೆಡ್ಡಿ ಅವರಿಗೆ ಸಂಬಂಧಿಸಿದ ಕೇಸ್ಗಳನ್ನು ಹ್ಯಾಂಡಲ್ ಮಾಡುತ್ತಾರೆ. ಅವರು ಅಲ್ಲು ಅರ್ಜುನ್ ಪರ ವಾದ ಮಂಡಿಸಿದರು. ನಾಂಪಲ್ಲಿ ಕೋರ್ಟ್ ಅಲ್ಲು ಅರ್ಜುನ್ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಅವರು ಇದನ್ನು ಅವರು ತೆಲಂಗಾಣ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಅವರು ಕೆಲವು ಪ್ರಮುಖ ವಿಚಾರಗಳನ್ನು ಎತ್ತಿ ಹಿಡಿದರು.
‘ಜನರನ್ನು ನಿಯಂತ್ರಣ ಮಾಡಬೇಕಿದ್ದ ಪೊಲೀಸರು ಅಲ್ಲು ಅರ್ಜುನ್ ಅವರನ್ನು ನೋಡುತ್ತಾ ನಿಂತಿದ್ದರು. ವಿದೇಶದಲ್ಲಿ ಕ್ರಿಕೆಟ್ ನಡೆಯುವಾಗ ಪೊಲೀಸರು ಅಲ್ಲಿ ಬಂದ ಪ್ರೇಕ್ಷಕರ ಮೇಲೆ ಕಣ್ಣಿಡುತ್ತಾರೆ. ಆದರೆ, ಭಾರತದಲ್ಲಿ ಕ್ರಿಕೆಟ್ ನಡೆದರೆ ಪೊಲೀಸರು ಕ್ರಿಕೆಟರ್ಗಳು ಹಾಗೂ ಕ್ರಿಕೆಟ್ ನೋಡುತ್ತಾ ನಿಂತಿರುತ್ತಾರೆ’ ಎಂದು ವಾದ ಮಂಡಿಸಿದರು. ಈ ರೀತಿಯ ಹಲವು ವಿಚಾರವನ್ನು ಅವರು ಮುಂದಿಟ್ಟಿದ್ದಾರೆ.
ಕೆಲವು ವರದಿಗಳ ಪ್ರಕಾರ ನಿರಂಜನ್ ರೆಡ್ಡಿ ಅವರು ಒಂದು ಬಾರಿ ಕೋರ್ಟ್ಗೆ ಆಗಮಿಸಿದರೆ ಬರೋಬ್ಬರಿ 5-10 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರಂತೆ. ‘ಇಷ್ಟು ದೊಡ್ಡ ಮೊತ್ತದ ಹಣ ನೀಡುವುದರಲ್ಲಿ ಅರ್ಥ ಇದೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜಾಮೀನು ಸಿಕ್ಕರೂ ಜೈಲಿನಲ್ಲೇ ರಾತ್ರಿ ಕಳೆದ ಅಲ್ಲು ಅರ್ಜುನ್; ಮುಂಜಾನೆಯೇ ಬಿಡುಗಡೆ
ನಿರಂಜನ್ ರೆಡ್ಡಿ ಅವರು ಲಾಯರ್ ಮಾತ್ರವಲ್ಲ, ನಿರ್ಮಾಪಕರೂ ಹೌದು. ‘ಆಚಾರ್ಯ’ ಸಿನಿಮಾಗೆ ಅವರು ಕೂಡ ನಿರ್ಮಾಪಕರಾಗಿದ್ದರು. ಈ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಚಿರಂಜೀವಿ ನಟಿಸಿದ್ದಾರೆ. ಈಗ ಅವರು ಅಲ್ಲು ಅರ್ಜುನ್ ಸಹಾಯಕ್ಕೆ ಬಂದು ಅವರನ್ನು ಜೈಲಿನಿಂದ ಹೊರಕ್ಕೆ ತಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.