Karnataka Assembly Session: ತನ್ನನ್ನು ಮಿಮಿಕ್ರಿ ಮಾಡಿದ ಯತ್ನಾಳ್​​​ಗೆ ಮೀಟಿಂಗಲ್ಲಿ ಭಾಗಿಯಾಗಿದ್ರಾ ಎಂದು ಕೇಳಿದ ಜಮೀರ್!

Karnataka Assembly Session: ತನ್ನನ್ನು ಮಿಮಿಕ್ರಿ ಮಾಡಿದ ಯತ್ನಾಳ್​​​ಗೆ ಮೀಟಿಂಗಲ್ಲಿ ಭಾಗಿಯಾಗಿದ್ರಾ ಎಂದು ಕೇಳಿದ ಜಮೀರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 13, 2024 | 7:03 PM

ಧಾರವಾಡದಲ್ಲಿ ವಕ್ಫ್ ಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅಲ್ಲಿನ ಶಾಸಕ ಅರವಿಂದ್ ಬೆಲ್ಲದ್ ಭಾಗಿಯಾಗಿದ್ದರು, ಸಭೆಯಲ್ಲಿ ಏನೆಲ್ಲ ನಡೆಯಿತು ಅನ್ನೋದು ಅವರಿಗೆ ಗೊತ್ತಿದೆ, ಆದರೆ ಅಶೋಕ ಅವರು ಇಲ್ಲಸಲ್ಲದ ಸುಳ್ಳುಗಳನ್ನು ಹೇಳುತ್ತಿದ್ದಾರೆ, ಅಸಲಿಗೆ ಮೀಟಿಂಗ್​ ನಲ್ಲಿ ಏನು ನಡೆಯಿತು ಅಂತ ಅರವಿಂದ್ ಅವರು ಅಶೋಕ್ ಗೆ ಹೇಳಲಿ ಅಂತ ಜಮೀರ್ ಹೇಳಿದಾಗ ಅರವಿಂದ್ ಏನೂ ಗೊತ್ತಾಗದೆ ಸಚಿವನ ಮುಖ ನೋಡುತ್ತಾರೆ.

ಬೆಳಗಾವಿ: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಮಾತಾಡುವಾಗ ಮಿಮಿಕ್ರಿಗಳನ್ನು ಹೆಚ್ಚು ಮಾಡುತ್ತಾರೆ. ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಇವತ್ತಿನ ಕಾರ್ಯಕಲಾಪದಲ್ಲಿ ಅವರು ವಕ್ಫ್ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಎದುರೇ ಅವರ ಮಿಮಿಕ್ರಿ ಮಾಡಿ ತೋರಿಸಿದರು. ವಕ್ಫ್ ಭೂವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಜಮೀರ್ ಹೇಗೆ ತಹಸೀಲ್ದಾರ್ ಮತ್ತು ಇತರ ಅಧಿಕಾರಿಗಳನ್ನು ಹೆದರಿಸಿ ರೈತರಿಗೆ ನೋಟೀಸ್​ ಗಳನ್ನು ಮಾಡಿದರು ಅನ್ನೋದನ್ನು ಮಿಮಿಕ್ರಿ ಮಾಡಿದರು. ಅದರೆ, ಜಿಲ್ಲಾಧಿಕಾರಿಗಳ ಆಹ್ವಾನದ ಹೊರತಾಗಿಯೂ ನೀವು ಮೀಟಿಂಗ್​ ಗೆ ಬಂದಿರಲಿಲ್ಲ ಎಂದು ಜಮೀರ್ ಹೇಳಿದಾಗ ಯಾವುದೋ ಊರಿಗೆ ಹೋಗಿದ್ದೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್ ಅಹಮ್ಮದ್!