ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್ ಅಹಮ್ಮದ್!

ವಕ್ಫ್​ ಜಟಾಪಟಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಸವಾಲ್ ಹಾಕಿದ ಜಮೀರ್ ಅಹಮ್ಮದ್!

TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 13, 2024 | 5:05 PM

ಕರ್ನಾಟಕದಲ್ಲಿ ವಕ್ಫ್​ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದು ಈಗ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ವಿಪಕ್ಷ ಬಿಜೆಪಿ ವಕ್ಫ್​ ವಿಚಾರವನ್ನಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಆದ್ರೆ, ಇದಕ್ಕೆ ವಕ್ಫ್​ ಬೋರ್ಡ್ ಸಚಿವ ಜಮೀರ್ ಅಹಮ್ಮದ್ ಖಾನ್ ರಾಜೀನಾಮೆ ನೀಡುವ ಸವಾಲ್ ಹಾಕಿದ್ದಾರೆ. ಹಾಗಾದ್ರೆ, ಜಮೀರ್ ಹಾಗೂ ಅಶೋಕ್ ನಡುವಿನ ಜಟಾಪಟಿ ಹೇಗಿತ್ತು ಎನ್ನುವುದು ಈ ಕೆಳಗಿನಂತಿದೆ.

ಬೆಳಗಾವಿ. (ಡಿಸೆಂಬರ್ 13): ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಕ್ಫ್​ ಆಸ್ತಿ ವಿವಾದ ಪ್ರತಿಧ್ವನಿಸಿದ್ದು, ವಿಪಕ್ಷ ನಾಯಕ ಅಶೋಕ್ ಹಾಗೂ ವಕ್ಫ್ ಬೋರ್ಡ್ ಸಚಿವ ಜಮೀರ್ ಅಹಮ್ಮದ್ ಖಾನ್ ನಡುವೆ ಮಾತಿನ ಜಟಾಪಟಿ ನಡೆದಿದೆ. ವಕ್ಫ್​ ನೋಟಿಸ್ ವಿಚಾರದಲ್ಲಿ ಸುಳ್ಳು ಹೇಳಿದರೆ ಕಟಕಟೆಯಲ್ಲಿ  ನಿಲ್ಲುವೆ ಎಂದು ಸವಾಲ್ ಹಾಕಿದ್ದಾರೆ. ಇದಕ್ಕೆ ಪ್ರತಿಸವಾಲ್ ಹಾಕಿರುವ ಸಚಿವ ಜಮೀರ್,  ವಕ್ಫ್​ ಕಡೆಯಿಂದ ನೋಟಿಸ್​ ಹೋಗಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಗುಡುಗಿದ್ದಾರೆ.

ಸದನದಲ್ಲಿಂದು 69 ಅಡಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್,  ಮೈಸೂರಿನಲ್ಲಿ 110 ಮನೆಗಳಿಗೆ ನೋಟೀಸ್ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಎದ್ದು ನಿಂತ ಜಮೀರ್, ಬಾಯಿಗೆ ಬಂದಂತೆ ಏನೇನೋ ಮಾತಾಡಿಬಿಡೋದಾ? ದಾಖಲೆ ಕೊಡಿ ಎಂದಿದ್ದಾರೆ. 11 ಮನೆಗಳಿಗೆ ನೋಟೀಸ್ ಕೊಡಲು ಆಗುತ್ತಾ? ವಕ್ಪ್ ಕಡೆಯಿಂದ ನೋಟೀಸ್ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು,

ಬಳಿಕ ಮಾತನಾಡಿದ ಅಶೋಕ್, ದಾಖಲೆ ಕೊಡುತ್ತೇನೆ, ಸುಳ್ಳು ಅಂತಾದರೆ ನಾನು ಕಟಕಟೆಯಲ್ಲಿ ನಿಲ್ಲುತ್ತೇನೆ, ಛೀಮಾರಿ ಹಾಕಿ ಎಂದು ಸವಾಲ್ ಹಾಕಿದ್ದಾರೆ. ಈ ಸವಾಲನ್ನು ಸ್ವೀಕರಿಸಿದ ಜಮೀರ್ ಅಹಮ್ಮದ್ ಖಾನ್, ನಿಮ್ಮ ಸವಾಲು ಸ್ವೀಕರಿಸಿದ್ದೇನೆ, ಮೈಸೂರಿನಲ್ಲಿ ವಕ್ಪ್ ಆಸ್ತಿ ಅಲ್ಲದೇ ಬೇರೆಯವರಿಗೆ ವಕ್ಪ್ ಬೋರ್ಡ್ ನಿಂದ ನೋಟೀಸ್ ಕೊಟ್ಟಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರತಿ ಸವಾಲ್ ಹಾಕಿದರು.