Daily Devotional: ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ

Daily Devotional: ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Dec 14, 2024 | 6:50 AM

ಬಸವರಾಜ ಗುರೂಜಿ ಅವರು ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗೆ ಬೀರುತ್ತವೆ ಎಂದು ತಿಳಿಸಿದ್ದಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನನ ಸಮಯದ ಗ್ರಹಗಳ ಸ್ಥಾನವು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಗ್ರಹಗಳ ಚಲನೆಗಳು ಆರೋಗ್ಯ, ಶಿಕ್ಷಣ, ಸಂಬಂಧಗಳು ಮತ್ತು ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದು ತಿಳಿಸಲಾಗಿದೆ. ಮಕ್ಕಳ ಬೆಳವಣಿಗೆ ಮತ್ತು ಅವರ ಭವಿಷ್ಯವನ್ನು ತಿಳಿದುಕೊಳ್ಳಲು ಜ್ಯೋತಿಷ್ಯವು ಒಂದು ಮಾರ್ಗವಾಗಿದೆ.

ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಪ್ರಭಾವವು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಚಲನೆ, ಒಳಿತು-ಕೆಡುಕುಗಳು, ಘಟನೆಗಳು, ಭವಿಷ್ಯ, ಸಮಾಜ, ಪ್ರಾತಿನಿಧ್ಯ, ಸಂವಹನ, ಸಾಹಸ, ತಾತ್ವಿಕ ತಿಳುವಳಿಕೆ, ಆಶಾವಾದ, ಅದೃಷ್ಟ, ಆಧ್ಯಾತ್ಮಿಕ ಅನ್ವೇಷಣೆ, ಶಿಸ್ತು, ಜವಾಬ್ದಾರಿ, ರಚನೆ, ಸಮೃದ್ಧಿ, ಬುದ್ಧಿವಂತಿಕೆ, ವಿಸ್ತರಣೆ ಮುಂತಾದವುಗಳ ಮೇಲೆ ಗ್ರಹಗಳ ಪ್ರಭಾವ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ ಮನುಷ್ಯನ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳು ಸಹ ಗ್ರಹಗಳಿಂದ ನಿಯಂತ್ರಿಸಲ್ಪಡುತ್ತವೆ, ಅಲ್ಲದೇ ಈ ನವಗ್ರಹಗಳೇ ನಮ್ಮ ಹಣೆಬರಹವನ್ನು ಸಹ ರೂಪಿಸುತ್ತದೆ ಎನ್ನಲಾಗುತ್ತದೆ. ನಾವು ಹುಟ್ಟಿದ ಸಮಯದಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ನಮ್ಮ ನಕ್ಷತ್ರವನ್ನು ತಿಳಿಯಲಾಗುತ್ತದೆ. ಮಕ್ಕಳ ಮೇಲೆ ಗ್ರಹಗಳು ಯಾವ ರೀತಿಯಾಗಿ ಪ್ರಭಾವ ಬೀರುತ್ತವೆ ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.