ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು
ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನವು 13 ವರ್ಷಗಳ ಬಳಿಕ ಮರು ತೆರೆದಿದೆ. ಭೂ ವಿವಾದದಿಂದಾಗಿ ದೇವಾಲಯ ಮುಚ್ಚಲ್ಪಟ್ಟಿತ್ತು. ತಹಶೀಲ್ದಾರರ ಮಧ್ಯಸ್ಥಿಕೆಯಿಂದ ಸಮುದಾಯ ನಾಯಕರ ನಡುವೆ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ವಿಶೇಷ ಪೂಜೆ ನಡೆಸಲಾಗಿದೆ ಮತ್ತು ಈಗ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಮುಂದುವರಿಯಲಿವೆ.
ಮೈಸೂರು ಜಿಲ್ಲೆ ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದ ಮಾರಮ್ಮ ದೇವಾಲಯದ ಬಾಗಿಲು 13 ವರ್ಷಗಳ ನಂತರ ತೆರೆದಿದೆ. ದೇವಸ್ಥಾನದ ಜಾಗದ ವಿಚಾರವಾಗಿ 13 ವರ್ಷದ ಹಿಂದೆ ಎರಡು ಸಮುದಾಯದ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು. ಶುಕ್ರವಾರ (ಡಿ.13) ರಂದು ಮೈಸೂರು ತಾಲೂಕು ತಹಶೀಲ್ದಾರ್ ಮಹೇಶ್ ಕುಮಾರ್ ಅವರು ಎರಡು ಸಮುದಾಯದ ಮುಖಂಡರನ್ನು ಕರೆಸಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಸಮಸ್ಯೆ ಬಗೆ ಹರಿದ ಹಿನ್ನೆಲೆಯಲ್ಲಿ ಮುಚ್ಚಿದ್ದ ಮಾರಮ್ಮನ ದೇವಸ್ಥಾನದ ಬಾಗಿಲು ತೆರಯಲಾಯಿತು. ಬಳಿಕ ವಿಶೇಷ ಪೂಜೆ ಮಾಡಲಾಯಿತು. ಇಂದಿನಿಂದ (ಡಿ.14) ಎಂದಿನಂತೆ ಪೂಜಾ ಕೈಂಕರ್ಯ ನಡೆಯಲಿವೆ.
Latest Videos