ಜೈಲಿಂದ ಬಿಡುಗಡೆಯಾಗಿ ಅಲ್ಲು ಅರ್ಜುನ್ ಮನೆಗೆ ಬಂದಾಗ ಸೃಷ್ಟಿಯಾಗಿದ್ದು ಭಾವುಕ ಸನ್ನಿವೇಶ
ಪತ್ನಿ, ಮಕ್ಕಳು, ತಂದೆ ಮತ್ತು ಇತರ ಸಂಬಂಧಿಕರನ್ನು ತಬ್ಬಿ ಮಾತಾಡಿದ ಬಳಿಕ ನಟ ಅಲ್ಲು ಅರ್ಜುನ್ ಅವರ ಮನೆ ಬಳಿ ಜಮಾಯಿಸಿದ್ದ ಜನರತ್ತ ಕೈ ಮಾಡಿ ಕೃತಜ್ಞತೆ ಸಲ್ಲಿಸುತ್ತಾರೆ. ನಂತರ ಮಾಧ್ಯಮದವರಿಗೆ ಆಮೇಲೆ ನಿಮ್ಮೊಂದಿಗೆ ಮಾತಾಡುತ್ತೇನೆ ಎಂದು ಸನ್ನೆಯ ಮೂಲಕ ಹೇಳುತ್ತಾರೆ. ಅರ್ಜುನ್ ಅವರ ‘ಪುಷ್ಪಾ’ ಸೀಕ್ವೆಲ್ ಬಾಕ್ಸಾಫೀಸಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟುತ್ತಿದೆ.
ಹೈದರಾಬಾದ್: ‘ಪುಷ್ಪಾ 2’ ಸಿನಿಮಾ ಪ್ರಿಮೀಯರ್ ಸಂದರ್ಭದಲ್ಲಿ ನಗರದ ಸಂಧ್ಯಾ ಥೇಟರ್ ಬಳಿ ನಡೆದ ಕಾಲ್ತುಳಿತಕ್ಕೆ ರೇವತಿ ಹೆಸರಿನ ಮಹಿಳೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾಹ್ನ ಅರೆಸ್ಟ್ ಅಗಿದ್ದ ತೆಲುಗು ನಟ ಅಲ್ಲು ಅರ್ಜುನ್ ಚಂಚಲಗೂಡ ಪೋಲೀಸ್ ಠಾಣೆಯಿಂದ ಬಿಡುಗಡೆಯಾಗಿ ನಗರದ ಜ್ಯುಬಲೀ ಹಿಲ್ಸ್ನಲ್ಲಿರುವ ಮನೆಗೆ ಬಂದಾಗ ಅತ್ಯಂತ ಭಾವುಕ ಸನ್ನಿವೇಶವೊಂದು ನಿರ್ಮಾಣವಾಗಿತ್ತು. ಅರ್ಜುನ್ ಪತ್ನಿ ಸ್ನೇಹಾ ಮತ್ತು ಮಗ ಓಡೋಡಿ ಬಂದು ಅವರನ್ನು ತಬ್ಬಿಕೊಂಡು ಸಂಭ್ರಮಿಸಿದ್ದು ಅಲ್ಲಿ ನೆರೆದಿದ್ದ ಜನರ ಕಣ್ಣಂಚಿನಲ್ಲಿ ನೀರು ಜಿನುಗಿಸಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೈಲಿನಿಂದ ಹೊರ ಬಂದ ಅಲ್ಲು ಅರ್ಜುನ್ ಮೊದಲ ರಿಯಾಕ್ಷನ್; ದೂರಿದ್ದು ಯಾರನ್ನ ಗೊತ್ತೇ?
Latest Videos