ರಶ್ಮಿಕಾ ಮಂದಣ್ಣ ಹೊಸ ಫೋಟೋಶೂಟ್​ ಕಂಡು ಅಭಿಮಾನಿಗಳು ಫಿದಾ; ಮಿಲಿಯನ್​ ಲೈಕ್ಸ್​

|

Updated on: Dec 14, 2023 | 1:07 PM

ಬಾಡಿಕಾನ್​ ಗೌನ್​ ಧರಿಸಿ ರಶ್ಮಿಕಾ ಮಂದಣ್ಣ ಪೋಸ್​ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ. 6 ಸಾವಿರಕ್ಕೂ ಅಧಿಕ ಕಮೆಂಟ್​ಗಳನ್ನು ಮಾಡುವ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ರಶ್ಮಿಕಾ ಮಂದಣ್ಣ ಹೊಸ ಫೋಟೋಶೂಟ್​ ಕಂಡು ಅಭಿಮಾನಿಗಳು ಫಿದಾ; ಮಿಲಿಯನ್​ ಲೈಕ್ಸ್​
ರಶ್ಮಿಕಾ ಮಂದಣ್ಣ
Follow us on

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಗೆಲುವಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ ‘ಅನಿಮಲ್​’ ಸಿನಿಮಾ (Animal Movie) ಸೂಪರ್​ ಹಿಟ್​ ಆಗಿದೆ. ಬಿಡುಗಡೆಯಾಗಿ 14 ದಿನ ಕಳೆದಿದ್ದರೂ ಕೂಡ ಅನೇಕ ಕಡೆಗಳಲ್ಲಿ ಈಗಲೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಮೂರನೇ ವೀಕೆಂಡ್​ನಲ್ಲಿ ಮತ್ತೆ ಅಬ್ಬರಿಸುವ ನಿರೀಕ್ಷೆ ಇದೆ. ಇದೇ ಖುಷಿಯಲ್ಲಿ ರಶ್ಮಿಕಾ ಮಂದಣ್ಣ ಅವರು ಹೊಸ ಫೋಟೋಶೂಟ್​ (Rashmika Mandanna Photoshoot) ಮಾಡಿಸಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ದಿನದಿಂದ ದಿನಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ ಇರುವ ಫ್ಯಾನ್ ಫಾಲೋಯಿಂಗ್​ ಹೆಚ್ಚಾಗುತ್ತಿದೆ.

ಚಾಕೋಲೇಟ್​ ಬಣ್ಣದ ಬಾಡಿಕಾನ್​ ಗೌನ್​ ಧರಿಸಿ ರಶ್ಮಿಕಾ ಮಂದಣ್ಣ ಪೋಸ್​ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿದೆ. 6 ಸಾವಿರಕ್ಕೂ ಅಧಿಕ ಕಮೆಂಟ್​ಗಳನ್ನು ಮಾಡುವ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಫ್ಯಾನ್ಸ್​ ಪೇಜ್​ಗಳಲ್ಲಿ ಈ ಫೋಟೋ ವೈರಲ್​ ಆಗಿದೆ.

ರಶ್ಮಿಕಾ ಮಂದಣ್ಣ ಅವರಿಗೆ ಫೋಟೋಶೂಟ್​ ಬಗ್ಗೆ ವಿಶೇಷ ಕ್ರೇಜ್​ ಇದೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಆಗಾಗ ಫೋಟೋಶೂಟ್​ ಮಾಡಿಸುತ್ತಾ ಇರುತ್ತಾರೆ. ಅವುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆಯೇ ಇನ್​ಸ್ಟಾಗ್ರಾಮ್​ನಲ್ಲಿ ಅವರ ಫಾಲೋವರ್ಸ್​ ಸಂಖ್ಯೆ ಹೆಚ್ಚಾಗುತ್ತಿದೆ. ‘ಅನಿಮಲ್​’ ಸಿನಿಮಾ ಗೆದ್ದ ಬಳಿಕ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ.

ಇದನ್ನೂ ಓದಿ: ಈ ‘ಗರ್ಲ್​ಫ್ರೆಂಡ್​’ ನೀವು ಅಂದುಕೊಂಡಂತೆ ಇಲ್ಲ; ರಶ್ಮಿಕಾ ಮಂದಣ್ಣ ಬಗ್ಗೆ ಇಲ್ಲಿದೆ ಹೊಸ ಸುದ್ದಿ

ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮಂದಣ್ಣ ಅವರು 4 ಕೋಟಿ ಫಾಲೋವರ್ಸ್​ ಪಡೆದಿದ್ದರು. ಕೆಲವೇ ದಿನಗಳಲ್ಲಿ 5 ಲಕ್ಷ ಮಂದಿ ಹೊಸ ಫಾಲೋವರ್ಸ್​ ಸೇರ್ಪಡೆ ಆಗಿದ್ದಾರೆ. ‘ಅನಿಮಲ್​’ ಸಿನಿಮಾದ ಯಶಸ್ಸು ಇದಕ್ಕೆಲ್ಲ ಕಾರಣ. ಈಗ ‘ಪುಷ್ಪ 2’, ‘ದಿ ಗರ್ಲ್​ಫ್ರೆಂಡ್​’ ಮುಂತಾದ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.