‘ಅನಿಮಲ್’ ಸೆಟ್ನ ಚಿತ್ರ ಹಂಚಿಕೊಂಡ ರಶ್ಮಿಕಾ, ‘ಗೀತಾಂಜಲಿ’ ಆಗಿದ್ದು ಹೀಗೆ
Rashmika Mandanna: ‘ಅನಿಮಲ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ರಣ್ಬೀರ್ ಕಪೂರ್ ಜೊತೆಗೆ ನಾಯಕಿ ರಶ್ಮಿಕಾರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಶ್ಮಿಕಾ ತಮ್ಮ ಪಾತ್ರದ ಚತ್ರೀಕರಣದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
Updated on: Dec 10, 2023 | 8:01 PM

‘ಅನಿಮಲ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ರಣ್ಬೀರ್ ಕಪೂರ್ ಜೊತೆಗೆ ನಾಯಕಿ ರಶ್ಮಿಕಾರ ನಟನೆಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಅನಿಮಲ್’ ಸಿನಿಮಾದಲ್ಲಿ ಗೀತಾಂಜಲಿ ಹೆಸರಿನ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ರಶ್ಮಿಕಾ ಈವರೆಗೆ ನಟಿಸಿರುವ ಪಾತ್ರಗಳಲ್ಲಿಯೇ ವಿಭಿನ್ನವಾದ ಪಾತ್ರವದು.

‘ಗೀತಾಂಜಲಿ’ ಪಾತ್ರವನ್ನು ರಶ್ಮಿಕಾ ಮಂದಣ್ಣ ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ. ಇದೀಗ ‘ಅನಿಮಲ್’ ಸಿನಿಮಾದ ತಮ್ಮ ಚಿತ್ರೀಕರಣದ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸೆಟ್ನಲ್ಲಿ ವಾತಾವರಣ ಹೇಗಿರುತ್ತಿತ್ತು, ಪಾತ್ರಕ್ಕೆ ಹೇಗೆ ಗಂಭೀರವಾಗಿ ತಯಾರಾಗುತ್ತಿದ್ದೆ ಎಂಬುದನ್ನು ಚಿತ್ರಗಳ ಮೂಲಕ ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣಗೆ ರೊಮ್ಯಾಂಟಿಕ್ ದೃಶ್ಯಗಳ ಜೊತೆಗೆ ಕೆಲವು ‘ಗ್ಲಾಮರಸ್ ದೃಶ್ಯಗಳು ಸಹ ಸಿನಿಮಾದಲ್ಲಿವೆ.

ರಶ್ಮಿಕಾ ಮಂದಣ್ಣ ಪ್ರಸ್ತುತ ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಎರಡೂ ಕಡೆ ಅವರಿಗೆ ಬೇಡಿಕೆ ಇದೆ.

ರಶ್ಮಿಕಾ ಪ್ರಸ್ತುತ ತೆಲುಗಿನ ‘ಗರ್ಲ್ಫ್ರೆಂಡ್’, ‘ಪುಷ್ಪ 2’ ಹಾಗೂ ಹಿಂದಿಯ ‘ಚಾವಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
























