200MP ಕ್ಯಾಮೆರಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿ ಯಾವಾಗ ಬಿಡುಗಡೆ?

Samsung Galaxy S24 release date: ತನ್ನ ಎಸ್ ಸರಣಿಯ ಅಡಿಯಲ್ಲಿ ವರ್ಷಕ್ಕೊಂದು ಫೋನ್ ಬಿಡುಗಡೆ ಮಾಡುವ ಸ್ಯಾಮ್​ಸಂಗ್, ಇದೀಗ ತನ್ನ ಗ್ಯಾಲಕ್ಸಿ S24 ಸರಣಿ ಫೋನನ್ನು ಮುಂದಿನ ವರ್ಷದ ಫೆಬ್ರವರಿಯಲ್ಲಿ ರಿಲೀಸ್ ಮಾಡಲಿದೆ. ಈ ಫೋನ್​ನಲ್ಲಿ ವಿಶೇಷವಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

|

Updated on: Dec 10, 2023 | 3:38 PM

ಸ್ಯಾಮ್​ಸಂಗ್ ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ತನ್ನ ಎಸ್ ಸರಣಿಯ ಫೋನುಗಳನ್ನು ದೊಡ್ಡ ಮಟ್ಟದಲ್ಲಿ ಅನಾವರಣ ಮಾಡುತ್ತದೆ. ಸ್ಯಾಮ್‌ಸಂಗ್ ಈ ವರ್ಷದ ಆರಂಭದಲ್ಲಿ ಗ್ಯಾಲಕ್ಸಿ S23 ಸರಣಿಯನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಈಗಲೂ ಟ್ರೆಂಡಿಂಗ್​ನಲ್ಲಿದೆ.

1 / 7
ತನ್ನ ಎಸ್ ಸರಣಿಯ ಅಡಿಯಲ್ಲಿ ವರ್ಷಕ್ಕೊಂದು ಫೋನ್ ಬಿಡುಗಡೆ ಮಾಡುವ ಸ್ಯಾಮ್​ಸಂಗ್ ಮುಂದಿನ ವರ್ಷದ ಫೆಬ್ರವರಿಯಲ್ಲಿ S24 ಸರಣಿಯನ್ನು ರಿಲೀಸ್ ಮಾಡಲಿದೆ. ಈ ಫೋನ್​ನಲ್ಲಿ ವಿಶೇಷವಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

2 / 7
ಈ ವರ್ಷದ ಆರಂಭದಲ್ಲಿ ಬಿಡುಗಡೆ ಆದ ಟಾಪ್-ಎಂಡ್ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್​ಫೋನ್​ನ ಕ್ಯಾಮೆರಾ ಕೂಡ ಅದ್ಭುತವಾಗಿತ್ತು. ಇದು 200-ಮೆಗಾಪಿಕ್ಸೆಲ್​ನ ಸ್ಯಾಮ್​ಸಂಗ್ ISOCELL HP2 ಸೆನ್ಸಾರ್ ಹೊಂದಿತ್ತು. ಇದು ಹಿಂದಿನ ಗ್ಯಾಲಕ್ಸಿ S22 ಅಲ್ಟ್ರಾದಲ್ಲಿನ 108-ಮೆಗಾಪಿಕ್ಸೆಲ್ ಸಂವೇದಕದ ಅಪ್‌ಗ್ರೇಡ್ ಆಗಿದೆ.

3 / 7
ಮುಂದಿನ ವರ್ಷದ ಗ್ಯಾಲಕ್ಸಿ S24 ಅಲ್ಟ್ರಾ ಮತ್ತಷ್ಟು ಕ್ಯಾಮೆರಾ ಸುಧಾರಣೆಯೊಂದಿಗೆ ಬಿಡುಗಡೆ ಆಗಲಿದೆಯಂತೆ. ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ ಹೊಸದಾದ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಟಿಪ್‌ಸ್ಟರ್ ಐಸ್ ಯೂನಿವರ್ಸ್ (@UniverseIce) X (ಈ ಹಿಂದೆ Twitter) ನಲ್ಲಿ ಗ್ಯಾಲಕ್ಸಿ S24 ಅಲ್ಟ್ರಾದ ಕ್ಯಾಮೆರಾ ಫೀಚರ್ಸ್ ಅನ್ನು ಬಹಿರಂಗ ಪಡಿಸಿದ್ದಾರೆ.

4 / 7
ಟಿಪ್‌ಸ್ಟರ್ ಪ್ರಕಾರ, ಸ್ಯಾಮ್‌ಸಂಗ್‌ನ 2024 ಫ್ಲ್ಯಾಗ್‌ಶಿಪ್ ಸ್ಮಾರ್ಟ್​ಫೋನ್ 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL HP2SX ಸಂವೇದಕವನ್ನು ಹೊಂದಿರುತ್ತದೆ. ಈ ಇಮೇಜ್ ಸಂವೇದಕವು ಗ್ಯಾಲಕ್ಸಿ S23 ಅಲ್ಟ್ರಾದ ISOCELL HP2 ಸಂವೇದಕದ ಆಪ್ಟಿಮೈಸ್ಡ್ ಆವೃತ್ತಿಯಾಗಿದೆ. ಇದು 1/1.3 ಆಪ್ಟಿಕಲ್ ಫಾರ್ಮ್ಯಾಟ್‌ನಲ್ಲಿ 200 ಮಿಲಿಯನ್ ಪಿಕ್ಸೆಲ್‌ಗಳನ್ನು ಒಳಗೊಂಡಿರುತ್ತದಂತೆ. ಮತ್ತು 0.6-ಮೈಕ್ರಾನ್ ಪಿಕ್ಸೆಲ್‌ಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

5 / 7
200-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ, ಗ್ಯಾಲಕ್ಸಿ S24 ಅಲ್ಟ್ರಾ ಫೋನಿನಲ್ಲಿ ಹೊಸ ಟೆಲಿಫೋಟೋ ಲೆನ್ಸ್‌ ಕೂಡ ನೀಡಲಾಗುತ್ತದೆ. 3x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಪ್ಯಾಕ್ ಮಾಡಲಿದೆ. ಸ್ನಾಪ್​ಡ್ರಾಗನ್ 8 Gen 3 ಪ್ರೊಸೆಸರ್ ಇರುವ ಸಾಧ್ಯತೆ ಇದೆ. ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ನಲ್ಲಿ ಎಕ್ಸಿನೊಸ್ 2400 SoC ಯೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

6 / 7
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯಲ್ಲಿ ಟೈಟಾನಿಯಂ ಫ್ರೇಮ್‌ಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಇದು ಅಲ್ಯೂಮಿನಿಯಂ ಚಾಸಿಸ್ ಅನ್ನು ಹೊಂದಿವೆ. ಇದಲ್ಲದೆ, ಗ್ಯಾಲಕ್ಸಿ S24 ಆಲ್ಟ್ರಾ ದೀರ್ಘ ಸಮಯ ಬಾಳಕೆ ಬರುವ ಬಲಿಷ್ಠ ಬ್ಯಾಟರಿ ಅವಧಿಯನ್ನು ನೀಡಲು ಹೊಸ EV ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ ಎಂಬ ಮಾಹಿತಿ ಕೂಡ ಸೋರಿಕೆ ಆಗಿದೆ.

7 / 7
Follow us
Daily Devotional: ಪಂಚಮುಖ ರುದ್ರಾಕ್ಷಿ ಧಾರಣೆಯ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯ ಅವಿವಾಹಿತರಿಗೆ ಇಂದು ವಿವಾಹ ನಿಶ್ಚಯವಾಗಲಿದೆ

International Yoga Day: ಶ್ರೀನಗರದ ದಾಲ್​ ಸರೋವರದ ತಟದಲ್ಲಿ ಮೋದಿ ಯೋಗ

ಕ್ಯಾಮೆರಾ ಕೆಲಸ ನೋಡಿಕೋ ಅಂತ ಪಾರ್ವತಮ್ಮ ಹೇಳಿದ್ದಕ್ಕೆ ದರ್ಶನ್​ಗೆ ಬೇಸರ

ಮತ್ತೆ ದರ್ಶನ್​ ಹಾಗೂ ಗ್ಯಾಂಗ್ ಖಾಕಿ ಕಸ್ಟಡಿಗೆ! ಜಿ.ಪರಮೇಶ್ವರ್ ಹೇಳಿದ್ದೇನು

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರೀ ಅನಾಹುತ

ಜೈಲಿಗೆ ಹೋದ ಪವಿತ್ರಾ ಗೌಡ; ಅಮ್ಮನಿಗಾಗಿ ಪೊಲೀಸ್ ವ್ಯಾನ್ ಹೊರಗೆ ಕಾದ ಮಗಳು

ರೇಣುಕಾ ಸ್ವಾಮಿ ಪ್ರಕರಣ: ಪವಿತ್ರಾ ಗೌಡ ಪರ ವಕೀಲರ ಆಕ್ರೋಶದ ಪ್ರತಿಕ್ರಿಯೆ

ಕೋರ್ಟ್​ ಆವರಣದಲ್ಲೂ ದರ್ಶನ್​ಗೆ ಅಭಿಮಾನಿಗಳ ಜೈಕಾರ; ವಿಡಿಯೋ ನೋಡಿ..

ಕಟ್ಟಡ ದಿಢೀರ್ ಕುಸಿತ; ಅವಶೇಷಗಳಡಿ ಸಿಲುಕಿದ್ದ 8 ಕಾರ್ಮಿಕರ ಪೈಕಿ 2 ರಕ್ಷಣೆ