- Kannada News Photo gallery Cricket photos CSK may look for a guy like Harshal Patel in 2024 auction says Irfan Pathan
‘ಆರ್ಸಿಬಿ ಹೊರಹಾಕಿದ ದುಬಾರಿ ವೇಗಿಯನ್ನು ಸಿಎಸ್‌ಕೆ ಖರೀದಿಸಬೇಕು’; ಇರ್ಫಾನ್ ಪಠಾಣ್
IPL 2024 Auction: ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಇರ್ಫಾನ್ ಪಠಾಣ್, ಸಿಎಸ್‌ಕೆ ಬಹಳಷ್ಟು ವೇಗದ ಬೌಲರ್‌ಗಳನ್ನು ಹೊಂದಿದೆ. ಆದರೆ ಅವರ ನಿಯಮಿತ ಇಜುರಿ ಸಮಸ್ಯೆಯನ್ನು ಪರಿಗಣಿಸಿ, ಫ್ರಾಂಚೈಸ್ ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ ಎಂದು ಹೇಳಿದ್ದಾರೆ.
Updated on:Dec 10, 2023 | 11:49 AM

ಐಪಿಎಲ್‌ನ ಮುಂದಿನ ಸೀಸನ್‌ಗಾಗಿ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜು ನಡೆಯಲ್ಲಿದೆ. ಈ ಹರಾಜಿನಲ್ಲಿ ಫ್ರಾಂಚೈಸಿಗಳು ತಮ್ಮ ಬೇಕಾದ ಆಟಗಾರರ ಮೇಲೆ ಹಣದ ಮಳೆ ಹರಿಸುವುದು ಖಚಿತ. ಅದರಲ್ಲೂ ತಂಡಕ್ಕೆ ಪ್ರಮುಖ ವೇಗಿಯನ್ನು ಹುಡುಕುತ್ತಿರುವ ಸಿಎಸ್‌ಕೆ ಫ್ರಾಂಚೈಸಿ ಆರ್ಸಿಬಿ ಬಿಡುಗಡೆ ಮಾಡಿದ ಬೌಲರ್ ಮೇಲೆ ಕಣ್ಣಿಟ್ಟಿದೆ ಎಂದ ಇರ್ಫಾನ್ ಪಠಾಣ್ ಹೇಳಿದ್ದಾರೆ.

ವರದಿಗಳ ಪ್ರಕಾರ, ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ದೀಪಕ್ ಚಹಾರ್ ಮತ್ತು ಮಥಿಶಾ ಪತಿರಾನರ ಇಂಜುರಿ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ.

ಹೀಗಾಗಿ ಫ್ರಾಂಚೈಸ್ ತನ್ನ ಪಾಳೆಯಕ್ಕೆ ಹರ್ಷಲ್ ಪಟೇಲ್ ಅವರನ್ನು ಸೇರಿಸಿಕೊಳ್ಳಬಹುದು ಎಂದು ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಇರ್ಫಾನ್ ಪಠಾಣ್, ಸಿಎಸ್‌ಕೆ ಬಹಳಷ್ಟು ವೇಗದ ಬೌಲರ್‌ಗಳನ್ನು ಹೊಂದಿದೆ. ಆದರೆ ಅವರ ನಿಯಮಿತ ಇಜುರಿ ಸಮಸ್ಯೆಯನ್ನು ಪರಿಗಣಿಸಿ, ಫ್ರಾಂಚೈಸ್ ಹೊಸ ವೇಗದ ಬೌಲರ್‌ಗಾಗಿ ಹುಡುಕುತ್ತಿದೆ ಎಂದು ಹೇಳಿದ್ದಾರೆ.

ತಂಡದಲ್ಲಿರುವ ದೀಪಕ್ ಚಾಹರ್ ಮತ್ತು ಮತಿಸಾ ಪತಿರಾನ, ಈ ಇಬ್ಬರೂ ಬೌಲರ್‌ಗಳು ಒಟ್ಟಿಗೆ ಗಾಯಗೊಂಡರೆ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಸಿಎಸ್‌ಕೆ ಹರ್ಷಲ್ ಪಟೇಲ್ ಅವರಂತಹ ಬೌಲರ್ ಅನ್ನು ಖರೀದಿಸುವ ಸಾಧ್ಯತೆಯಿದೆ ಎಂದು ಪಠಾಣ್ ಹೇಳಿದರು.

ವಾಸ್ತವವಾಗಿ ಮಿನಿ ಹರಾಜಿಗೂ ಮೊದಲು ಹರ್ಷಲ್ ಪಟೇಲ್ ಅವರನ್ನು ಆರ್ಸಿಬಿ ತನ್ನ ತಂಡದಿಂದ ಬಿಡುಗಡೆ ಮಾಡಿದೆ. 2021 ರ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಸಿಎಸ್‌ಕೆ ತಂಡ ಸೇರುವ ಸಾಧ್ಯತೆಗಳು ಹೆಚ್ಚಿವೆ.

ಏಕೆಂದರೆ ಹರ್ಷಲ್ ಪಟೇಲ್ ಆರ್ಸಿಬಿಯಲ್ಲಿದ್ದಾಗ, ಅವರು ಬೆಂಗಳೂರಿನ ಪರಿಸ್ಥಿತಿಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಮತ್ತು ಚೆನ್ನೈ ಮತ್ತು ಬೆಂಗಳೂರಿನ ಪರಿಸ್ಥಿತಿಗಳು ಸಾಕಷ್ಟು ಹೋಲುತ್ತವೆ. ಆದ್ದರಿಂದ ಪಠಾಣ್, ಹರಾಜಿನಲ್ಲಿ ಸಿಎಸ್‌ಕೆ ಹರ್ಷಲ್ ಖರೀದಿಗೆ ಮುಂದಾಗಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ.
Published On - 11:48 am, Sun, 10 December 23




