- Kannada News Photo gallery Cricket photos Rahul Dravid's new contract to be finalised after South Africa tour says Jay Shah
ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅಧಿಕಾರಾವಧಿ ಎಷ್ಟು ದಿನ? ಜಯ್ ಶಾ ಹೇಳಿದ್ದೇನು?
Rahul Dravid: 2023 ರ ಏಕದಿನ ವಿಶ್ವಕಪ್ ನಂತರ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಂಡಿತು. ಆದರೆ ಅವರನ್ನು ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಇದೀಗ ಜಯ್ ಶಾ ತಮ್ಮ ಕೋಚ್ ಹುದ್ದೆಗೆ ಸಂಬಂಧಿಸಿದಂತೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.
Updated on: Dec 10, 2023 | 8:15 AM

ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರಸ್ತುತ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಅಲ್ಲಿ ತಂಡವು ಮೂರು ಪಂದ್ಯಗಳ ಟಿ 20 ಮತ್ತು ಏಕದಿನ ಸರಣಿಯಲ್ಲಿ ಭಾಗವಹಿಸಬೇಕಾಗಿದೆ ಮತ್ತು ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.

2023 ರ ಏಕದಿನ ವಿಶ್ವಕಪ್ ನಂತರ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಂಡಿತು. ಆದರೆ ಅವರನ್ನು ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಇದೀಗ ಜಯ್ ಶಾ ತಮ್ಮ ಕೋಚ್ ಹುದ್ದೆಗೆ ಸಂಬಂಧಿಸಿದಂತೆ ದೊಡ್ಡ ಹೇಳಿಕೆಯನ್ನು ನೀಡಿದ್ದು, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ನಂತರ ಅವರ ಅಧಿಕಾರಾವಧಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಜಯ್ ಶಾ, ಭಾರತ ತಂಡವು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯ ಅವಧಿಯನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಏಕದಿನ ವಿಶ್ವಕಪ್ 2023 ರ ನಂತರ ಹೊರಬಿದ್ದಿರುವ ಕೆಲವು ಸುದ್ದಿಗಳ ಪ್ರಕಾರ, ರಾಹುಲ್ ದ್ರಾವಿಡ್ 2023 ರ ಟಿ20 ವಿಶ್ವಕಪ್ವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಉಳಿಯುವ ಸಾಧ್ಯತೆಗಳಿವೆ.

ಕೆಲ ದಿನಗಳ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, ನಾನು ಇನ್ನೂ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಹೇಳಿದ್ದರು. ಇದೀಗ ಜಯ್ ಶಾ ಹೇಳಿಕೆ ಈ ವಿಚಾರಕ್ಕೆ ಹೊಸ ಟ್ವಿಸ್ಟ್ ನೀಡಿದ್ದು, ಇದಾದ ಬಳಿಕ ಅವರು ಈ ಹುದ್ದೆಯಲ್ಲಿ ಎಷ್ಟು ದಿನ ಇರುತ್ತಾರೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇನ್ನು, ಜಯ್ ಶಾ ನೀಡಿದ ಹೇಳಿಕೆಯ ನಂತರ, ತಂಡವು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ, ದ್ರಾವಿಡ್ ಅವರು ಎಷ್ಟು ಸಮಯದವರೆಗೆ ಈ ತಂಡದ ಮುಖ್ಯ ಕೋಚ್ ಆಗಿರುತ್ತಾರೆ? ಅಥವಾ ಬೇರೆ ಯಾರಾದರೂ ಈ ಜವಬ್ದಾರಿ ಹೊರುತ್ತಾರಾ? ಎಂಬ ಅಂಶದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.

ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಭಾರತ ತಂಡವು 2023 ರ ಏಕಿನ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿತ್ತು. ಆದರೆ ತಂಡವು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತು. ಈ ಸೋಲಿನ ಬಗ್ಗೆ ರಾಹುಲ್ ದ್ರಾವಿಡ್, ಪಿಚ್ ಅನ್ನು ಗ್ರಹಿಸುವಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಯಶಸ್ವಿಯಾಗಲಿಲ್ಲ ಮತ್ತು ಇದರಿಂದಾಗಿ ನಾವು ಅಂತಿಮ ಪಂದ್ಯದಲ್ಲಿ ಸೋತಿದ್ದೇವೆ ಎಂದು ಹೇಳಿಕೊಂಡಿದ್ದರು.




