‘ಕಭಿ ಖುಷಿ ಕಭಿ ಗಮ್​’ ಸಿನಿಮಾಗೆ 22 ವರ್ಷ; ನೆನಪಿನ ಪುಟ ತೆರೆದ ನಟಿ ಕಾಜೋಲ್​

|

Updated on: Dec 14, 2023 | 12:33 PM

‘ಕಭಿ ಖುಷಿ ಕಭಿ ಗಮ್​’ ಚಿತ್ರದ ಶೂಟಿಂಗ್​ ಸಂದರ್ಭವನ್ನು ಕಾಜೋಲ್​ ನೆನಪು ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಕರಣ್​ ಜೋಹರ್​ ಕೂಡ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಇದಕ್ಕೆ ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಕಭಿ ಖುಷಿ ಕಭಿ ಗಮ್​’ ಸಿನಿಮಾಗೆ 22 ವರ್ಷ; ನೆನಪಿನ ಪುಟ ತೆರೆದ ನಟಿ ಕಾಜೋಲ್​
ಕಭಿ ಖುಷಿ ಕಭಿ ಗಮ್​
Follow us on

ಡಿಸೆಂಬರ್​ 14 ಎಂದರೆ ನಟಿ ಕಾಜೋಲ್​ (Kajol) ಅವರಿಗೆ ವಿಶೇಷ ದಿನ. ಅವರಿಗೆ ಮಾತ್ರವಲ್ಲದೇ ಶಾರುಖ್​ ಖಾನ್​, ಕರಣ್​ ಜೋಹರ್​ ಮುಂತಾದವರಿಗೂ ಈ ದಿನ ಸಖತ್​ ಸ್ಪೆಷಲ್​. ಯಾಕೆಂದರೆ ‘ಕಭಿ ಖುಷಿ ಕಭಿ ಗಮ್​’ (Kabhi Khushi Kabhie Gham) ಸಿನಿಮಾ ಬಿಡುಗಡೆಯಾದ ದಿನಾಂಕ ಇದು. 2001ರ ಡಿಸೆಂಬರ್​ 14ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಇಂದಿಗೆ 22 ವರ್ಷಗಳನ್ನು ಪೂರೈಸಿದೆ. ಈ ಖುಷಿಯಲ್ಲಿ ನಟಿ ಕಾಜೋಲ್​, ನಿರ್ದೇಶಕ ಕರಣ್​ ಜೋಹರ್​ (Karan Johar) ಮುಂತಾದವರು ನೆನಪಿನ ಪುಟ ತೆರೆದಿದ್ದಾರೆ. ಅಭಿಮಾನಿಗಳು ಕೂಡ ಈ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ.

22 ವರ್ಷಗಳು ಉರುಳಿದರೂ ಅಭಿಮಾನಿಗಳ ಫೇವರಿಟ್​ ಸಿನಿಮಾಗಳ ಲಿಸ್ಟ್​ನಲ್ಲಿ ‘ಕಭಿ ಖುಷಿ ಕಭಿ ಗಮ್​’ ಸಿನಿಮಾ ಸ್ಥಾನ ಉಳಿಸಿಕೊಂಡಿದೆ. ಆ ಸಿನಿಮಾದ ಹಾಡುಗಳು ಇಂದಿಗೂ ಎವರ್​ಗ್ರೀನ್​ ಆಗಿವೆ. ರಾಣಿ ಮುಖರ್ಜಿ, ಹೃತಿಕ್​ ರೋಷನ್​, ಶಾರುಖ್​ ಖಾನ್​, ಕಾಜೋಲ್​, ಅಮಿತಾಭ್​ ಬಚ್ಚನ್​, ಜಯಾ ಬಚ್ಚನ್​, ಕರೀನಾ ಕಪೂರ್​ ಮುಂತಾದವರು ನಟಿಸಿದ್ದ ಈ ಸಿನಿಮಾ ಎಂದರೆ ಸಿನಿಪ್ರಿಯರಿಗೆ ಬಹಳ ಇಷ್ಟ.

ಇದನ್ನೂ ಓದಿ: ‘ಕಾಫಿ ವಿತ್​ ಕರಣ್​’ ಶೋಗೆ ಬಂದು ಕೋಪ ಮಾಡಿಕೊಂಡ ನಟಿ ಕಾಜೋಲ್​

‘ಕಭಿ ಖುಷಿ ಕಭಿ ಗಮ್​’ ಸಿನಿಮಾದ ಪಾತ್ರಗಳನ್ನು ಪ್ರೇಕ್ಷಕರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಆ ದಿನದ ನೆನಪುಗಳನ್ನು ಕಾಜೋಲ್​ ಅವರು ಮೆಲುಕು ಹಾಕಿದ್ದಾರೆ.

ಆ ಸಿನಿಮಾದ ನೆನಪಿಗಾಗಿ ಕಾಜೋಲ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಆರ್ಯನ್​ ಖಾನ್​ ಕಾಣಿಸಿಕೊಂಡ ಮೊದಲ ಸಿನಿಮಾ ಎಂದು ಕೂಡ ಅವರು ಹೇಳಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ಕಾಜೋಲ್​ ಬಳಿಕ ನಟಿ ಆಲಿಯಾ ಭಟ್​ಗೆ ಶುರುವಾಯ್ತು ಡೀಪ್​ಫೇಕ್​ ಕಾಟ

‘ಕಭಿ ಖುಷಿ ಕಭಿ ಗಮ್​’ ಚಿತ್ರದ ಶೂಟಿಂಗ್​ ಸಂದರ್ಭವನ್ನು ಕಾಜೋಲ್​ ನೆನಪು ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕಮೆಂಟ್​ ಮಾಡುವ ಮೂಲಕ ‘ಇದು ನಮ್ಮ ಫೇವರಿಟ್​ ಸಿನಿಮಾ. ಬೇರೆ ಎಲ್ಲ ಚಿತ್ರಗಳಿಗಿಂತಲೂ ನಮಗೆ ಇದು ಹೆಚ್ಚು ಇಷ್ಟ’ ಎಂದಿದ್ದಾರೆ. ಕರಣ್​ ಜೋಹರ್​ ಕೂಡ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.