‘ಡ್ರೋನ್ ಪ್ರತಾಪ್​ಗೆ ವ್ಯಕ್ತಿತ್ವವೇ ಇಲ್ಲ, ಸಿಂಪತಿಯಲ್ಲೇ ಬದುಕುತ್ತಿದ್ದಾನೆ’; ಸಿಡಿದೆದ್ದ ಮೈಕಲ್

|

Updated on: Dec 14, 2023 | 2:47 PM

‘ಡ್ರೋನ್ ಪ್ರತಾಪ್​ಗೆ ವ್ಯಕ್ತಿತ್ವವೇ ಇಲ್ಲ, ಸಿಂಪತಿಯಲ್ಲೇ ಬದುಕುತ್ತಿದ್ದಾನೆ. ಅವನು ನನಗೆ ಪ್ರತಿಸ್ಪರ್ಧಿ ಅಲ್ಲ. ನಾನು ಆತ ಪ್ರತಿ ಸ್ಪರ್ಧಿ ಎಂದು ಪರಿಗಣಿಸುವುದೂ ಇಲ್ಲ’ ಎಂದಿದ್ದಾರೆ ಮೈಕಲ್.

ಮೈಕಲ್ ಅಜಯ್ ಹಾಗೂ ಡ್ರೋನ್ ಪ್ರತಾಪ್ (Drone Prathap) ಮಧ್ಯೆ ಒಳ್ಳೆಯ ಬಾಂಡಿಗ್ ಬೆಳೆದೇ ಇಲ್ಲ. ಈ ವಿಚಾರ ಅವರಿಗೂ ತಿಳಿದಿದೆ. ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಇವರು ಮುಂದಾಗಿಲ್ಲ. ಈಗ ಇವರ ಅಸಮಾಧಾನ ಭುಗಿಲೆದ್ದಿದೆ. ‘ಬಿಗ್ ಬಾಸ್ ಆದರೆ ಮನೆಯಿಂದ ಯಾರನ್ನು ಎಲಿಮಿನೇಟ್ ಮಾಡುತ್ತೀರಿ’ ಎನ್ನುವ ಪ್ರಶ್ನೆ ಕೇಳಲಾಯಿತು. ಪ್ರತಾಪ್ ಅವರು ಮೈಕಲ್ ಹೆಸರನ್ನು ತೆಗೆದುಕೊಂಡರು. ಇದಕ್ಕೆ ಮೈಕಲ್ ಕೌಂಟರ್ ನೀಡಿದ್ದಾರೆ. ‘ಡ್ರೋನ್ ಪ್ರತಾಪ್​ಗೆ ವ್ಯಕ್ತಿತ್ವವೇ ಇಲ್ಲ, ಸಿಂಪತಿಯಲ್ಲೇ ಬದುಕುತ್ತಿದ್ದಾನೆ. ಅವನು ನನಗೆ ಪ್ರತಿಸ್ಪರ್ಧಿ ಅಲ್ಲ. ನಾನು ಆತ ಪ್ರತಿ ಸ್ಪರ್ಧಿ ಎಂದು ಪರಿಗಣಿಸುವುದೂ ಇಲ್ಲ’ ಎಂದಿದ್ದಾರೆ ಮೈಕಲ್. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Dec 14, 2023 02:46 PM