ಬೆಳಗಾವಿ ಅಧಿವೇಶನ: ಕೋಟ್ ಧರಿಸಿ ತಡವಾಗಿ ಅಧಿವೇಶನಕ್ಕೆ ಬಂದ ಚಲುವರಾಯಸ್ವಾಮಿ ಕಾಲೆಳೆದ ವಿಪಕ್ಷ ನಾಯಕ ಅಶೋಕ
Karnataka Assembly Winter Session: ಸಚಿವ ಚಲುವರಾಯಸ್ವಾಮಿ ಇಂದು ತಡವಾಗಿ ಅಧಿವೇಶನಕ್ಕೆ ಆಗಮಿಸಿದ್ದರು. ಅದೇ ಕಾರಣಕ್ಕೆ ಅಶೋಕ, ಚರ್ಚೆ ಏನು ನಡೆದಿದೆ ಅಂತ ಸಚಿವರಿಗೆ ಗೊತ್ತಿರಲಿಕ್ಕಿಲ್ಲ, ಎಲ್ಲ ಶಾಸಕರಿಗೆ ಮಧ್ಯಾಹ್ನದ ಊಟ ಕೊಡೋದಿಕ್ಕೆ ಮೋದಿ ಕೋಟು ಧರಿಸಲು ಹೋಗಿದ್ದೀರಂತ ಅಂತ ಕಾಣುತ್ತೆ ಎಂದು ಛೇಡಿಸುತ್ತಾರೆ.
ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ (Assembly Session) ಇಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಮತ್ತು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ನಡುವೆ ವಿನೋದಭರಿತ ಮಾತಿನ ಚಕಮಕಿ ನಡೆಯಿತು. ಮಾತಿಗೆ ಕಾರಣವಾಗಿದ್ದು ಸಚಿವ ಧರಿಸಿದ್ದ ವೇಸ್ಟ್ ಕೋಟ್! ಆಲೆಮನೆಗಳ ಬಗ್ಗೆ ವಿಷಯ ಪ್ರಸ್ತಾಪಿಸಿದ ಅಶೋಕ್ ಹಿಂದೆ ಆರೋಗ್ಯ ಸಚಿವ ಚಲುವರಾಯಸ್ವಾಮಿಯವರ ಕಾಲೆಳೆಯುತ್ತಾರೆ. ಅಸಲಿಗೆ, ಸಚಿವ ಇಂದು ತಡವಾಗಿ ಅಧಿವೇಶನಕ್ಕೆ ಆಗಮಿಸಿದ್ದರು. ಅದೇ ಕಾರಣಕ್ಕೆ ಅಶೋಕ, ತಡವಾಗಿ ಆಗಮಿಸಿದ ಸಚಿವರಿಗೆ ಚರ್ಚೆ ಏನು ನಡೆದಿದೆ ಅಂತ ಗೊತ್ತಿರಲಿಕ್ಕಿಲ್ಲ, ಎಲ್ಲ ಶಾಸಕರಿಗೆ ಮಧ್ಯಾಹ್ನದ ಊಟ ಕೊಡೋದಿಕ್ಕೆ ಮೋದಿ ಕೋಟು ಧರಿಸಲು ಹೋಗಿದ್ದರು ಅಂತ ಕಾಣುತ್ತೆ ಅಂತ ಹೇಳಿದಾಗ ಚಲುವರಾಯಸ್ವಾಮಿ, ಮೋದಿಗಿಂತ ಮೊದಲು ಸಹ ಈ ಕೋಟಿತ್ತು ಅನ್ನುತ್ತಾರೆ. ಕಾಂಗ್ರೆಸ್ ಶಾಸಕರೊಬ್ಬರು ನೆಹರೂ ಕೋಟು ಅನ್ನುತ್ತಾರೆ. ಆಗ ಸಭಾಧ್ಯಕ್ಷ ಯುಟಿ ಖಾದರ್, ಅದು ಚಲುವರಾಯಸ್ವಾಮಿ ಕೋಟು ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ