ಪಕ್ಷದ ನಾಯಕರು ಸಿಎಲ್ ಪಿ ಸಭೆಯಲ್ಲಿ ಪಾಲ್ಗೊಂಡರೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೃದು ಧೋರಣೆ!

ಪಕ್ಷದ ನಾಯಕರು ಸಿಎಲ್ ಪಿ ಸಭೆಯಲ್ಲಿ ಪಾಲ್ಗೊಂಡರೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೃದು ಧೋರಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 14, 2023 | 12:41 PM

ಒಂದು ವಿಷಯ ಸ್ಪಷ್ಟವಾಗುತ್ತಿದೆ. ವಿಶ್ವನಾಥ್, ಹೆಬ್ಬಾರ್ ಮತ್ತು ಸೋಮಶೇಖರ್ ಮೂವರೂ ಬಿಜೆಪಿ ತಮ್ಮನ್ನು ಉಚ್ಚಾಟಿಸಲಿ ಅಂತ ಕಾಯುತ್ತಿದ್ದಾರೆ ಅಥವಾ ಅಂಥ ಸನ್ನಿವೇಶ ಉದ್ಭವಿಸಲು ಪಕ್ಷದ ವರಿಷ್ಠರನ್ನು ಕೆಣಕುತ್ತಿದ್ದಾರೆ. ಬೇರೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದರೂ ವಿಜಯೇಂದ್ರ ಅವರೊಂದಿಗೆ ಮಾತಾಡುತ್ತೇನೆ ಅನ್ನುತ್ತಾರೆ. ಕೊಂಚ ಕಠಿಣರಾಗುವ, ಗಡಸುತನ ತೋರುವ ಅಧಿಕಾರ ರಾಜ್ಯಾಧ್ಯಕ್ಷನಿಗಿಲ್ಲವೇ?

ಬೆಳಗಾವಿ: ನಿನ್ನೆ ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ನಡೆಯಿತು ಮತ್ತು ಅದಾದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಔತಣಕೂಟವೊಂದನ್ನು ಏರ್ಪಡಿಸಿದ್ದರು. ಅದರಲ್ಲೇನೂ ವಿಶೇಷವಿಲ್ಲ ಆದರೆ ವಿಶೇಷತೆ ಇರೋದು ಬಿಜೆಪಿ ನಾಯಕರಾದ ಎಸ್ ಟಿ ಸೋಮಶೇಖರ್ (ST Somashekhar), ಶಿವರಾಂ ಹೆಬ್ಬಾರ್ (Shivaram Hebbar) ಮತ್ತು ಹೆಚ್ ವಿಶ್ವನಾಥ್ (H Vishwanath) ಅದರಲ್ಲಿ ಭಾಗವಹಿಸಿದ್ದು. ಇವತ್ತು ಅಧಿವೇಶನದಲ್ಲಿ ಭಾಗವಹಿಸಲು ಸುವರ್ಣ ಸೌಧಕ್ಕೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಆ ಮೂವರ ಬಗ್ಗೆ ಬೆಳಗ್ಗೆ ಮಾಹಿತಿ ಸಿಕ್ಕಿದೆ, ಅವರನ್ನು ಕರೆದು ಮಾತಾಡಿ ಸ್ಪಷ್ಟೀಕರಣ ಕೇಳುವುದಾಗಿ ಹೇಳಿದರು. ತ್ರಿವಳಿಗಳು ಡಿನ್ನರ್ ನಲ್ಲೂ ಪಾಲ್ಗೊಂಡಿದ್ದಾರೆ ಅಂತ ಪತ್ರಕರ್ತರು ವಿಜಯೇಂದ್ರ ಗಮನಕ್ಕೆ ತಂದಾಗ, ಇದು ನಿಜಕ್ಕೂ ಗಂಭೀರವಾದ ವಿಚಾರ ಅವರನ್ನು ಕರೆದು ಮಾತಾಡೋದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ