ಮುದ್ದು ಕರುವಿಗೆ ಅದ್ಧೂರಿ ನಾಮಕರಣ: ನವನೀತ ಗೋ ಶಾಲೆಯಲ್ಲಿ ಸಡಗರ, ಸಂಭ್ರಮ
ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನವನೀತ ಗೋ ಶಾಲೆಯಲ್ಲಿ ಮಕ್ಕಳಿಗೆ ನಾಮಕರಣ ಮಾಡಿದಂತೆ ಹಸುವಿನ ಕರುವಿಗೆ ನಾಮಕರಣ ಮಾಡಲಾಗಿದೆ. ತೊಟ್ಟಿಲಿಗೆ ಹೂ ಗಳಿಂದ ಶೃಂಗಾರ ಮಾಡಿ ಮುತೈದೆಯರೆಲ್ಲ ಸೇರಿಕೊಂಡು ಹಸುವಿನ ಕರುವಿಗೆ ತಿಲಕವನಿಟ್ಟು, ದೃಷ್ಟಿ ತೆಗೆದು ತುಳಸಿ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ.
ಕಲಬುರಗಿ, ಡಿ.14: ನವನೀತ ಗೋ ಶಾಲೆಯಲ್ಲಿ ಹಸುವಿನ ಕರುವಿಗೆ (Calf) ಅದ್ದೂರಿಯಾಗಿ ಕಾರ್ಯಕ್ರಮ ಮಾಡಿ ನಾಮಕರಣ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನವನೀತ ಗೋ ಶಾಲೆಯಲ್ಲಿ ಮಕ್ಕಳಿಗೆ ನಾಮಕರಣ (Naming Ceremony) ಮಾಡಿದಂತೆ ಹಸುವಿನ ಕರುವಿಗೆ ನಾಮಕರಣ ಮಾಡಲಾಗಿದೆ. ಕರಿವಿಗೆ ತೊಟ್ಟಿಲಲ್ಲಿ ಹಾಕಿ ಶಾಸ್ತ್ರೋಸ್ತವಾಗಿ ಮಹಿಳೆಯರೆಲ್ಲ ಸೇರಿ ಅದ್ದೂರಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದಾರೆ.
ತೊಟ್ಟಿಲಿಗೆ ಹೂ ಗಳಿಂದ ಶೃಂಗಾರ ಮಾಡಿ ಮುತೈದೆಯರೆಲ್ಲ ಸೇರಿಕೊಂಡು ಹಸುವಿನ ಕರುವಿಗೆ ತಿಲಕವನಿಟ್ಟು, ದೃಷ್ಟಿ ತೆಗೆದು ತುಳಸಿ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ. ತೊಟ್ಟಿಲು ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಸಿಹಿ ಊಟ ಉಣಬಡಿಸಲಾಯಿತು. ನವನೀತ ಗೋ ಶಾಲೆಯಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ಕರುವಿಗೆ ಅದ್ಧೂರಿಯಾದ ನಾಮಕರಣ ಕಾರ್ಯಕ್ರಮ ಏರ್ಪಡಿಸಿದ್ದು ವಿಶೇಷವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos