ನವೆಂಬರ್ ತಿಂಗಳಲ್ಲಿ ಅನಿರುದ್ಧ್-ಕಾವ್ಯಾ ಮಾರನ್ ವಿವಾಹ; ಚೆನ್ನೈನಲ್ಲಿ ಮದುವೆ
ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ಕಾವ್ಯಾ ಮಾರನ್ ಅವರ ಮದುವೆ ಸ್ವಾಗತ ಸಮಾರಂಭವು ನವೆಂಬರ್ ಇಪ್ಪತ್ತೊಂದರಂದು ಚೆನ್ನೈನಲ್ಲಿ ಅಧಿಕೃತವಾಗಿ ನೆರವೇರಲಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಆಹ್ವಾನ ನೀಡುವ ಮೂಲಕ ಇವರ ಮದುವೆ ಕುರಿತು ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ಅಧಿಕೃತವಾಗಿ ತೆರೆಬಿದ್ದಿದೆ.

ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ಸನ್ ಗ್ರೂಪ್ ಮಾಲೀಕರ ಮಗಳು ಕಾವ್ಯಾ ಮಾರನ್ ಅವರ ಮದುವೆಯ ಕುರಿತು ಮಹತ್ವದ ಸುದ್ಧಿಯೊಂದು ಹೊರಬಿದ್ದಿದೆ. ಇವರ ಮದುವೆ ಸ್ವಾಗತ ಸಮಾರಂಭದ ದಿನಾಂಕ ಅಧಿಕೃತವಾಗಿ ನಿಗದಿಯಾಗಿದೆ. ಈ ಬಗ್ಗೆ ಎಲ್ಲೆಡೆ ವ್ಯಾಪಕವಾದ ಚರ್ಚೆಗಳು ಆರಂಭವಾಗಿವೆ.
ಸನ್ ಗ್ರೂಪ್ ಅಧ್ಯಕ್ಷರಾದ ಕಲಾನಿಧಿ ಮಾರನ್ ಹಾಗೂ ಅವರ ಧರ್ಮಪತ್ನಿ ಕಾವೇರಿ ಮಾರನ್ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಹೈದರಾಬಾದ್ನಲ್ಲಿರುವ ಅವರ ನಿವಾಸಕ್ಕೆ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದಾರೆ ಎನ್ನಲಾಗಿದೆ. ಮದುವೆ ಸಮಾರಂಭಕ್ಕೆ ಖುದ್ದಾಗಿ ಆಗಮಿಸುವಂತೆ ಆಹ್ವಾನಿಸಿದ್ದಾರೆ.
ಬರುವ ನವೆಂಬರ್ 21 ಚೆನ್ನೈನಲ್ಲಿ ಅದ್ಧೂರಿ ಆರಕ್ಷತೇ ಕಾರ್ಯಕ್ರಮ ನಡೆಯಲಿದೆ. ಈ ಮೂಲಕ ಇವರ ಮದುವೆಯ ಬಗ್ಗೆ ಹಬ್ಬಿದ್ದ ಎಲ್ಲಾ ರೀತಿಯ ಗೊಂದಲಗಳಿಗೆ ತೆರೆಬಿದ್ದಿದೆ. ಕೆಲವರು ಇದು ಕೇವಲ ವೃತ್ತಿಪರ ಒಡನಾಟ ಎಂದುಕೊಂಡಿದ್ದರು. ಆದರೆ ಈಗ ಎಲ್ಲವೂ ಸ್ಪಷ್ಟವಾಗಿದೆ.
ಕಳೆದ ವರ್ಷ ಅನಿರುದ್ಧ್ ಅವರು ಮದುವೆಯ ವಾರ್ತೆಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಸದ್ಯ ಯಾವುದೇ ಮದುವೆಯಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಮದುವೆಯ ಆಹ್ವಾನವು ಬಹಿರಂಗಗೊಂಡಿದೆ. ಇದರಿಂದ ಈ ಜೋಡಿಯ ಮದುವೆ ವಿಚಾರವು ಮತ್ತೆ ಮುಂಚೂಣಿಗೆ ಬಂದಿದೆ.
ಇದನ್ನೂ ಓದಿ: ಈ ವರ್ಷವೇ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್ ಮದುವೆ? ಜೋರಾಗಿದೆ ಗಾಸಿಪ್
ಕಾವ್ಯಾ ಮಾರನ್ ಅವರು ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತರಾಗಿದ್ದಾರೆ. ಅನಿರುದ್ಧ್ ಅವರು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾಗಿದ್ದಾರೆ. ಇವರ ಈ ವಿವಾಹ ಮಹೋತ್ಸವವು ಈಗ ಸಿನಿಮಾ ಹಾಗೂ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.
ಅನಿರುದ್ಧ್ ಅವರು ‘ಜೈಲರ್ 2’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಈ ಸಿನಿಮಾಗೆ ಅನಿರುದ್ಧ್ ಅವರೇ ಮ್ಯೂಸಿಕ್ ಕೊಟ್ಟಿದ್ದಾರೆ. ಹೀಗೆ ದೊಡ್ಡ ದೊಡ್ಡ ಸಿನಿಮಾಗಳಿಗೆ ಸಂಗೀತ ನೀಡಿದ ಅನುಭವ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




