ವಿಶೇಷ ಘೋಷಣೆ ಮಾಡಿದ ಅನುಷ್ಕಾ ಶೆಟ್ಟಿ: ಮಹಿಳೆಯರಿಗಾಗಿ ವಿಶೇಷ ಶೋ

|

Updated on: Sep 12, 2023 | 8:22 PM

Anushka Shetty: ನಟಿ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಅನುಷ್ಕಾ ಶೆಟ್ಟಿ, ಮಹಿಳೆಯರಿಗಾಗಿ ಆಂಧ್ರ-ತೆಲಂಗಾಣದಲ್ಲಿ ವಿಶೇಷ ಶೋಗಳನ್ನು ಆಯೋಜನೆ ಮಾಡಿದ್ದಾರೆ.

ವಿಶೇಷ ಘೋಷಣೆ ಮಾಡಿದ ಅನುಷ್ಕಾ ಶೆಟ್ಟಿ: ಮಹಿಳೆಯರಿಗಾಗಿ ವಿಶೇಷ ಶೋ
ಅನುಷ್ಕಾ ಶೆಟ್ಟಿ
Follow us on

ದಶಕಕ್ಕೂ ಹೆಚ್ಚು ಸಮಯ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದ ಅನುಷ್ಕಾ ಶೆಟ್ಟಿ (Anushka Shetty), ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಇದೀಗ ‘ಮಿಸ್ ಶೆಟ್ಟಿ ಆಂಡ್ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಿಂದ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಕಳೆದ ವಾರ ಬಿಡುಗಡೆ ಆಗಿರುವ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ‘ (Miss Shetty, Mrs Polishetty) ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸಿನಿಮಾ ಹಿಟ್ ಆಗಿರುವ ಬೆನ್ನಲ್ಲೆ ನಟಿ ಅನುಷ್ಕಾ ಶೆಟ್ಟಿ ಹೊಸದೊಂದು ಘೋಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್​ಲೋಡ್ ಮಾಡಿರುವ ನಟಿ ಅನುಷ್ಕಾ ಶೆಟ್ಟಿ, ”ಎಲ್ಲರಿಗೂ ನಮಸ್ತೆ, ನಮ್ಮ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾವನ್ನು ಇಷ್ಟು ಆದರದಿಂದ ಸ್ವೀಕರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ. ನಿಮ್ಮ ಮೆಜೇಸ್, ಟ್ವೀಟ್ಸ್ ನೋಡುತ್ತಿದ್ದರೆ ಬಹಳ ಖುಷಿಯಾಗುತ್ತದೆ. ಈ ಗುರುವಾರ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲವು ಭಾಗಗಳಲ್ಲಿ ಒಂದು ಸ್ಪೆಷಲ್ ಶೋ ಅನ್ನು ಕೇವಲ ಮಹಿಳೆಯರಿಗಾಗಿ ಆಯೋಜನೆ ಮಾಡುತ್ತಿದ್ದೇವೆ. ನಿಮ್ಮ ಮನೆಯಲ್ಲಿರುವ ಚಿಕ್ಕವರು, ದೊಡ್ಡವರನ್ನು ಕರೆದುಕೊಂಡು ಹೋಗಿ. ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುತ್ತೇನೆ. ನಮ್ಮ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ತಂಡದಿಂದ ಎಲ್ಲರಿಗೂ ಧನ್ಯವಾದ” ಎಂದಿದ್ದಾರೆ.

ಇದನ್ನೂ ಓದಿ:ಬಾಹುಬಲಿ ಬಳಿಕ ಚಿತ್ರರಂಗದಿಂದ ದೂರಾಗಿದ್ದು ಏಕೆ? ಅನುಷ್ಕಾ ಶೆಟ್ಟಿ ಕೊಟ್ಟರು ಉತ್ತರ

ತೆಲಂಗಾಣದ ಆರು ಚಿತ್ರಮಂದಿರಗಳಲ್ಲಿ, ಆಂಧ್ರ ಪ್ರದೇಶದ 11 ಚಿತ್ರಮಂದಿರಗಳಲ್ಲಿ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದ ಸ್ಪೆಷಲ್ ಶೋ ಅನ್ನು ಚಿತ್ರತಂಡ ಆಯೋಜನೆ ಮಾಡಿದೆ. ಈ ಶೋಗೆ ಕೇವಲ ಮಹಿಳೆಯರಿಗಷ್ಟೆ ಪ್ರವೇಶ. ವಿಶೇಷ ಶೋ ಆಯೋಜನೆ ಮಾಡಿರುವ ಚಿತ್ರಮಂದಿರಗಳ ಪಟ್ಟಿಯನ್ನು ಅನುಷ್ಕಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾರ ಈ ಘೋಷಣೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ಮಧ್ಯ ವಯಸ್ಕ ಮಹಿಳೆಯೊಬ್ಬಾಕೆ, ಮದುವೆಯಾಗದೆ ಮಗು ಪಡೆಯಲು ಯುವಕನೊಬ್ಬನನ್ನು ಹುಡುಕುವ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ನಾಯಕನಾಗಿ ನವೀನ್ ಪೋಲಿಶೆಟ್ಟಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ ಶೆಫ್ ಪಾತ್ರದಲ್ಲಿ ನಟಿಸಿದ್ದರೆ ನವೀನ್ ಪೋಲಿಶೆಟ್ಟಿ ಸ್ಟಾಂಡಪ್ ಕಮಿಡಿಯನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಜಯಸುಧಾ, ನಾಸರ್, ಮುರಳಿ ಶರ್ಮಾ ಇನ್ನೂ ಹಲವು ಹಿರಿಯ ಕಲಾವಿದರು ಕಡಿಸಿದ್ದಾರೆ. ಸಿನಿಮಾವನ್ನು ಮಹೇಶ್ ಬಾಬು ಪಚ್ಚಿಗೋಲ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಪ್ರಭಾಸ್ ಒಡೆತನದ ಯುವಿ ಕ್ರಿಯೇಶನ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Tue, 12 September 23