ಶಾರುಖ್​ ನಟನೆಯ 25 ವರ್ಷದ ಹಳೇ ಸಿನಿಮಾ ಮರು ಬಿಡುಗಡೆ; 25 ರೂ. ಟಿಕೆಟ್​: ಕೆಲವೇ ನಿಮಿಷಗಳಲ್ಲಿ ಸೋಲ್ಡ್​ ಔಟ್​

ಟಿಕೆಟ್​ ಬುಕಿಂಗ್​ ಓಪನ್​ ಆದ 25 ನಿಮಿಷಗಳ ಒಳಗೆ ಸೋಲ್ಡ್​ ಔಟ್​ ಆಗಿದೆ. ಇದು 25ನೇ ವರ್ಷದ ಸೆಲೆಬ್ರೇಷನ್​ ಆದ್ದರಿಂದ ಕೇವಲ 25 ರೂಪಾಯಿಗೆ ಟಿಕೆಟ್​ ಮಾರಾಟ ಮಾಡಲಾಗಿದೆ. ಶಾರುಖ್​ ಖಾನ್​ ಅಭಿಮಾನಿಗಳು ‘ಕುಚ್​ ಕುಚ್​ ಹೋತಾ ಹೈ’ ಚಿತ್ರವನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡಲು ಉತ್ಸಾಹ ತೋರಿಸಿದ್ದಾರೆ.

ಶಾರುಖ್​ ನಟನೆಯ 25 ವರ್ಷದ ಹಳೇ ಸಿನಿಮಾ ಮರು ಬಿಡುಗಡೆ; 25 ರೂ. ಟಿಕೆಟ್​: ಕೆಲವೇ ನಿಮಿಷಗಳಲ್ಲಿ ಸೋಲ್ಡ್​ ಔಟ್​
ರಾಣಿ ಮುಖರ್ಜಿ, ಶಾರುಖ್​ ಖಾನ್​, ಕಾಜೋಲ್​

Updated on: Oct 12, 2023 | 6:00 PM

ಕಳೆದ ಮೂರು ದಶಕಗಳಿಂದಲೂ ಶಾರುಖ್​ ಖಾನ್​ (Shah Rukh Khan) ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಈ ವರ್ಷ ಅವರು ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾದ ಮೂಲಕ ಎರಡು ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದ್ದು ಗೊತ್ತೇ ಇದೆ. ಹೊಸ ಸಿನಿಮಾಗಳಷ್ಟೇ ಅಲ್ಲದೇ ಶಾರುಖ್​ ಖಾನ್​ ನಟನೆಯ ಹಳೇ ಸಿನಿಮಾಗಳು (Shah Rukh Khan Movies) ಕೂಡ ಮೋಡಿ ಮಾಡುವ ಸಾಮರ್ಥ್ಯ ಹೊಂದಿವೆ. ಅದಕ್ಕೆ ಅತ್ಯುತ್ತಮವಾದ ಉದಾಹರಣೆ ಇಲ್ಲಿದೆ. ಬರೋಬ್ಬರಿ 25 ವರ್ಷ ಹಳೆಯದಾದ ‘ಕುಚ್​ ಕುಚ್​ ಹೋತಾ ಹೈ’ (Kuch Kuch Hota Hai) ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದ್ದು, ಅದರ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ.

1998ರಲ್ಲಿ ‘ಕುಚ್​ ಕುಚ್​ ಹೋತಾ ಹೈ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದಲ್ಲಿ ಶಾರುಖ್​ ಖಾನ್​, ಕಾಜೋಲ್​ ಹಾಗೂ ರಾಣಿ ಮುಖರ್ಜಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಕರಣ್​ ಜೋಹರ್​ ನಿರ್ದೇಶನ ಮಾಡಿದ್ದ ಆ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಈಗ ಆ ಸಿನಿಮಾಗೆ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮರು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ‘ಕುಚ್​ ಕುಚ್​ ಹೋತಾ ಹೈ’ ಚಿತ್ರ 25 ವರ್ಷಗಳ ಬಳಿಕವೂ ಥಿಯೇಟರ್​ನಲ್ಲಿ ಹೌಸ್​ಫುಲ್​ ಆಗುತ್ತಿರುವುದು ವಿಶೇಷ.

ಅಕ್ಟೋಬರ್​ 15ರಂದು ಮುಂಬೈನ ವರ್ಸೋವಾದಲ್ಲಿ ಇರುವ ‘ಪಿವಿಆರ್​’ ಮಲ್ಟಿಪ್ಲೆಕ್ಸ್​ನಲ್ಲಿ ಈ ಸಿನಿಮಾಗೆ ಎರಡು ಶೋ ನಿಗದಿ ಆಗಿದೆ. ಒಂದು ಪರದೆಯಲ್ಲಿ ಸಂಜೆ 7 ಗಂಟೆಗೆ ಹಾಗೂ ಇನ್ನೊಂದು ಪರದೆಯಲ್ಲಿ ಸಂಜೆ 7.15ಕ್ಕೆ ಶೋ ಇರಲಿದೆ. ಇದರ ಟಿಕೆಟ್​ ಬುಕಿಂಗ್​ ಓಪನ್​ ಆದ 25 ನಿಮಿಷಗಳ ಒಳಗೆ ಎಲ್ಲ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಅಂದಹಾಗೆ, ಇದು 25ನೇ ವರ್ಷದ ಸೆಲೆಬ್ರೇಷನ್​ ಆದ್ದರಿಂದ ಈ ಟಿಕೆಟ್​ಗಳನ್ನು ಕೇವಲ 25 ರೂಪಾಯಿಗೆ ಮಾರಾಟ ಮಾಡಲಾಗಿದೆ. ಕಡಿಮೆ ಬೆಲೆಗೆ ಟಿಕೆಟ್​ ಲಭ್ಯ ಇರುವುದು ಕೂಡ ಸೋಲ್ಡ್​ ಔಟ್​ ಆಗಲು ಪ್ರಮುಖ ಕಾರಣ.

ಇದನ್ನೂ ಓದಿ: ‘ಜವಾನ್​’ ತಂಡದಲ್ಲಿ ಕಿರಿಕ್​? ನಯನತಾರಾ ಮುನಿಸಿಗೆ ಪ್ರತಿಕ್ರಿಯೆ ನೀಡಿದ ಶಾರುಖ್​ ಖಾನ್​

ಶಾರುಖ್​ ಖಾನ್​ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಈ ವರ್ಷ ಎರಡು ಬ್ಲಾಕ್​ ಬಸ್ಟರ್​ ಹಿಟ್​ ಸಿಕ್ಕ ಬಳಿಕ ಅವರ ಚಾರ್ಮ್​ ಇನ್ನೂ ಹೆಚ್ಚಾಗಿದೆ. ಮತ್ತೆ ಅವರು ಮೊದಲಿನ ಫಾರ್ಮ್​ಗೆ ಮರಳಿದ್ದಾರೆ. ಈಗ ಅವರು ರಾಜ್​ಕುಮಾರ್​ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶಾರುಖ್​ ಖಾನ್​ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ಆ ಹಿನ್ನೆಲೆಯಲ್ಲಿ ಅವರಿಗೆ ವೈ ಪ್ಲಸ್​ ಭದ್ರತೆ ಒದಗಿಸಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಶಾರುಖ್​ ಖಾನ್​ ಅವರು ಪದೇ ಪದೇ ಸುದ್ದಿ ಆಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us