‘ಭೂತ್ ಬಂಗ್ಲ’ ಚಿತ್ರಕ್ಕೆ ಹೀನಾಯ ಗಳಿಕೆ; ಅಕ್ಷಯ್ ಯಾವುದೇ ಸಿನಿಮಾ ಮಾಡಿದರೂ ಫಲಿತಾಂಶ ಒಂದೇ

ಅಕ್ಷಯ್ ಕುಮಾರ್ ಅಭಿನಯದ 'ಭೂತ್ ಬಂಗ್ಲ' ಸಿನಿಮಾ ಮೊದಲ ದಿನ ಕೇವಲ 12 ಕೋಟಿ ರೂ. ಗಳಿಸಿ ಹೀನಾಯ ಪ್ರದರ್ಶನ ಕಂಡಿದೆ. 120 ಕೋಟಿ ಬಜೆಟ್‌ನ ಚಿತ್ರಕ್ಕೆ ಇದು ದೊಡ್ಡ ಹೊಡೆತ. ವಿಮರ್ಶಕರು ಹಾಸ್ಯ ವಿಫಲವಾಗಿದೆ ಎಂದಿದ್ದು, ಅಭಿಮಾನಿಗಳನ್ನು ಹೊರತುಪಡಿಸಿ ಜನರನ್ನು ಸೆಳೆಯಲು ಕಷ್ಟವಾಗಿದೆ. ಅಕ್ಷಯ್ ಕುಮಾರ್ ಸ್ಕ್ರಿಪ್ಟ್‌ ಆಯ್ಕೆಯಲ್ಲಿ ಎಡವುತ್ತಿದ್ದು, ಅವರ ಸತತ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಂಕಾಗುತ್ತಿವೆ.

‘ಭೂತ್ ಬಂಗ್ಲ’ ಚಿತ್ರಕ್ಕೆ ಹೀನಾಯ ಗಳಿಕೆ; ಅಕ್ಷಯ್ ಯಾವುದೇ ಸಿನಿಮಾ ಮಾಡಿದರೂ ಫಲಿತಾಂಶ ಒಂದೇ
ಅಕ್ಷಯ್

Updated on: Apr 18, 2026 | 8:41 AM

ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಭೂತ್ ಬಂಗ್ಲ’ ಸಿನಿಮಾ ಏಪ್ರಿಲ್ 17ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾಮಿಡಿ ಹೈಲೈಟ್ ಎಂದು ತಂಡ ಹೇಳಿತ್ತು. ಆದರೆ, ಹಾಸ್ಯ ಗಮನ ಸೆಳೆಯಲು ವಿಫಲವಾಗಿದೆ ಎಂಬ ಮಾತು ವ್ಯಕ್ತವಾಗಿದೆ. ಈ ಚಿತ್ರದ ಮೊದಲ ದಿನದ ಗಳಿಕೆ ಲೆಕ್ಕ ಸಿಕ್ಕಿದೆ. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 12 ಕೋಟಿ ರೂಪಾಯಿ ಮಾತ್ರ. ಚಿತ್ರದ ಬಜೆಟ್ 120 ಕೋಟಿ ರೂಪಾಯಿ ಆಗಿರುವುದರಿಂದ ಸಿನಿಮಾಗೆ ದೊಡ್ಡ ಓಪನಿಂಗ್​​ನ ಅಗತ್ಯ ಇತ್ತು.

ಅಕ್ಷಯ್ ಕುಮಾರ್ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ಇತ್ತೀಚೆಗೆ ಎಡವುತ್ತಿದ್ದಾರೆ. ಅವರು ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿ ಬರುತ್ತಿಲ್ಲ. ಇದು ಅವರಿಗೂ ಹಾಗೂ ಅವರ ಅಭಿಮಾನಿಗಳಿಗೂ ಸಾಕಷ್ಟು ಬೇಸರ ಮೂಡಿಸಿದೆ. ಅವರು ಗಂಭೀರ ಸಿನಿಮಾಗಳನ್ನೇ ಮಾಡುತ್ತಿದ್ದರು. ಆದರೆ, ಈಗ ಮತ್ತೆ ಹಾಸ್ಯದ ಕಡೆ ಮುಖ ಮಾಡಿದ್ದಾರೆ. ‘ಭೂತ್ ಬಂಗ್ಲ’ ಸಿನಿಮಾ ಕಾಮಿಡಿ ಹಾರರ್ ಚಿತ್ರವಾಗಿದೆ. ಆದಾಗ್ಯೂ ಸಿನಿಮಾ ಕೈ ಹಿಡಿಯುವ ಸೂಚನೆ ಇಲ್ಲ.

‘ಭೂತ್ ಬಂಗ್ಲ’ ನೋಡಿದ ಅನೇಕ ವಿಮರ್ಶಕರು ಸಿನಿಮಾ ಟೀಕೆ ಮಾಡಿದ್ದಾರೆ. ಹಾಸ್ಯ ಕೆಲಸ ಮಾಡಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಸಿನಿಮಾ ಮೇಲೆ ನಿರೀಕ್ಷೆ ಇದ್ದಿದ್ದರಿಂದ ಅಕ್ಷಯ್ ಅಭಿಮಾನಿಗಳು ಮೊದಲ ದಿನ ಸಿನಿಮಾ ನೋಡಿದ್ದಾರೆ. ಹೀಗಾಗಿ ಚಿತ್ರದ ಗಳಿಕೆ 12 ಕೋಟಿ ರೂಪಾಯಿ ಆಗಿದೆ.

ಶನಿವಾರ ಹಾಗೂ ಭಾನುವಾರ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗುವ ನೀರೀಕ್ಷೆ ಇದೆ. ಆದರೆ, ಭಾನುವಾರ ಸಂಜೆ ವೇಳೆಗೆ ಚಿತ್ರದ ಸರಿಯಾದ ವಿಮರ್ಶೆ ಸಿಕ್ಕಿರುತ್ತದೆ. ಆ ಬಳಿಕ ಸಿನಿಮಾದ ಕಲೆಕ್ಷನ್ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸತತ ಸೋಲಿನ ಸುಳಿಯಲ್ಲಿರುವ ಅಕ್ಷಯ್ ಕುಮಾರ್ ಸಂಭಾವನೆಯಲ್ಲಿ ಭಾರೀ ಕಡಿತ

‘ಭೂತ್ ಬಂಗ್ಲ’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಚಿತ್ರ ಲಾಭ ಕಾಣಬೇಕು ಎಂದರೆ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಅನಿವಾರ್ಯತೆ ಇದೆ. ಆದರೆ, ಸಿನಿಮಾದ ವೇಗ ನೋಡಿದರೆ ಚಿತ್ರ 100 ಕೋಟಿ ರೂಪಾಯಿ ತಲುಪಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us