AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತುಂಬಾಡ್ 2’ ಶೂಟಿಂಗ್ ಅಖಾಡಕ್ಕೆ ಆಲಿಯಾ ಭಟ್ ಎಂಟ್ರಿ; ಹೆಚ್ಚಿತು ನಿರೀಕ್ಷೆ

ಬಾಲಿವುಡ್‌ನ ಸೂಪರ್ ಹಿಟ್ 'ತುಂಬಾಡ್' ಸಿನಿಮಾದ ಎರಡನೇ ಭಾಗ 'ತುಂಬಾಡ್ 2' ಚಿತ್ರೀಕರಣ ಆರಂಭವಾಗಿದೆ. ನಟಿ ಆಲಿಯಾ ಭಟ್ ಚಿತ್ರತಂಡವನ್ನು ಸೇರಿಕೊಂಡಿದ್ದು, ಸೋಹಮ್ ಶಾ ಹಾಗೂ ನವಾಜುದ್ದೀನ್ ಸಿದ್ದಿಕಿ ಜೊತೆ ನಟಿಸುತ್ತಿದ್ದಾರೆ. ಈ ಹಾರರ್ ಕಥಾಹಂದರದ ಸಿನಿಮಾವು 2027ರ ಡಿಸೆಂಬರ್ 3ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

‘ತುಂಬಾಡ್ 2’ ಶೂಟಿಂಗ್ ಅಖಾಡಕ್ಕೆ ಆಲಿಯಾ ಭಟ್ ಎಂಟ್ರಿ; ಹೆಚ್ಚಿತು ನಿರೀಕ್ಷೆ
ತುಂಬಾಡ್ 2
ರಾಜೇಶ್ ದುಗ್ಗುಮನೆ
|

Updated on: Aug 22, 2026 | 1:34 PM

Share

ಮುಖ್ಯಾಂಶಗಳು

  • ಹಾರರ್ ಅವತಾರದಲ್ಲಿ ಆಲಿಯಾ ಭಟ್
  • 'ತುಂಬಾಡ್ 2' ಶೂಟಿಂಗ್ ಅಖಾಡಕ್ಕೆ ಎಂಟ್ರಿ
  • ಸೋಹಮ್ ಶಾ - ನವಾಜುದ್ದೀನ್ ಸಿದ್ದಿಕಿ ಕಾಂಬಿನೇಷನ್:  

ಬಾಲಿವುಡ್‌ನ ಐಕಾನಿಕ್ ಹಾರರ್ ಸಿನಿಮಾ ‘ತುಂಬಾಡ್’ ಸಿನಿಮಾಗೆ (Tumbaad Movie) ಸೀಕ್ವೆಲ್ ಕೆಲಸಗಳು ಅಧಿಕೃತವಾಗಿ ಆರಂಭಗೊಂಡಿವೆ. ಈ ಚಿತ್ರದ ದ್ವಿತೀಯ ಭಾಗದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ನಟಿ ಆಲಿಯಾ ಭಟ್ ಅವರು ಚಿತ್ರತಂಡವನ್ನು ಸೇರಿಕೊಂಡಿದ್ದು, ಚಿತ್ರೀಕರಣದ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಹೆಚ್ಚಿಸಿದೆ.

ಚಿತ್ರೀಕರಣದ ಸೆಟ್‌ನಿಂದ ಆಲಿಯಾ ಭಟ್ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸರಳ ಉಡುಪಿನಲ್ಲಿ ಕಾಣಿಸಿಕೊಂಡಿರುವ ನಟಿ, ಸಿನಿಮಾದ ತಾಂತ್ರಿಕ ತಂಡದ ಜೊತೆಗೆ ಪೋಸ್ ನೀಡಿದ್ದಾರೆ. ನದಿ ಹಾಗೂ ಹಳೆಯ ಕೋಟೆಯ ಹಿನ್ನೆಲೆಯಲ್ಲಿ ಈ ಹಂತದ ಚಿತ್ರೀಕರಣ ನಡೆಯುತ್ತಿದೆ. ಸೋಹಮ್ ಶಾ ಅವರು ಆಲಿಯಾ ಭಟ್ ಅವರನ್ನು ಈ ಹಾರರ್ ಪ್ರಪಂಚಕ್ಕೆ ಅಧಿಕೃತವಾಗಿ ಸ್ವಾಗತಿಸಿದ್ದಾರೆ.

ಈ ಚಿತ್ರದ ಮೂಲಕ ಆಲಿಯಾ ಭಟ್ ಮೊದಲ ಬಾರಿಗೆ ಸಂಪೂರ್ಣ ಹಾರರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ಸೋಹಮ್ ಶಾ ಮತ್ತು ನವಾಜುದ್ದೀನ್ ಸಿದ್ದಿಕಿ ಜೊತೆಗೆ ಅವರು ತೆರೆ ಹಂಚಿಕೊಳ್ಳಲಿದ್ದಾರೆ. ಈ ಸೀಕ್ವೆಲ್​​ನಲ್ಲಿ ನವಾಜುದ್ದೀನ್ ಸಿದ್ದಿಕಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಆದರೂ ಪಾತ್ರಗಳ ವಿವರವನ್ನು ಚಿತ್ರತಂಡ ಗುಪ್ತವಾಗಿಟ್ಟಿದೆ.

ಆದೇಶ್ ಪ್ರಸಾದ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ದುರಾಸೆ, ಭಯ ಹಾಗೂ ಮಾನವ ಸಹಜ ಗುಣಗಳ ಸುತ್ತ ಕಥೆ ಸಾಗಲಿದೆ. ಪ್ರಥಮ ಭಾಗಕ್ಕಿಂತಲೂ ಭಿನ್ನವಾದ ಕಥೆಯನ್ನು ಇದು ತೆರೆದಿಡಲಿದೆ. ಮುಂಬೈನಲ್ಲಿ ಬೃಹತ್ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಸರಿ ಸುಮಾರು 7 ರಿಂದ 8 ಎಕರೆ ಜಾಗದಲ್ಲಿ ಇಡೀ ನಗರದ ಮಾದರಿಯನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಸಮಂತಾರನ್ನು ಹಿಂದಿಕ್ಕಿ ‘ತುಂಬಾಡ್’ ಪ್ರಪಂಚ ಪ್ರವೇಶಿಸಿದ ಆಲಿಯಾ ಭಟ್

ಈ ಚಿತ್ರವನ್ನು 2027ರ ಡಿಸೆಂಬರ್ 3ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ‘ತುಂಬಾಡ್ 2’ ಮೂಲಕ ಮತ್ತೆ ದುರಾಸೆಯ ಇತಿಹಾಸ ಮರುಕಳಿಸಲಿದೆ ಎಂದು ನಿರ್ಮಾಪಕ ಸೋಹಮ್ ಶಾ ಹೇಳಿದ್ದಾರೆ. ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವಂತಹ ಹೊಸ ಅನುಭವ ನೀಡಲು ಇಡೀ ತಂಡ ಶ್ರಮಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!