ಸಂಭಾವನೆ ಬದಲಾಗಿ ಸಿಕ್ಕಿತ್ತು ‘ಜಲ್ಸಾ’: ಮಾರಾಟ ಮಾಡಿ ಮತ್ತೆ ದುಬಾರಿ ಬೆಲೆಗೆ ಖರೀದಿಸಿದ್ದ ಅಮಿತಾಭ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಐಷಾರಾಮಿ ‘ಜಲ್ಸಾ’ ಬಂಗಲೆಯ ಹಿಂದೆ ರೋಚಕ ಕಥೆಯಿದೆ. 1982ರ ಸಿನಿಮಾ ಸಂಭಾವನೆಯಾಗಿ ಸಿಕ್ಕಿದ್ದ ಈ ಮನೆಯನ್ನು ಅಮಿತಾಭ್ ಒಮ್ಮೆ ಮಾರಾಟ ಮಾಡಿದ್ದರು. ಬಳಿಕ ಹೆಚ್ಚಿನ ಬೆಲೆ ನೀಡಿ ಅದನ್ನು ಮರಳಿ ಖರೀದಿಸಿ ‘ಜಲ್ಸಾ’ ಎಂದು ಮರುನಾಮಕರಣ ಮಾಡಿಕೊಂಡರು.

ಸಂಭಾವನೆ ಬದಲಾಗಿ ಸಿಕ್ಕಿತ್ತು ‘ಜಲ್ಸಾ’: ಮಾರಾಟ ಮಾಡಿ ಮತ್ತೆ ದುಬಾರಿ ಬೆಲೆಗೆ ಖರೀದಿಸಿದ್ದ ಅಮಿತಾಭ್
ಅಮಿತಾಭ್
Edited By:

Updated on: Nov 16, 2026 | 7:57 AM

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ದೇಶ ವಿದೇಶಗಳಲ್ಲಿ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಮುಂಬೈನ ಜುಹು ಪ್ರದೇಶದಲ್ಲಿರುವ ಎರಡು ಭವ್ಯ ಬಂಗಲೆಗಳು ಅತ್ಯಂತ ವಿಶೇಷವಾಗಿವೆ. ಸುಮಾರು 100 ಕೋಟಿ ಮೌಲ್ಯದ ‘ಜಲ್ಸಾ’ ಮನೆಯಲ್ಲಿ ಅಮಿತಾಭ್ ಕುಟುಂಬ ವಾಸವಿದೆ. ಮತ್ತೊಂದೆಡೆ 50 ಕೋಟಿ ಮೌಲ್ಯದ ‘ಪ್ರತೀಕ್ಷಾ’ ಬಂಗಲೆಯಲ್ಲಿ ಅವರ ಪುತ್ರಿ ಶ್ವೇತಾ ಬಚ್ಚನ್ ತಮ್ಮ ಮಕ್ಕಳೊಂದಿಗೆ ನೆಲೆಸಿದ್ದಾರೆ.

ಅಮಿತಾಭ್ ಬಚ್ಚನ್ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಈ ಎರಡೂ ಬಂಗಲೆಗಳು ಅವರ ಕೈಸೇರಿದ್ದವು. ‘ಜಲ್ಸಾ’ ಎಂಬ ಹೆಸರಿಗೆ ಹಿಂದಿಯಲ್ಲಿ ಸಂಭ್ರಮ ಎಂಬ ಅರ್ಥವಿದೆ. 1980ರ ದಶಕದ ಆರಂಭದಲ್ಲಿ ಅಮಿತಾಭ್ ಗಳಿಸಿದ ಅಪ್ರತಿಮ ಯಶಸ್ಸಿಗೆ ಈ ಮನೆ ಸಾಕ್ಷಿಯಾಗಿದೆ. ಸುಮಾರು 10,125 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಎರಡು ಅಂತಸ್ತಿನ ಬಂಗಲೆ ಬಚ್ಚನ್ ಕುಟುಂಬದ ಹೆಮ್ಮೆಯ ತಾಣವಾಗಿದೆ.

Loading...

ಈ ಬಂಗಲೆಯ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಹಿಂದೆ ‘ಮನಸಾ’ ಎಂದು ಕರೆಯಲ್ಪಡುತ್ತಿದ್ದ ಈ ಮನೆ ನಿರ್ಮಾಪಕ ಎನ್.ಸಿ. ಸಿಪ್ಪಿ ಅವರಿಗೆ ಸೇರಿತ್ತು. 1982ರಲ್ಲಿ ತೆರೆಕಂಡ ‘ಸತ್ತೆ ಪೆ ಸತ್ತಾ’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಸಂಭಾವನೆಯ ಬದಲಾಗಿ ಸಿಪ್ಪಿ ಈ ಮನೆಯನ್ನು ಅಮಿತಾಭ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಕೆಲ ವರ್ಷಗಳ ನಂತರ ಬಿಗ್ ಬಿ ಈ ಮನೆಯನ್ನು ಮಾರಾಟ ಮಾಡಿದ್ದರು. ಆದರೆ ಬಳಿಕ ಹೆಚ್ಚಿನ ಬೆಲೆ ನೀಡಿ ಅದನ್ನು ಮರಳಿ ಖರೀದಿಸಿ ‘ಜಲ್ಸಾ’ ಎಂದು ಮರುನಾಮಕರಣ ಮಾಡಿದರು.

ಇನ್ನು 16,840 ಚದರ ಅಡಿ ವಿಸ್ತೀರ್ಣದ ‘ಪ್ರತೀಕ್ಷಾ’ ಬಂಗಲೆಯೂ ಅಮಿತಾಭ್ ಅವರ ಸ್ಟಾರ್‌ಡಮ್‌ನ ಪ್ರತೀಕವಾಗಿದೆ. 1975ರ ಐತಿಹಾಸಿಕ ‘ಶೋಲೆ’ ಸಿನಿಮಾ ಬ್ಲಾಕ್‌ಬಸ್ಟರ್ ಆದ ಬೆನ್ನಲ್ಲೇ ಅಂದರೆ 1976ರಲ್ಲಿ ಅವರು ಈ ಮನೆಯನ್ನು ಖರೀದಿಸಿದ್ದರು. ತಮ್ಮ ತಲೆಮಾರು ಸ್ವಂತ ದುಡಿಮೆಯಿಂದ ಕಟ್ಟಿಕೊಂಡ ಮೊದಲ ಮನೆ ಇದಾಗಿದೆ ಎಂದು ಅಮಿತಾಭ್ ತಮ್ಮ ಬ್ಲಾಗ್‌ನಲ್ಲಿ ಹೆಮ್ಮೆಯಿಂದ ಬರೆದುಕೊಂಡಿದ್ದರು.

ಇದನ್ನೂ ಓದಿ: ಕತ್ತೆಗಳ ಸಂತೆಯಲ್ಲಿ ಶಾರುಖ್, ಅಮಿತಾಭ್ ಆದರೆ ಚಂಕಿ ಪಾಂಡೆಗೆ ಬಲು ಬೇಡಿಕೆ

‘ಪ್ರತೀಕ್ಷಾ’ ಬಂಗಲೆ ಬಚ್ಚನ್ ಕುಟುಂಬದ ಅನೇಕ ಮಧುರ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಭಿಷೇಕ್ ಮತ್ತು ಶ್ವೇತಾ ಬೆಳೆದಿದ್ದು ಇದೇ ಮನೆಯಲ್ಲಿ. 2007ರಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ರೈ ವಿವಾಹವೂ ಇಲ್ಲಿಯೇ ನಡೆದಿತ್ತು. ತಂದೆ ಹರಿವಂಶರಾಯ್ ಬಚ್ಚನ್ ಹಾಗೂ ತಾಯಿ ತೇಜಿ ಬಚ್ಚನ್ ನಿಧನದ ನಂತರ ಅಮಿತಾಭ್ ‘ಜಲ್ಸಾ’ ಮನೆಗೆ ಸ್ಥಳಾಂತರಗೊಂಡರು. ಮೂರು ವರ್ಷಗಳ ಹಿಂದೆ ಅಮಿತಾಭ್ ಅವರು ‘ಪ್ರತೀಕ್ಷಾ’ ಬಂಗಲೆಯನ್ನು ತಮ್ಮ ಮಗಳು ಶ್ವೇತಾ ಬಚ್ಚನ್ ಹೆಸರಿಗೆ ಉಡುಗೊರೆಯಾಗಿ ವರ್ಗಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Mon, 16 November 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us