ಕತ್ತೆಗಳ ಸಂತೆಯಲ್ಲಿ ಶಾರುಖ್, ಅಮಿತಾಬ್ ಆದರೆ ಚಂಕಿ ಪಾಂಡೆಗೆ ಬಲು ಬೇಡಿಕೆ
ಕತ್ತೆಗಳ ಜಾತ್ರೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್! ಆದರೆ ಅತಿ ಹೆಚ್ಚು ಬೇಡಿಕೆ ಕುದುರಿದ್ದು ನಟ ಚಂಕಿ ಪಾಂಡೆಗೆ. ಅಸಲಿಗೆ ಈ ಜಾತ್ರೆಗೆ ಬರುವ ಹಲವು ಕತ್ತೆಗಳಿಗೆ ಹೀಗೆ ಬಾಲಿವುಡ್ ನಟರ ಹೆಸರಿಡಲಾಗುತ್ತದೆ. ಇಲ್ಲಿ ಕತ್ತೆಗಳ ಮಾರಾಟ ಮಾಡಲಾಗುತ್ತಿದೆ. ಈ ಸಂತೆಯಲ್ಲಿ ಈ ಬಾರಿ ಚಂಕಿ ಪಾಂಡೆ ಹೆಸರಿನ ಕತ್ತೆ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ.

ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಪ್ರತಿ ವರ್ಷ ಕತ್ತೆಗಳ ಜಾತ್ರೆ ನಡೆಯುತ್ತದೆ. ಈ ವರ್ಷವೂ ಇಂಥಹುದೇ ಕತ್ತೆಗಳ ಜಾತ್ರೆ ನಡೆದಿದೆ. ಈ ಜಾತ್ರೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಇದ್ದರು, ಆದರೆ ಅತಿ ಹೆಚ್ಚು ಬೇಡಿಕೆ ಕುದುರಿದ್ದು ನಟ ಚಂಕಿ ಪಾಂಡೆಗೆ. ಅಸಲಿಗೆ ಈ ಜಾತ್ರೆಗೆ ಬರುವ ಹಲವು ಕತ್ತೆಗಳಿಗೆ ಹೀಗೆ ಬಾಲಿವುಡ್ ನಟರ ಹೆಸರಿಡಲಾಗುತ್ತದೆ. ಇಲ್ಲಿ ಕತ್ತೆಗಳ ಮಾರಾಟ ಮಾಡಲಾಗುತ್ತಿದೆ. ಈ ಸಂತೆಯಲ್ಲಿ ಈ ಬಾರಿ ಚಂಕಿ ಪಾಂಡೆ ಹೆಸರಿನ ಕತ್ತೆ ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆ.
ಈ ಜಾತ್ರೆಯಲ್ಲಿ ಕತ್ತೆಗಳಿಗೆ ಬಾಲಿವುಡ್ ನಟರ ಹೆಸರುಗಳನ್ನು ಇಡಲಾಗುತ್ತದೆ. ಗ್ರಾಹಕರನ್ನು ಸೆಳೆಯಲು ಈ ರೀತಿ ಮಾಡಲಾಗುತ್ತದೆ. ಇಲ್ಲಿ ಕತ್ತೆಗಳ ಹರಾಜು ನಡೆಯುತ್ತದೆ. ಈ ಬಾರಿ ಚಂಕಿ ಪಾಂಡೆ ಹೆಸರಿನ ಕತ್ತೆ ಅತಿ ಹೆಚ್ಚು ಮೊತ್ತಕ್ಕೆ ಮಾರಾಟ ಆಗಿದೆ. ಚಂಕಿ ಪಾಂಡೆ ಹೆಸರಿನ ಕತ್ತೆಗೆ 72 ಸಾವಿರ ರೂಪಾಯಿ ಹಣ ನೀಡಿ ಗ್ರಾಹಕರೊಬ್ಬರು ಖರೀದಿ ಮಾಡಿದ್ದಾರೆ.
ಇದೀಗ ಕತ್ತೆಗಳಿಗೆ ತಮ್ಮ ಹೆಸರಿಟ್ಟಿರುವ ಬಗ್ಗೆ ಖುದ್ದು ನಟ ಚಂಕಿ ಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ, ಮಾಧ್ಯಮವೊಂದರ ಜೊತೆಗೆ ಈ ಬಗ್ಗೆ ಮಾತನಾಡಿರುವ ನಟ ಚಂಕಿ ಪಾಂಡೆ, ‘ಜನರು ಹೀಗೆ ಮಾಡಿದ್ದು ನಿಜಕ್ಕೂ ದೊಡ್ಡ ಗೌರವ. ನನ್ನ ಸ್ನೇಹಿತರು ಈ ಸುದ್ದಿಯನ್ನು ನನಗೆ ಕಳುಹಿಸುತ್ತಿದ್ದಾರೆ, ನಾನು ಸುದ್ದಿ ಓದಿ ಖುಷಿ ಪಟ್ಟೆ, ಮನಸ್ಸಾರೆ ನಕ್ಕೆ ಎಂದು ಹೇಳಿದ್ದಾರೆ. ಈ ವಿಭಿನ್ನ ಗೌರವವನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ನಟ ಮುಂದುವರೆದು, ‘ಕಳೆದ 30 ವರ್ಷಗಳಿಂದ ಇದು ನಡೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ವಾಸ್ತವವಾಗಿ, ಕ್ಷೌರಿಕನ ಅಂಗಡಿಗಳಲ್ಲಿಯೂ ಸಹ ತಾರೆಯರು ಮತ್ತು ಅವರ ಹೇರ್‌ಸ್ಟೈಲ್‌ಗಳ ಜಾಹೀರಾತುಗಳನ್ನು ಹೀಗೆಯೇ ಮಾಡಲಾಗುತ್ತದೆ. ಬರ್ಗರ್ ಅಂಗಡಿಯೊಂದರಲ್ಲಿ ‘ಚಂಕಿ ಪನೀರ್ ಪಾಂಡೆ’ ಹೆಸರಿನ ಬರ್ಗರ್ ಕೂಡ ಇದೆ’ ಎಂದಿದ್ದಾರೆ.
ಇದನ್ನೂ ಓದಿ:ಕೊನೆಗೂ ಬರ್ತ್ಡೇ ದಿನ ಅಭಿಮಾನಿಗಳಿಗೆ ಐಕಾನಿಕ್ ಪೋಸ್ ಮೂಲಕ ದರ್ಶನ ಕೊಟ್ಟ ಶಾರುಖ್
ಚಂಕ ಪಾಂಡೆ, ಬಾಲಿವುಡ್ನ ಜನಪ್ರಿಯ ನಟ. 80-90ರ ದಶಕದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಜನಪ್ರಿಯ ಹಾಸ್ಯ ನಟರೂ ಸಹ ಆಗಿದ್ದಾರೆ ಚಂಕಿ ಪಾಂಡೆ. ದಕ್ಷಿಣದ ಕೆಲವು ಸಿನಿಮಾಗಳಲ್ಲಿಯೂ ಸಹ ಚಂಕಿ ಪಾಂಡೆ ನಟನೆ ಮಾಡಿದ್ದಾರೆ. ಅವರ ಪುತ್ರಿ ಅನನ್ಯಾ ಪಾಂಡೆ ಸಹ ಈ ಬಾಲಿವುಡ್ನ ಜನಪ್ರಿಯ ಯುವನಟಿ. ಅನನ್ಯಾ ಪಾಂಡೆ ಸಹ ಕಳೆದ ದೀಪಾವಳಿಯಲ್ಲಿ ತಮ್ಮ ಚಿತ್ರ ಪಟಾಕಿ ಬಾಕ್ಸ್ ಒಂದರ ಮೇಲೆ ಇದ್ದಿದ್ದನ್ನು ನೋಡಿ ಬಹಳ ಖುಷಿ ಪಟ್ಟಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.
ಚಂಕಿ ಅವರು 1987ರಲ್ಲಿ ಬಿಡುಗಡೆಯಾದ ‘ಆಗ್ ಹಿ ಆಗ್’ ಹಿಂದಿ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದು, ಪ್ರಸ್ತುತ ನಾಲ್ಕು ದಶಕಗಳಿಂದ ಚಲನಚಿತ್ರರಂಗದಲ್ಲಿದ್ದಾರೆ. ಅವರು ಈ ವರ್ಷ ‘ಬೇಬಿ ಡೋ ಡೈ ಡೋ’ ಚಿತ್ರದಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




