AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಿಂಗ್’ ಬಿಡುಗಡೆಗೆ ತಿಂಗಳಿರುವಾಗಲೇ 665 ಕೋಟಿ ಡೀಲ್ ಕುದುರಿಸಿಕೊಂಡ ಶಾರುಖ್ ಖಾನ್

ಶಾರುಖ್ ಖಾನ್ ನಟಿಸಿರುವ ‘ಕಿಂಗ್’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್ ಸಹ ಮುಖ್ಯವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾ ಅನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಶಾರುಖ್ ಖಾನ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ರಿಲೀಸ್​​ಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇದೆ. ಆದರೆ ಈಗಾಗಲೇ ಶಾರುಖ್ ಖಾನ್ ಅವರ ಈ ಸಿನಿಮಾ 665 ಕೋಟಿ ಕಮಾಯಿ ಮಾಡಿಕೊಂಡಿದ್ದಾಗಿದೆ.

‘ಕಿಂಗ್’ ಬಿಡುಗಡೆಗೆ ತಿಂಗಳಿರುವಾಗಲೇ 665 ಕೋಟಿ ಡೀಲ್ ಕುದುರಿಸಿಕೊಂಡ ಶಾರುಖ್ ಖಾನ್
Shah Rukh Khan King
ಮಂಜುನಾಥ ಸಿ.
|

Updated on: Nov 03, 2026 | 1:15 PM

Share

ಮುಖ್ಯಾಂಶಗಳು

  • ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ
  • ‘ಕಿಂಗ್’ ಸಿನಿಮಾಕ್ಕೆ ತಿಂಗಳಿಗೂ ಹೆಚ್ಚು ಸಮಯ ಇದೆ
  • ‘ಕಿಂಗ್’ ಸಿನಿಮಾ ಈಗಾಗಲೇ 665 ಕೋಟಿ ಗಳಿಕೆ ಮಾಡಿದೆ

ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಶಾರುಖ್ ಖಾನ್ ಅವರು ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿರುವ ‘ಕಿಂಗ್’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್ ಸಹ ಮುಖ್ಯವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾ ಅನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಶಾರುಖ್ ಖಾನ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ರಿಲೀಸ್​​ಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇದೆ. ಆದರೆ ಈಗಾಗಲೇ ಶಾರುಖ್ ಖಾನ್ ಅವರ ಈ ಸಿನಿಮಾ 665 ಕೋಟಿ ಕಮಾಯಿ ಮಾಡಿಕೊಂಡಿದ್ದಾಗಿದೆ.

‘ಕಿಂಗ್’ ಸಿನಿಮಾವು ಡಿಸೆಂಬರ್ 24ಕ್ಕೆ ರಿಲೀಸ್ ಆಗಲಿದೆ. ಸಿನಿಮಾದ ವಿತರಣೆ ಹಾಗೂ ಇತರೆ ಹಕ್ಕುಗಳ ಮಾರಾಟವನ್ನು ಶಾರುಖ್ ಖಾನ್ ಆರಂಭಿಸಿದ್ದು, ಸಿನಿಮಾದ ಹಕ್ಕುಗಳ ಮಾರಾಟದಿಂದ ಈಗಾಗಲೇ 665 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರಂತೆ. ‘ಕಿಂಗ್’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಫರ್ಸ್ ಫಿಲ್ಮ್ಸ್ ಸಂಸ್ಥೆಯು ‘ಕಿಂಗ್’ ಚಿತ್ರದ ವಿದೇಶಿ ರಿಲೀಸ್​​ ಹಕ್ಕುಗಳನ್ನು ದಾಖಲೆಯ ಕನಿಷ್ಠ ಖಾತರಿ ಮೊತ್ತವಾದ 175 ಕೋಟಿ ರೂ.ಗೆ ಪಡೆದುಕೊಂಡಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಯಾವುದೇ ಭಾರತೀಯ ಚಿತ್ರದ ವಿದೇಶಿ ಬಿಡುಗಡೆ ಹಕ್ಕುಗಳು ಮಾರಾಟವಾಗಿರಲಿಲ್ಲ.

ಇದನ್ನೂ ಓದಿ:‘ಕಿಂಗ್’ ಸಿನಿಮಾ ಅನ್ನು ಸುತ್ತುವರೆದ ಹಾಲಿವುಡ್ ಸಿನಿಮಾಗಳು, ಗೆಲ್ತಾರಾ ಶಾರುಖ್ ಖಾನ್?

‘ಕಿಂಗ್’ ಸಿನಿಮಾದ ಭಾರತೀಯ ವಿತರಣಾ ಹಕ್ಕುಗಳನ್ನು ಪೆನ್ ಮರುಧರ್ ಸಂಸ್ಥೆಗೆ 250 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆಯಂತೆ. ಹಿಂದಿ ಚಿತ್ರವೊಂದಕ್ಕೆ ಇದು ಅತ್ಯಧಿಕ ಮೊತ್ತಗಳಲ್ಲಿ ಒಂದಾಗಿದೆ. ಇದರ ಜೊತೆಗೆ, ನೆಟ್‌ಫ್ಲಿಕ್ಸ್ ಸಂಸ್ಥೆಯು ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು 150 ಕೋಟಿ ರೂ.ಗೆ ಖರೀದಿಸಿದೆ. ಅಲ್ಲದೆ, ಸ್ಯಾಟಲೈಟ್ ಮತ್ತು ಸಂಗೀತ ಹಕ್ಕುಗಳು ಕ್ರಮವಾಗಿ 25 ಕೋಟಿ ರೂ. ಮತ್ತು 65 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ನೆಟ್‌ಫ್ಲಿಕ್ಸ್ ಒಪ್ಪಂದದ ಪ್ರಕಾರ ಬಾಕ್ಸ್ ಆಫೀಸ್ ಗಳಿಕೆಗೆ ತಕ್ಕಂತೆ ಮೊತ್ತದಲ್ಲಿ ವ್ಯತ್ಯಾಸವಾಗುವ ಅವಕಾಶವಿದ್ದರೂ, ಪ್ರಸ್ತುತ ಲೆಕ್ಕಾಚಾರಗಳು ಹಾಗೆಯೇ ಉಳಿದರೆ ‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕವಾಗಿ 665 ಕೋಟಿ ರೂ.ಗಳನ್ನು ಗಳಿಸಿದಂತಾಗಿದೆ.

ಜಾಹೀರಾತು ಮತ್ತು ಬಿಡುಗಡೆಯ ವೆಚ್ಚಗಳನ್ನು ಹೊರತುಪಡಿಸಿ ಈ ಬೃಹತ್ ಪ್ರಾಜೆಕ್ಟ್‌ನ ಒಟ್ಟು ಉತ್ಪಾದನಾ ವೆಚ್ಚವು ಸುಮಾರು 400 ಕೋಟಿ ರೂ.ಗಳಷ್ಟಿದೆ. ಚಿತ್ರದ ವ್ಯಾಪ್ತಿಯು ದೊಡ್ಡದಾಗಿರುವುದರಿಂದ ಬಾಕ್ಸ್ ಆಫೀಸ್ ಗಳಿಕೆಯ ಮೇಲಿನ ನಿರೀಕ್ಷೆಯೂ ಹೆಚ್ಚಿದೆ. ಈ ಮುಂಚಿನ ಬ್ಲಾಕ್‌ಬಸ್ಟರ್‌ಗಳಂತೆ, ‘ಕಿಂಗ್’ ಚಿತ್ರವು ತನ್ನ ವಿತರಕರಿಗೆ ಲಾಭ ತಂದುಕೊಡಲು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 800 ಕೋಟಿ ರೂ.ಗಳಿಗೂ ಅಧಿಕ ಒಟ್ಟು ಗಳಿಕೆ ಮಾಡಬೇಕಾಗುತ್ತದೆ ಎಂದು ಟ್ರೇಡ್ ವಿಶ್ಲೇಷಕರ ಅಭಿಪ್ರಾಯ. ಶಾರುಖ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ‘ಪಠಾಣ್’ ಅನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಇದೀಗ ಮತ್ತೆ ಅದೇ ಜೋಡಿ ಒಂದಾಗಿರುವ ಕಾರಣದಿಂದಾಗಿ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More