‘ಅಮ್ಮ ನನ್ನ ಮನೆಗೆ ಸೇರಿಸಲ್ಲ’; ಮಾಜಿ ಪ್ರಿಯಕರನಿಗೆ ಕರೆ ಮಾಡಿ ತಗ್ಲಾಕೊಂಡ ಅನನ್ಯಾ ಪಾಂಡೆ

ಕಾಫಿ ವಿತ್ ಕರಣ್ ಶೋನಲ್ಲಿ ನಟಿ ಅನನ್ಯಾ ಪಾಂಡೆ ತಮ್ಮ ಮಾಜಿ ಪ್ರೇಮಿಗಳಾದ ಕಾರ್ತಿಕ್ ಆರ್ಯನ್ ಮತ್ತು ಇಶಾನ್ ಖಟ್ಟರ್‌ಗೆ ಕರೆ ಮಾಡಿದ್ದಾರೆ. ಇದನ್ನು ಕಂಡು ಅನನ್ಯಾ ಬಿರ್ಲಾ ಕಾಲೆಳೆದಿದ್ದಾರೆ. ಇತ್ತ ಶನಾಯಾ ಕಪೂರ್ ನಮಗೆ ರಣವೀರ್ ಸಿಂಗ್ ಬೇಕು ಎಂದು ಹೇಳುವ ಮೂಲಕ ಕರಣ್ ಜೋಹರ್‌ಗೆ ಶಾಕ್ ನೀಡಿದ್ದಾರೆ.

‘ಅಮ್ಮ ನನ್ನ ಮನೆಗೆ ಸೇರಿಸಲ್ಲ’; ಮಾಜಿ ಪ್ರಿಯಕರನಿಗೆ ಕರೆ ಮಾಡಿ ತಗ್ಲಾಕೊಂಡ ಅನನ್ಯಾ ಪಾಂಡೆ
ಅನನ್ಯಾ ಪಾಂಡೆ
Edited By:

Updated on: Nov 19, 2026 | 7:49 AM

ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಉದ್ಯಮಿ ಅನನ್ಯಾ ಬಿರ್ಲಾ ‘ಕಾಫಿ ವಿತ್ ಕರಣ್ ಸೀಸನ್ 9’ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸಂಚಿಕೆ ಪ್ರಸಾರ ಕಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಶೋನ ಬಜರ್ ಸುತ್ತಿನಲ್ಲಿ ಅನನ್ಯಾ ಪಾಂಡೆ ತಮ್ಮ ಮಾಜಿ ಗೆಳೆಯರಿಗೆ ಕರೆ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಬಜರ್ ರೌಂಡ್‌ನಲ್ಲಿ ಅನನ್ಯಾ ಫೋನ್ ಕೈಗೆತ್ತಿಕೊಂಡಾಗ ಕರಣ್ ಜೋಹರ್ ಅವರು ಆದಿತ್ಯ ರಾಯ್ ಕಪೂರ್‌ಗೆ ಕರೆ ಮಾಡುತ್ತಿದ್ದೀಯಾ ಎಂದು ಕೇಳಿದ್ದಾರೆ. ಆದರೆ ಅನನ್ಯಾ ಅವರು ಆದಿತ್ಯಗೆ ಕರೆ ಮಾಡದೆ ಇಶಾನ್ ಖಟ್ಟರ್‌ಗೆ ಫೋನ್ ಮಾಡುವುದಾಗಿ ಹೇಳಿದರು. ನಂತರ ಅವರು ನಟ ಕಾರ್ತಿಕ್ ಆರ್ಯನ್‌ಗೆ ವಿಡಿಯೋ ಕಾಲ್ ಮಾಡಿದರು. ಇದನ್ನು ನೋಡಿದ ಅನನ್ಯಾ ಬಿರ್ಲಾ ನೀನು ನಿನ್ನ ಎಲ್ಲಾ ಮಾಜಿ ಪ್ರೇಮಿಗಳಿಗೆ ಕರೆ ಮಾಡಿಬಿಟ್ಟೆ ಎಂದು ತಮಾಷೆ ಮಾಡಿದರು. ‘ಅಮ್ಮ ನನ್ನ ಮನೆ ಒಳಗೆ ಸೇರಿಸಲ್ಲ’ ಎಂದು ಅನನ್ಯಾ ಹೇಳಿದ್ದಾರೆ.

Loading...

ಅನನ್ಯಾ ಪಾಂಡೆ ಈ ಹಿಂದೆ ಕಾರ್ತಿಕ್ ಆರ್ಯನ್, ಇಶಾನ್ ಖಟ್ಟರ್ ಮತ್ತು ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ನಡೆಸಿದ್ದರು ಎಂಬ ವದಂತಿಗಳಿವೆ. ‘ಪತಿ ಪತ್ನಿ ಔರ್ ವೋ’ ಚಿತ್ರದ ವೇಳೆ ಕಾರ್ತಿಕ್ ಜೊತೆ ಮತ್ತು ‘ಖಾಲಿ ಪೀಲಿ’ ಸಿನಿಮಾದ ಸಮಯದಲ್ಲಿ ಇಶಾನ್ ಜೊತೆ ಇವರ ಹೆಸರು ಕೇಳಿಬಂದಿತ್ತು. ನಂತರ ಆದಿತ್ಯ ರಾಯ್ ಕಪೂರ್ ಜೊತೆ ಅನೇಕ ಕಡೆ ಕಾಣಿಸಿಕೊಂಡಿದ್ದ ಅನನ್ಯಾ 2024ರಲ್ಲಿ ಅವರಿಂದ ಬ್ರೇಕಪ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ನಟಿ ಶನಾಯಾ ಕಪೂರ್ ಕೂಡ ಭಾಗವಹಿಸಿ ಮಜಾ ಹೆಚ್ಚಿಸಿದ್ದಾರೆ. ರಾಪಿಡ್ ಫೈರ್ ಸುತ್ತಿನಲ್ಲಿ ಕರಣ್ ಜೋಹರ್ ಅವರು ಶನಾಯಾ ಮತ್ತು ಅನನ್ಯಾ ಇಬ್ಬರಿಗೂ ಏನು ಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಶನಾಯಾ ತಕ್ಷಣ ನಮಗಿಬ್ಬರಿಗೂ ರಣವೀರ್ ಸಿಂಗ್ ಬೇಕು ಎಂದು ಉತ್ತರಿಸಿ ಕರಣ್ ಅವರಿಗೆ ಶಾಕ್ ನೀಡಿದರು. ಅನನ್ಯಾ ಕೂಡ ನಗುತ್ತಾ ಅದು ನಿಜ ಎಂದು ಶನಾಯಾ ಮಾತಿಗೆ ದನಿಗೂಡಿಸಿದರು.

ಇದನ್ನೂ ಓದಿ: ಪೌರಾಣಿಕ ಸಿನಿಮಾ ಮಾಡುವ ಆಸೆಯಂತೆ ನಟಿ ಅನನ್ಯಾ ಪಾಂಡೆಗೆ

ಮತ್ತೊಂದು ಸುತ್ತಿನಲ್ಲಿ ಅನನ್ಯಾ ಬಿರ್ಲಾ ಅವರಿಗೆ ನಿಮ್ಮಲ್ಲಿ ಬಿರ್ಲಾ ಕುಟುಂಬಕ್ಕೆ ಹೋಲಿಕೆಯಾಗದ ಗುಣ ಯಾವುದು ಎಂದು ಕೇಳಲಾಯಿತು. ಅದಕ್ಕೆ ಅವರು ತಾವು ಎಂದಿಗೂ ಕೈಯಲ್ಲಿ ನಗದು ಹಣವನ್ನು ಇಟ್ಟುಕೊಳ್ಳುವುದಿಲ್ಲ ಎಂದು ಬಹಿರಂಗಪಡಿಸಿದರು. ಸಾಕಷ್ಟು ತಮಾಷೆ ಮತ್ತು ರೋಚಕ ಸಂಗತಿಗಳನ್ನು ಒಳಗೊಂಡಿರುವ ಈ ಸಂಚಿಕೆಯು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us