ಖ್ಯಾತ ನಟ ಅನುಪಮ್ ಖೇರ್ (Anupam Kher) ಅವರು ಈವರೆಗೂ 500ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು 538ನೇ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಅವರು ಹೊಸ ಅವತಾರದಲ್ಲಿ ಜನರ ಎದುರು ಬಂದಿದ್ದಾರೆ. ಬೋಳು ತಲೆಯಿಂದಲೇ ಫೇಮಸ್ ಆದವರು ಅನುಪಮ್ ಖೇರ್. ತಲೆಯಲ್ಲಿ ಕೂದಲು ಇರುವ ಎಲ್ಲರಿಗೂ ಅವರು ಸವಾಲು ಹಾಕಿದ್ದಾರೆ. ಬೋಳು ತಲೆಯ (Bald Head) ಮೇಲೆ ವಿಚಿತ್ರ ವಿನ್ಯಾಸದ ಟ್ಯಾಟೂ ಹಾಕಿಸಿಕೊಂಡು ಅವರು ಪೋಸ್ ನೀಡಿದ್ದಾರೆ. ತಲೆಯಲ್ಲಿ ಕೂದಲು ಇರುವವರು ಇದನ್ನು ಮಾಡಲು ಸಾಧ್ಯವೇ ಎಂದು ಅನುಪಮ್ ಖೇರ್ ಪ್ರಶ್ನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ (Anupam Kher Viral Video) ವೈರಲ್ ಆಗಿದೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅನುಪಮ್ ಖೇರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಹೊಸ ಹೊಸ ಪೋಸ್ಟ್ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಪೋಸ್ಟ್ ಮಾಡಿರುವ ಈ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಬೋಳು ತಲೆಯ ಜನರಿಗಾಗಿ ಅವರು ಈ ವಿಡಿಯೋವನ್ನು ಡೆಡಿಕೇಟ್ ಮಾಡಿದ್ದಾರೆ. ಸಾವಿರಾರು ಮಂದಿ ಇದಕ್ಕೆ ಲೈಕ್ ಮಾಡಿದ್ದು, ಹಲವಾರು ಕಮೆಂಟ್ಗಳು ಬಂದಿವೆ. ಲಕ್ಷಾಂತರ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ.
‘ಜಗತ್ತಿನಲ್ಲಿ ಇರುವ ಬೋಳು ತಲೆಯವರಿಗಾಗಿ ಈ ಪೋಸ್ಟ್ ಅರ್ಪಣೆ. ತಾವು ಏನು ಬೇಕಾದರೂ ಮಾಡಬಹುದು ಅಂತ ಕೂದಲು ಇದ್ದವರು ಜಂಬಪಡುತ್ತಾರೆ. ಆದರೆ ಅವರು ಇದನ್ನು ಮಾಡಲು ಸಾಧ್ಯವೇ? ಖಂಡಿತಾ ಇಲ್ಲ’ ಎಂದು ಅನುಪಮ್ ಖೇರ್ ಅವರು ಬರೆದುಕೊಂಡಿದ್ದಾರೆ. ಬಹಳ ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಲೆಯಲ್ಲಿ ಕೂದಲು ಇಲ್ಲದ ವ್ಯಕ್ತಿಯೊಬ್ಬ ನಟ ಆಗುವುದು ಕಷ್ಟ ಇದ್ದಂತಹ ದಿನಗಳಲ್ಲಿ ಅನುಪಮ್ ಖೇರ್ ಅವರು ತಮ್ಮ ಬೋಳುತಲೆಯನ್ನೇ ಒಂದು ಐಡೆಂಟಿಟಿ ಆಗಿಸಿಕೊಂಡು ಹಲವು ಪಾತ್ರಗಳನ್ನು ಮಾಡಿದ್ದರು.
ಇದನ್ನೂ ಓದಿ: Vijay 69: ಅನುಪಮ್ ಖೇರ್ ಹೊಸ ಚಿತ್ರಕ್ಕೆ ‘ವಿಜಯ್ 69’ ಶೀರ್ಷಿಕೆ; ಇಂಥ ಟೈಟಲ್ ಇಟ್ಟಿದ್ದಕ್ಕೆ ಇದೆ ಒಂದು ಕಾರಣ
ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನುಪಮ್ ಖೇರ್ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದರು. ಆ ಸಿನಿಮಾದಿಂದ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಈಗ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ. 538ನೇ ಸಿನಿಮಾದಲ್ಲಿ ಅವರು ರವೀಂದ್ರನಾಥ್ ಟ್ಯಾಗೋರ್ ಪಾತ್ರವನ್ನು ಮಾಡಲಿದ್ದಾರೆ. ಆ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.