
ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ವಿಶ್ವದಾದ್ಯಂತ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿ ಹೊಸ ದಾಖಲೆ ಬರೆದಿದೆ. ಶತಕೋಟಿ ಕ್ಲಬ್ ಸೇರಲು ಸ್ವಲ್ಪದರಲ್ಲೇ ಹಿನ್ನಡೆ ಕಂಡರೂ ಒಟ್ಟು 95.10 ಕೋಟಿ ರೂಪಾಯಿ ಗಳಿಸಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಪಡೆಯುತ್ತಿದೆ. ಇದು ಅಜಯ್ ದೇವಗನ್ ವೃತ್ತಿ ಜೀವನದಲ್ಲೇ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ.
ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಮೊದಲ ದಿನವೇ 66.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಒಟ್ಟು 15,759 ಪ್ರದರ್ಶನಗಳು ಕಂಡಿವೆ. ಭಾರತದಲ್ಲಿ ಒಟ್ಟು 80.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ವಿದೇಶಿ ಮಾರುಕಟ್ಟೆಯಿಂದ 15 ಕೋಟಿ ರೂಪಾಯಿ ಹರಿದು ಬಂದಿದೆ.
ಚಿತ್ರಮಂದಿರಗಳಲ್ಲಿ ಶೇಕಡಾ 67.08 ರಷ್ಟು ಆಕ್ಯುಪೆನ್ಸಿ ಕಂಡುಬಂದಿದೆ. ಬೆಳಗಿನ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕೊಂಚ ಕಡಿಮೆಯಿತ್ತು. ಮಧ್ಯಾಹ್ನದ ನಂತರ ಪ್ರೇಕ್ಷಕರ ಹರಿವು ಹೆಚ್ಚಾಯಿತು. ರಾತ್ರಿ ಪ್ರದರ್ಶನಗಳಲ್ಲಿ ಶೇಕಡಾ 76.46 ರಷ್ಟು ಭರ್ತಿಯಾಗಿತ್ತು.
ಈ ಸಿನಿಮಾ ಅಜಯ್ ದೇವಗನ್ ಅವರ ವೃತ್ತಿಜೀವನದಲ್ಲೇ ಅತಿದೊಡ್ಡ ಓಪನಿಂಗ್ ಪಡೆದ ಚಿತ್ರವಾಗಿದೆ. ‘ಸಿಂಗಂ ಅಗೇನ್’ ಹಾಗೂ ‘ಗೋಲ್ ಮಾಲ್ ಅಗೇನ್’ ದಾಖಲೆಗಳನ್ನು ಇದು ಮುರಿದಿದೆ. ‘ದೃಶ್ಯಂ 1’ ಮತ್ತು ‘ದೃಶ್ಯಂ 2’ ಚಿತ್ರಗಳ ಮೊದಲ ದಿನದ ಗಳಿಕೆಗಿಂತ ಇದು ಅತ್ಯಂತ ಹೆಚ್ಚಾಗಿದೆ. ಸಾಲ್ಗಾಂವ್ಕರ್ ಕುಟುಂಬದ ಮುಂದಿನ ಕಥೆಯನ್ನು ತಿಳಿಯಲು ಜನರು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ:ಹೇಗಿದೆ ‘ದೃಶ್ಯಂ 3’: ನೋಡಿದವರು ಹೇಳಿದ್ದೇನು? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
ಮೊದಲ ದಿನದ ಗಳಿಕೆಯ ವೇಗ ನೋಡಿದರೆ ಈ ಚಿತ್ರ ಶೀಘ್ರದಲ್ಲೇ ಹೊಸ ಮೈಲಿಗಲ್ಲು ತಲುಪಲಿದೆ. ಮೊದಲ ಭಾಗದ ಒಟ್ಟು ಗಳಿಕೆಯನ್ನು ಈ ವಾರಾಂತ್ಯದಲ್ಲೇ ಹಿಂದಿಕ್ಕುವ ಸಾಧ್ಯತೆಯಿದೆ. ಮೀರಾ ದೇಶಮುಖ್ ಅವರ ಪ್ರತೀಕಾರದ ಕಥೆ ಪ್ರೇಕ್ಷಕರನ್ನು ತುದಿಸೀಟಿನಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿದೆ. ಕೆಲವರು ಚಿತ್ರವನ್ನುತೆಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.