Jawan Prevue: ಅಮ್ಮ-ಮಗನ ಪಾತ್ರದಲ್ಲಿ ದೀಪಿಕಾ ಪಡುಕೋಣೆ-ಶಾರುಖ್​ ಖಾನ್​? ಭಾರಿ ಟ್ವಿಸ್ಟ್​ ನಿರೀಕ್ಷೆಯಲ್ಲಿ ಫ್ಯಾನ್ಸ್​

Shah Rukh Khan: ಶಾರುಖ್​ ಖಾನ್​ ಅವರ ಹೋಮ್​ ಬ್ಯಾನರ್​ನಲ್ಲಿ ‘ಜವಾನ್​’ ಸಿನಿಮಾ ಸಿದ್ಧವಾಗಿದೆ. ನಿರ್ಮಾಪಕಿಯಾಗಿ ಅವರ ಪತ್ನಿ ಗೌರಿ ಖಾನ್​ ಕೆಲಸ ಮಾಡಿದ್ದಾರೆ.

Jawan Prevue: ಅಮ್ಮ-ಮಗನ ಪಾತ್ರದಲ್ಲಿ ದೀಪಿಕಾ ಪಡುಕೋಣೆ-ಶಾರುಖ್​ ಖಾನ್​? ಭಾರಿ ಟ್ವಿಸ್ಟ್​ ನಿರೀಕ್ಷೆಯಲ್ಲಿ ಫ್ಯಾನ್ಸ್​
ದೀಪಿಕಾ ಪಡುಕೋಣೆ, ಶಾರುಖ್​ ಖಾನ್​

Updated on: Jul 10, 2023 | 8:05 PM

ನಟ ಶಾರುಖ್​ ಖಾನ್​ (Shah Rukh Khan) ಅವರು ‘ಪಠಾಣ್​’ ಸಿನಿಮಾದ ಗೆಲವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅದರ ಬೆನ್ನಲ್ಲೇ ‘ಜವಾನ್​’ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಈ ಚಿತ್ರ ಕೂಡ ಬ್ಲಾಕ್​ ಬಸ್ಟರ್​ ಆಗಲಿದೆ ಎಂದು ಅನೇಕರು ಭವಿಷ್ಯ ನುಡಿಯುತ್ತಿದ್ದಾರೆ. ಇಂದು (ಜುಲೈ 10) ‘ಜವಾನ್​’ (Jawan Movie) ಸಿನಿಮಾದ ಪ್ರಿವ್ಯೂ ವಿಡಿಯೋ ಬಿಡುಗಡೆ ಆಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಂದ ಇದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ. ಆದರೆ ಆ ಪಾತ್ರಗಳ ವಿವರ ಇನ್ನೂ ಹೊರಬಿದ್ದಿಲ್ಲ. ಅಷ್ಟರಲ್ಲಾಗಲೇ ಅಭಿಮಾನಿಗಳು ಹಲವು ಬಗೆಯಲ್ಲಿ ಊಹೆ ಮಾಡಿಕೊಳ್ಳುತ್ತಿದ್ದಾರೆ. ‘ಜವಾನ್​’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಶಾರುಖ್​ ಖಾನ್ ಅವರು ತಾಯಿ-ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ.

ಶಾರುಖ್​ ಖಾನ್​ ಅವರಿಗೆ ‘ಜವಾನ್​’ ಸಿನಿಮಾದಲ್ಲಿ ದ್ವಿಪಾತ್ರ ಇದೆ ಎಂದು ಹೇಳಲಾಗುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಪಾತ್ರವರ್ಗದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ಇದ್ದಾರೆ. ತಂದೆ ಮತ್ತು ಮಗನ ಪಾತ್ರವನ್ನು ಶಾರುಖ್​ ಖಾನ್ ಮಾಡಿದ್ದಾರೆ ಎಂದು ಊಹಿಸಲಾಗುತ್ತಿದೆ. ಹಾಗಾಗಿ ಕೆಲವು ದೃಶ್ಯಗಳಲ್ಲಿ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರು ತಾಯಿ-ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫ್ಯಾನ್ಸ್​ ಅಂದಾಜಿಸುತ್ತಿದ್ದಾರೆ. ಇಂತಹ ಅನೇಕ ಟ್ವಿಸ್ಟ್​ಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: Shah Rukh Khan: ಬಿಡುಗಡೆಗೂ ಮುನ್ನವೇ ‘ಜವಾನ್​’ ಚಿತ್ರವನ್ನು ಬ್ಲಾಕ್​ ಬಸ್ಟರ್​ ಎಂದು ಘೋಷಿಸಿದ ಕರಣ್​ ಜೋಹರ್​

ಈ ಎಲ್ಲ ವಿಚಾರಗಳ ಬಗ್ಗೆ ‘ಜವಾನ್​’ ಸಿನಿಮಾದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಫ್ಯಾನ್ಸ್​ ವಲಯದಲ್ಲಿ ಸಖತ್​ ಚರ್ಚೆ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಟೀಸರ್​ ಬಿಡುಗಡೆ ಆದರೂ ಜನರು ತಪ್ಪು ಕಂಡು ಹಿಡಿದು ಟೀಕೆ ಮಾಡಲು ಕಾದಿರುತ್ತಾರೆ. ಆದರೆ ‘ಜವಾನ್​’ ಪ್ರಿವ್ಯೂ ವಿಡಿಯೋಗೆ ಆ ರೀತಿಯ ಯಾವುದೇ ಟೀಕೆ ವ್ಯಕ್ತವಾಗಿಲ್ಲ. ಬಹುತೇಕ ಎಲ್ಲರೂ ಈ ಪ್ರಿವ್ಯೂ ನೋಡಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: Jawan Prevue: ಮತ್ತೊಂದು ಮಾಸ್​ ಎಂಟರ್​ಟೇನ್​ಗೆ ರೆಡಿ ಆಗಿ; ‘ಜವಾನ್’ ಮೂಲಕ ಧೂಳೆಬ್ಬಿಸಲು ರೆಡಿ ಆದ ಶಾರುಖ್

ಶಾರುಖ್​ ಖಾನ್​ ಅವರ ಹೋಮ್​ ಬ್ಯಾನರ್​ನಲ್ಲಿ ‘ಜವಾನ್​’ ಸಿನಿಮಾ ಸಿದ್ಧವಾಗಿದೆ. ನಿರ್ಮಾಪಕಿಯಾಗಿ ಅವರ ಪತ್ನಿ ಗೌರಿ ಖಾನ್​ ಕೆಲಸ ಮಾಡಿದ್ದಾರೆ. ಈ ಸಿನಿಮಾ ಬಹಳ ಅದ್ದೂರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಪ್ರಿವ್ಯೂ ವಿಡಿಯೋದಲ್ಲಿ ಸಾಕ್ಷಿ ಸಿಕ್ಕಿದೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳು ಮತ್ತು ಖಡಕ್​ ಡೈಲಾಗ್​ಗಳು ಇದರಲ್ಲಿ ಹೈಲೈಟ್​ ಆಗಿವೆ. ಸೆಪ್ಟೆಂಬರ್​ 7ರಂದು ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us