‘ರಾಮಾಯಣ’ ಅಬ್ಬರಕ್ಕೆ ಗಾಡ್ಜಿಲ್ಲಾ ಸಿನಿಮಾ ಮುಂದಕ್ಕೆ? ಇದು ಯಶ್ ಚಿತ್ರದ ಅಬ್ಬರ

ಭಾರತದಲ್ಲಿ ಗಾಡ್ಜಿಲ್ಲಾ ಮೈನಸ್ ಜೀರೋ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳ ಕೊರತೆಯಿಂದಾಗಿ ಈ ಬೆಳವಣಿಗೆ ನಡೆದಿದೆ. ಇದು ರಣಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಆರಂಭಿಕ ಬಾಕ್ಸ್ ಆಫೀಸ್ ಗಳಿಕೆಗೆ ದೊಡ್ಡ ಮಟ್ಟದ ವರದಾನವಾಗಲಿದ್ದು, ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ.

‘ರಾಮಾಯಣ’ ಅಬ್ಬರಕ್ಕೆ ಗಾಡ್ಜಿಲ್ಲಾ ಸಿನಿಮಾ ಮುಂದಕ್ಕೆ? ಇದು ಯಶ್ ಚಿತ್ರದ ಅಬ್ಬರ
ರಾಮಾಯಣ

Updated on: Oct 28, 2026 | 7:38 AM

ಮುಖ್ಯಾಂಶಗಳು

  • ಮುಂದಕ್ಕೆ ಹೋದ ಗಾಡ್ಜಿಲ್ಲಾ ರಿಲೀಸ್
  • ಐಮ್ಯಾಕ್ಸ್ ಸ್ಕ್ರೀನ್‌ಗಳ ಅಭಾವದಿಂದ ಎದುರಾದ ಅಡಚಣೆ
  • ರಾಮಾಯಣಕ್ಕೆ ಸಿಕ್ಕ ಬಿಗ್ ಬೂಸ್ಟ್

ಹಾಲಿವುಡ್​ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಸಿನಿಮಾಗಳು ಮುಂದಕ್ಕೆ ಹೋಗೋದು ಸಾಮಾನ್ಯ. ಆದರೆ, ಈಗ ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ‘ ಚಿತ್ರಕ್ಕೆ ಹಾಲಿವುಡ್​​ನ ‘ಗಾಡ್ಜಿಲ್ಲಾ ಮೈನಸ್ ಜೀರೋ’ ಹೆದರಿದಂತೆ ಇದೆ. ಈ ಸಿನಿಮಾ ರೇಸ್​ನಿಂದ ಹಿಂದೆ ಸರಿಯುವ ಸಾಧ್ಯತೆ ದಟ್ಟವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಐಮ್ಯಾಕ್ಸ್ ಸ್ಕ್ರೀನ್‌ಗಳ ಕೊರತೆ ಇದೆ. ಈ ಅಚ್ಚರಿಯ ಬೆಳವಣಿಗೆಗೆ ಇದು ಕೂಡ ಪ್ರಮುಖ ಕಾರಣ ಎನ್ನಲಾಗಿದೆ. ಇದರಿಂದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರಕ್ಕೆ ಸ್ಪರ್ಧೆ ಕಡಿಮೆ ಆಗಿದೆ.

‘ಗಾಡ್ಜಿಲ್ಲಾ ಮೈನಸ್ ಜೀರೋ’ ಇದು ಜಪಾನ್ ಭಾಷೆಯ ಸಿನಿಮಾ. ನವೆಂಬರ್ 3ರಂದು ಜಪಾನ್​ ಅಲ್ಲಿ ಬಿಡುಗಡೆ ಆಗುತ್ತಿರುವ ಈ ಸಿನಿಮಾ ನವೆಂಬರ್ 6ರಂದು ಭಾರರದಲ್ಲಿ ತೆರೆಕಾಣಬೇಕಿತ್ತು. ಆದರೆ. ‘ರಾಮಾಯಣ’ ಸಿನಿಮಾ ನವೆಂಬರ್ 5ರಂದೇ ತೆರೆಗೆ ಬರಲು ಸಜ್ಜಾಗಿದೆ. ಈ ಎರಡು ದೊಡ್ಡ ಸಿನಿಮಾಗಳ ಬಿಡುಗಡೆ ದಿನಾಂಕಗಳು ಹತ್ತಿರದಲ್ಲಿರುವುದರಿಂದ ಚಿತ್ರಮಂದಿರಗಳಲ್ಲಿ ತೀವ್ರ ಸ್ಪರ್ಧೆ ಏರ್ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರೀಮಿಯಂ ಐಮ್ಯಾಕ್ಸ್ ಸ್ಕ್ರೀನ್‌ಗಳ ಹಂಚಿಕೆ ವಿಚಾರದಲ್ಲಿ ಥಿಯೇಟರ್ ಮಾಲೀಕರಿಗೆ ಗೊಂದಲ ಉಂಟಾಗಿದೆ. ಮುಂಗಡ ಬುಕಿಂಗ್ ಮತ್ತು ಪ್ರೇಕ್ಷಕರ ಭಾರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮಲ್ಟಿಪ್ಲೆಕ್ಸ್ ಮಾಲೀಕರು ‘ರಾಮಾಯಣ’ ಚಿತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪರಿಣಾಮವಾಗಿ ಗಾಡ್ಜಿಲ್ಲಾ ಚಿತ್ರದ ಭಾರತೀಯ ಬಿಡುಗಡೆಯು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಗಾಡ್ಜಿಲ್ಲಾ ಸಿನಿಮಾ ರಿಲೀಸ್ ಮುಂದಕ್ಕೆ ಹೋದರೆ, ಅದು ರಾಮಾಯಣ ಚಿತ್ರಕ್ಕೆ ದೊಡ್ಡ ಲಾಭ ನೀಡಲಿದೆ. ಆರಂಭಿಕ ವಿಕೆಂಡ್‌ನಲ್ಲಿ ಯಾವುದೇ ದೊಡ್ಡ ಸಿನಿಮಾದ ಪೈಪೋಟಿ ಇಲ್ಲದೆ ಚಿತ್ರವು ದಾಖಲೆಯ ಗಳಿಕೆ ಮಾಡಲು ಇದು ಸಹಕಾರಿ ಆಗಲಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರತಿಯೊಂದು ಐಮ್ಯಾಕ್ಸ್ ಪರದೆಯು ಅತ್ಯಂತ ನಿರ್ಣಾಯಕವಾಗಿದೆ.

ಇದನ್ನೂ ಓದಿ: ಮೊದಲ ದಿನವೇ 200 ಕೋಟಿ ರೂ. ಗಳಿಸಲಿದೆ ‘ರಾಮಾಯಣ’; ‘ಧುರಂಧರ್ 2’ ದಾಖಲೆ ಉಡೀಸ್?

ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಸಿನಿಪ್ರಿಯರು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಈ ಬೃಹತ್ ಪ್ರಾಜೆಕ್ಟ್ ಕುರಿತು ಗಾಡ್ಜಿಲ್ಲಾ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us