ಇಬ್ಬರು ಬಾಲಿವುಡ್ ನಟರಿಗೆ ಹೆಚ್ಚಿದ ಭದ್ರತೆ, ಯಾವ ನಟರಿಗೆ ಯಾವ ಮಾದರಿ ಭದ್ರತೆ?
ಈಗಾಗಲೇ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಇನ್ನೂ ಕೆಲವರಿಗೆ ಸರ್ಕಾರವೇ ಭದ್ರತೆ ಒದಗಿಸುತ್ತಿದೆ. ಸಲ್ಮಾನ್ ಖಾನ್ ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಹೆಚ್ಚಿಸಿ ವೈ ಪ್ಲಸ್ ಭದ್ರತೆಯನ್ನು ನೀಡುತ್ತಿದೆ. ಶಾರುಖ್ ಖಾನ್ ಅವರಿಗೂ ಸಹ ವೈ ಪ್ಲಸ್ ಭದ್ರತೆಯನ್ನೇ ನೀಡಲಾಗುತ್ತಿದೆ. ಅಮಿತಾಬ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಅವರಿಗೆ ಎಕ್ಸ್ ಕ್ಯಾಟಗರಿ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದೆ.

ಮುಖ್ಯಾಂಶಗಳು
- ಬಾಲಿವುಡ್ ನಟರಿಗೆ ಹೆಚ್ಚಿನ ಭದ್ರತೆ
- ದಾಳಿಯ ಬಳಿಕ ಹೆಚ್ಚಿದ ಭದ್ರತೆ
- ಯಾರಿಗೆ ಯಾ ಕ್ಯಾಟಗೆರಿಯ ಭದ್ರತೆ?
ಬಾಲಿವುಡ್ ಮೇಲೆ ಭೂಗತ ಲೋಕದ ಕರಿನೆರಳು ಬಿದ್ದಿದೆ. ಸಲ್ಮಾನ್ ಖಾನ್ ಕೊಲ್ಲಲು ಸತತ ದಾಳಿ, ದಿಶಾ ಪಟಾನಿ ಮನೆ ಮೇಲೆ ದಾಳಿ, ರೋಹಿತ್ ಶೆಟ್ಟಿ ಮನೆ ಮೇಲೆ ದಾಳಿ, ಕಪಿಲ್ ಶರ್ಮಾ ಹೋಟೆಲ್ಲುಗಳ ಮೇಲೆ ದಾಳಿ, ಹಲವು ನಟರಿಗೆ ಬೆದರಿಕೆ ಇತ್ತೀಚೆಗೆ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ. ಹೀಗೆ ಒಂದರ ಹಿಂದೊಂದು ದಾಳಿಗಳು ನಡೆಯುತ್ತಲೇ ಇವೆ. ಪೊಲೀಸರು ಆರೋಪಿಗಳನ್ನು ಬಂಧಿಸುತ್ತಲೇ ಇದ್ದಾರೆ. ಆದರೆ ದಾಳಿಗಳು ಮಾತ್ರ ಕಡಿಮೆ ಆಗಿಲ್ಲ. ಹಾಗಾಗಿ ಆಯ್ದ ಬಾಲಿವುಡ್ ನಟರಿಗೆ ಭದ್ರತೆ ಹೆಚ್ಚಿಸಲಾಗುತ್ತಿದೆ. ಟೈಗರ್ ಶ್ರಾಫ್ ದಾಳಿಯ ಬಳಿಕ ಇಬ್ಬರು ಬಾಲಿವುಡ್ ನಟರಿಗೆ ಈ ಹಿಂದೆ ನೀಡಲಾಗುತ್ತಿದ್ದ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.
ಈಗಾಗಲೇ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಇನ್ನೂ ಕೆಲವರಿಗೆ ಸರ್ಕಾರವೇ ಭದ್ರತೆ ಒದಗಿಸುತ್ತಿದೆ. ಸಲ್ಮಾನ್ ಖಾನ್ ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಹೆಚ್ಚಿಸಿ ವೈ ಪ್ಲಸ್ ಭದ್ರತೆಯನ್ನು ನೀಡುತ್ತಿದೆ. ಶಾರುಖ್ ಖಾನ್ ಅವರಿಗೂ ಸಹ ವೈ ಪ್ಲಸ್ ಭದ್ರತೆಯನ್ನೇ ನೀಡಲಾಗುತ್ತಿದೆ. ಅಮಿತಾಬ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಅವರಿಗೆ ಎಕ್ಸ್ ಕ್ಯಾಟಗರಿ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ನೀಡುತ್ತಿದೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲಿನ ಶೂಟಿಂಗ್ ಅಥವಾ ಫೈರಿಂಗ್ ಘಟನೆಯ ನಂತರ, ಟೈಗರ್ ಶ್ರಾಫ್ ಅವರಿಗೂ ಸಹ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಟೈಗರ್ ಮಾತ್ರವೇ ಅಲ್ಲದೆ ಬಾಲಿವುಡ್ ನಟ ಆಮಿರ್ ಖಾನ್ ಅವರಿಗೂ ಸಹ ವೈ ಪ್ಲಸ್ ಭದ್ರತೆ ನೀಡಲಾಗುತ್ತಿದೆ. ಈ ಹಿಂದೆ ಆಮಿರ್ ಖಾನ್ ಅವರಿಗೆ ಎಕ್ಸ್ ಕ್ಯಾಟಗರಿ ಭದ್ರತೆ ಇತ್ತು. ಆದರೆ ಟೈಗರ್ ದಾಳಿಯ ಬಳಿಕ ನಡೆದ ಆರೋಪಿಗಳ ವಿಚಾರಣೆಯಲ್ಲಿ ಆಮಿರ್ ಖಾನ್ ಸಹ ಟಾರ್ಗೆಟ್ ಆಗಿದ್ದ ವಿಚಾರ ತಿಳಿದು ಅವರಿಗೆ ವೈ ಪ್ಲಸ್ ಭದ್ರತೆ ನೀಡಲಾಗಿದೆ.
ಇದನ್ನೂ ಓದಿ:ಹಾಲಿವುಡ್ಗೆ ಹೊರಟರಾ ಬಾಲಿವುಡ್ ನಟ ಹೃತಿಕ್ ರೋಷನ್?
ಸರ್ಕಾರ ನೀಡುವ ವಿವಿಧ ಸ್ಥರದ ಭದ್ರತೆಗಳಲ್ಲಿ ವೈ ಪ್ಲಸ್ ಭದ್ರತೆ ನಾಲ್ಕನೇ ಸುರಕ್ಷಿತ ಭದ್ರತಾ ಕ್ಯಾಟಗರಿ ಎನಿಸಿಕೊಂಡಿದೆ. ಮೊದಲಿಗೆ ಎಸ್ಪಿಜಿ ಭದ್ರತೆ, ಇದನ್ನು ಪ್ರಧಾನಿ ಮೋದಿ ಅವರಿಗೆ ನೀಡಲಾಗಿದೆ. ಬಳಿಕ ಜೆಡ್ ಪ್ಲಸ್, ಇದನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಇನ್ನೂ ಕೆಲ ಪ್ರಮುಖ ನಾಯಕರುಗಳಿಗೆ ನೀಡಲಾಗಿದೆ. ಬಳಿಕ ಜೆಡ್ ಭದ್ರತೆ ಆ ಬಳಿಕ ವೈ ಪ್ಲಸ್ ಭದ್ರತೆ. ಈ ವೈ ಪ್ಲಸ್ ಭದ್ರತೆಯಲ್ಲಿ ಸುಮಾರು 12 ಮಂದಿ ಮುಂಬೈ ಪೊಲೀಸರು ಕಾವಲಿಗೆ ಇರುತ್ತಾರೆ. ಅವರಲ್ಲಿ ನಾಲ್ಕು ಮಂದಿ ಶಸ್ತ್ರಾಸ್ತ್ರ ಸಹಿತ ಕಮಾಂಡೊಗಳಾಗಿರುತ್ತಾರೆ.
ಬಾಲಿವುಡ್ನ ಹಲವಾರು ಮಂದಿಗೆ ಸರ್ಕಾರವೇ ಭದ್ರತೆ ನೀಡುತ್ತಿದೆ. ಸಲ್ಮಾನ್, ಖಾರುಖ್, ಆಮಿರ್ ಮಾತ್ರವೇ ಅಲ್ಲದೆ, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಕಂಗನಾ ರನೌತ್, ದೀಪಿಕಾ ಪಡುಕೋಣೆ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಹಿರಿಯ ನಟ ಅನುಪಮ್ ಖೇರ್ ಇನ್ನೂ ಕೆಲವರಿಗೆ ಸರ್ಕಾರವೇ ಭದ್ರತೆ ಒದಗಿಸುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




