
ಶಾಹಿದ್ ಕಪೂರ್ (Shahid Kapoor) ಹಾಗೂ ಕಿಯಾರಾ ಅಡ್ವಾಣಿ ನಟನೆಯ ‘ಕಬೀರ್ ಸಿಂಗ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಿಂದ ಶಾಹಿದ್ ಹಾಗೂ ಕಿಯಾರಾ ದೊಡ್ಡ ಗೆಲುವು ಕಂಡರು. ಈ ಚಿತ್ರದಲ್ಲಿ ಪ್ರೀತಿ ಪಾತ್ರ ಮಾಡಿದ್ದರು ಕಿಯಾರಾ. ಪ್ರೀತಿ ಬಿಟ್ಟು ಹೋದಾಗ ಕಬೀರ್ (ಶಾಹಿದ್) ರಸ್ತೆ ಮೇಲೆ ಓಡುತ್ತಾನೆ. ಆಕೆಯನ್ನು ಬೇರೆಯವರು ಮುಟ್ಟಿದಾಗ ಅವರಿಗೆ ಹೊಡೆಯುತ್ತಾನೆ. ಈಗ ಕಿಯಾರಾ (Kiara Advani) ಹಾಗೂ ಸಿದ್ದಾರ್ಥ್ಗೆ ಮದುವೆ ಆದ ಬೆನ್ನಲ್ಲೇ ‘ಕಬೀರ್ ಸಿಂಗ್’ ಚಿತ್ರದ ಪೋಸ್ಟರ್ಗಳನ್ನು ಮೀಮ್ಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಫೆಬ್ರವರಿ 7ರಂದು ಮದುವೆ ಆದರು. ರಾಜಸ್ಥಾನದ ಜೈಸಲ್ಮೇರ್ನಲ್ಲಿ ಈ ವಿವಾಹ ನಡೆದಿದೆ. ಕಿಯಾರಾ ಹಾಗೂ ಸಿದ್ದಾರ್ಥ್ ಫೆ.7ರ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಈ ದಂಪತಿಗೆ ಶುಭಾಶಯ ಕೋರಿದರೆ ಇನ್ನೂ ಕೆಲವರು ಮೀಮ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
‘ಕಬೀರ್ ಸಿಂಗ್’ ಸಿನಿಮಾದಲ್ಲಿ ಪ್ರೀತಿ ಮದುವೆ ವೇಳೆ ಕಬೀರ್ ಇಂಜಕ್ಷನ್ ತೆಗೆದುಕೊಳ್ಳುತ್ತಾನೆ. ಹಲವು ಗಂಟೆ ಆತನಿಗೆ ಪ್ರಜ್ಞೆ ಇರುವುದಿಲ್ಲ. ಕಬೀರ್ ಬೆಡ್ ಮೇಲೆ ಮಲಗಿರುವ ಫೋಟೋನ ಕಿಯಾರಾ ಮದುವೆ ಫೋಟೋ ಪೋಸ್ಟ್ನ ಕಮೆಂಟ್ ಬಾಕ್ಸ್ನಲ್ಲಿ ಹಾಕಿರುವ ಫ್ಯಾನ್ಸ್ ‘ನಿಮ್ಮ ಫೋಟೋ ನೋಡಿ ಶಾಹಿದ್ ಕಪೂರ್ ಇಂಜಕ್ಷನ್ ತೆಗೆದುಕೊಂಡು ಮಲಗಿರಬಹುದು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಕಿಯಾರಾ ಅಡ್ವಾಣಿ-ಸಿದ್ದಾರ್ಥ್ ಮಲ್ಹೋತ್ರ ವಿವಾಹದ ಕ್ಷಣದ ಫೋಟೋ ವೈರಲ್
ಇನ್ನೂ ಕೆಲವರು ಶಾಹಿದ್ ಕಪೂರ್ ರಸ್ತೆಯಮೇಲೆ ಓಡಿ ಬರುತ್ತಿರುವ ವಿಡಿಯೋನ ಅಪ್ಲೋಡ್ ಮಾಡಿದ್ದಾರೆ. ‘ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆ ನಿಲ್ಲಿಸೋಕೆ ಶಾಹಿದ್ ಓಡಿ ಬರುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ. ‘ಈಗ ಕಬೀರ್ ಸಿಂಗ್ನ ಪರಿಸ್ಥಿತಿ’ ಎಂದು ಶಾಹಿದ್ ಮದ್ಯಪಾನ ಮಾಡುತ್ತಿರುವ ಫೋಟೋನ ಪೋಸ್ಟ್ ಮಾಡಲಾಗಿದೆ. ‘ಪ್ರೀತಿ ಮೇಲೆ ಏಕೆ ಕೈ ಇಟ್ಟೆ’ ಎಂದು ಶಾಹಿದ್ ಕೂಗುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ