ನೆಗೆಟಿವ್ ವಿಮರ್ಶೆ ಮಧ್ಯೆಯೂ ಎದ್ದು ನಿಂತ ಸಲ್ಮಾನ್ ಖಾನ್; ಭರ್ಜರಿ ಕಲೆಕ್ಷನ್ ಮಾಡಿದ ಸಲ್ಲು ಸಿನಿಮಾ

Kisi Ka Bhai Kisi ki Jaan Movie Collection: ಸಾಮಾನ್ಯವಾಗಿ ಸಲ್ಮಾನ್ ಖಾನ್ ಚಿತ್ರದ ಮೊದಲ ದಿನದ ಗಳಿಕೆ 25 ಕೋಟಿ ರೂಪಾಯಿ ಮೇಲಿರುತ್ತಿತ್ತು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಗಳಿಕೆಯನ್ನು ಸಾಧಾರಣ ಗಳಿಕೆ ಎಂದು ಬಾಕ್ಸ್ ಆಫೀಸ್ ಪಂಡಿತರು ಕರೆದರು.

ನೆಗೆಟಿವ್ ವಿಮರ್ಶೆ ಮಧ್ಯೆಯೂ ಎದ್ದು ನಿಂತ ಸಲ್ಮಾನ್ ಖಾನ್; ಭರ್ಜರಿ ಕಲೆಕ್ಷನ್ ಮಾಡಿದ ಸಲ್ಲು ಸಿನಿಮಾ
ಸಲ್ಮಾನ್ ಖಾನ್

Updated on: Apr 24, 2023 | 1:10 PM

ಮುಖ್ಯಾಂಶಗಳು

  • ಒಳ್ಳೆಯ ಕಲೆಕ್ಷನ್ ಮಾಡಿದ ಸಲ್ಮಾನ್ ಖಾನ್ ಸಿನಿಮಾ
  • ಆರಂಭದಲ್ಲಿ ಸಾಧಾರಣ ಗಳಿಕೆ ಮಾಡಿದ್ದ ಚಿತ್ರಕ್ಕೆ ಒಳ್ಳೆಯ ಕಲೆಕ್ಷನ್
  • ಸೋಮವಾರದ ಗಳಿಕೆ ಮೇಲೆ ಸಲ್ಮಾನ್ ಖಾನ್ ಸಿನಿಮಾ ಭವಿಷ್ಯ ನಿರ್ಧಾರ ಆಗಲಿದೆ

ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ (Kisi Ka Bhai Kisi ki Jaan Movie) ಮೊದಲ ದಿನ ನೆಗೆಟಿವ್ ವಿಮರ್ಶೆ ಪಡೆಯಿತು. ಅನೇಕರಿಗೆ ಸಿನಿಮಾ ಇಷ್ಟ ಆಗಲಿಲ್ಲ. ಈ ಕಾರಣಕ್ಕೆ ಶುಕ್ರವಾರ (ಏಪ್ರಿಲ್ 21) ಸಿನಿಮಾ ಸಾಧಾರಣ ಗಳಿಕೆ ಮಾಡಿತು. ಆದರೆ, ಅಭಿಮಾನಿಗಳು ಸಲ್ಮಾನ್ ಅವರ ಕೈಬಿಟ್ಟಿಲ್ಲ. ಸಿನಿಮಾವನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಮೂರು ದಿನಕ್ಕೆ ಚಿತ್ರದ ಕಲೆಕ್ಷನ್ 68.17 ಕೋಟಿ ರೂಪಾಯಿ ಆಗಿದೆ. ಸೋಮವಾರದ ಗಳಿಕೆ ಮೇಲೆ ಸಲ್ಮಾನ್ ಖಾನ್ (Salman Khan) ಸಿನಿಮಾ ಭವಿಷ್ಯ ನಿರ್ಧಾರ ಆಗಲಿದೆ.

ಈದ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಚಿತ್ರಗಳು ರಿಲೀಸ್ ಆಗುವುದು ವಾಡಿಕೆ. ಅದೇ ರೀತಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಂಜಾನ್ ಸಂದರ್ಭದಲ್ಲಿ (ಏಪ್ರಿಲ್ 21) ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 15 ಕೋಟಿ ರೂಪಾಯಿ ಗಳಿಕೆ ಮಾಡಿತು. ಸಾಮಾನ್ಯವಾಗಿ ಸಲ್ಮಾನ್ ಖಾನ್ ಚಿತ್ರದ ಮೊದಲ ದಿನದ ಗಳಿಕೆ 25 ಕೋಟಿ ರೂಪಾಯಿ ಮೇಲಿರುತ್ತಿತ್ತು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಗಳಿಕೆಯನ್ನು ಸಾಧಾರಣ ಗಳಿಕೆ ಎಂದು ಬಾಕ್ಸ್ ಆಫೀಸ್ ಪಂಡಿತರು ಕರೆದರು.

ಶನಿವಾರ (ಏಪ್ರಿಲ್ 23) ಈ ಚಿತ್ರ 25.75 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ಭಾನುವಾರ 26.61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 68 ಕೋಟಿ ರೂಪಾಯಿ ದಾಟಿದೆ.

ವೀಕೆಂಡ್​ನಲ್ಲಿ ಸಿನಿಮಾನ ವೀಕ್ಷಿಸೋದು ಸಹಜ. ಆದರೆ, ವಾರದ ದಿನಗಳಲ್ಲಿ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿದರೆ ಅದು ನಿಜವಾದ ಗೆಲುವು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಇಂದಿನ ಗಳಿಕೆ ಎಷ್ಟಾಗಲಿದೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ.

ಇದನ್ನೂ ಓದಿ: ಈದ್​ಗೆ ಸಲ್ಮಾನ್ ಖಾನ್​-ಆಮಿರ್ ಖಾನ್ ಭೇಟಿ; ಈ ಫೋಟೋದಲ್ಲಿ ಮಿಸ್ಸಿಂಗ್ ಆಗಿದ್ದು ಯಾರು?

ಸಲ್ಮಾನ್ ಖಾನ್ ಸಿನಿಮಾದ ಬಜೆಟ್ ದೊಡ್ಡ ಮಟ್ಟದಲ್ಲಿರುತ್ತದೆ. ಹೀಗಾಗಿ, ಅವರ ಸಿನಿಮಾಗಳು ನೂರು ಕೋಟಿ ರೂಪಾಯಿಗೆ ಬಿಸ್ನೆಸ್ ಮುಗಿಸಿದರೆ ಅದನ್ನು ಗೆಲುವು ಎಂದು ಕರೆಯಲು ಸಾಧ್ಯವಿಲ್ಲ. ತಮಿಳಿನಿ ‘ವೀರಂ’ ಚಿತ್ರದ ರಿಮೇಕ್ ‘ಕಿಸಿ ಕಿ ಭಾಯ್ ಕಿಸಿ ಕಿ ಜಾನ್’ ಸಿನಿಮಾ. ರಿಮೇಕ್ ಎನ್ನುವ ಕಾರಣಕ್ಕೂ ಅನೇಕರಿಗೆ ಸಿನಿಮಾ ಇಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us