ಸಲ್ಮಾನ್ ಖಾನ್ ಮೇಲೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹಗೆ ಸಾಧಿಸುತ್ತಿದ್ದಾನೆ. ಕೃಷ್ಣಮೃಗ ಭೇಟೆಗೆ ಪ್ರತಿಕಾರವಾಗಿ ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಲಾರೆನ್ಸ್ ಬಿಷ್ಣೋಯ್ ಪಣ ತೊಟ್ಟಿರುವುದು ಗೊತ್ತೇ ಇದೆ. ಕೆಲವು ತಿಂಗಳ ಹಿಂದೆ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಈಗ ಸಲ್ಮಾನ್ ಖಾನ್ ಅವರ ಆಪ್ತರಾದ ಬಾಬಾ ಸಿದ್ಧಿಕಿ ಹತ್ಯೆ ಮಾಡಲಾಗಿದೆ. ಬಾಬಾ ಸಿದ್ಧಿಕಿ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿರುವಾಗಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಈ ಹತ್ಯೆಯ ಹೊಣೆ ಹೊತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯ್ಸ್ ಗ್ಯಾಂಗ್ನವರು ಎನ್ನಲಾದ ವ್ಯಕ್ತಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್ ಖಾನ್ ನಡುವೆ ಆಪ್ತ ಒಡನಾಟ ಇತ್ತು. ಅನೇಕ ಸಂದರ್ಭಗಳಲ್ಲಿ ಬಾಬಾ ಸಿದ್ಧಿಕಿ ಮನೆಗೆ ಸಲ್ಲು ತೆರಳಿದ್ದರು. ಸಲ್ಮಾನ್ ಖಾನ್ಗೆ ಸಹಾಯ ಮಾಡಿದ್ದಕ್ಕಾಗಿ ಸಿದ್ಧಿಕಿಯ ಹತ್ಯೆ ನಡೆದಂತಿದೆ.
ಫೇಸ್ಬುಕ್ ಪೋಸ್ಟ್ ಮೂಲಕ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಲಾಗಿದೆ. ‘ಸಲ್ಮಾನ್ ಖಾನ್.. ನಮಗೆ ಈ ಯುದ್ಧ ಬೇಕಿರಲಲ್ಲ. ಆದರೆ ನೀವು ನಮ್ಮ ಸಹೋದರರ ಜೀವಕ್ಕೆ ಹಾನಿ ಮಾಡಿದ್ದೀರಿ. ಒಂದು ಸಮಯದಲ್ಲಿ ಬಾಬಾ ಸಿದ್ಧಿಕಿಗೆ ದಾವುದ್ ಜೊತೆ ಲಿಂಕ್ ಇತ್ತು. ಅನುಜ್ ತಾಪನ್, ದಾವುದ್, ಬಾಲಿವುಡ್, ರಾಜಕೀಯ ಮತ್ತು ಆಸ್ತಿ ಡೀಲ್ ಜೊತೆ ಸಿದ್ಧಿಕಿಗೆ ನಂಟು ಇದ್ದಿದ್ದರಿಂದ ಈ ಸಾವು’ ಎಂದು ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಯಾರನ್ನೂ ಭೇಟಿ ಮಾಡಲ್ಲ: ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ನಿರ್ಧಾರ
‘ನಮಗೆ ಯಾರ ಮೇಲೂ ದ್ವೇಷ ಇಲ್ಲ. ಸಲ್ಮಾನ್ ಖಾನ್ ಮತ್ತು ದಾವುದ್ ಗ್ಯಾಂಗ್ಗೆ ಯಾರೇ ಸಹಾಯ ಮಾಡಿದರೂ ಕೂಡ ಇಂಥದ್ದಕ್ಕೆ ಸಿದ್ಧರಾಗಿರಬೇಕು. ನಮ್ಮ ಸಹೋದರರನ್ನು ಕೊಂದರೆ ನಾವು ಪ್ರತಿಕ್ರಿಯಿಸುತ್ತೇವೆ. ಎಂದಿಗೂ ನಾವಾಗಿಯೇ ಮೊದಲು ದಾಳಿ ಮಾಡಿಲ್ಲ. ಜೈ ಶ್ರೀರಾಮ್, ಜೈ ಭಾರತ್’ ಎಂದು ಬರಹ ಪೂರ್ಣಗೊಳಿಸಲಾಗಿದೆ. ಈ ಬೆದರಿಕೆಯ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ನಿವಾಸದ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಬಾಬಾ ಸಿದ್ಧಿಕಿ ಅವರ ಅಂತ್ಯಕ್ರಿಯೆಯಲ್ಲಿ ಸಲ್ಮಾನ್ ಖಾನ್ ಭಾಗಿ ಆಗಿದ್ದಾರೆ. ಸಿನಿಮಾ ಮತ್ತು ಇನ್ನುಳಿದ ಕೆಲಸಗಳಿಗೆ ಸಂಬಂಧಿಸಿದ ಎಲ್ಲ ಮೀಟಿಂಗ್ಗಳನ್ನು ಅವರು ಕ್ಯಾನ್ಸಲ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.