AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರನ್ನೂ ಭೇಟಿ ಮಾಡಲ್ಲ: ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ನಿರ್ಧಾರ

ಬಾಬಾ ಸಿದ್ಧಿಕಿ ನಿಧನದ ಸುದ್ದಿ ತಿಳಿದ ಬಳಿಕ ತಮ್ಮ ಎಲ್ಲ ಮೀಟಿಂಗ್​ಗಳನ್ನು ಸಲ್ಮಾನ್​ ಖಾನ್​ ಅವರು ಕ್ಯಾನ್ಸಲ್ ಮಾಡಿದ್ದಾರೆ. ಚಿತ್ರರಂಗದ ಸ್ನೇಹಿತರು ಕೂಡ ತಮ್ಮ ನಿವಾಸಕ್ಕೆ ಭೇಟಿ ನೀಡುವುದು ಬೇಡ ಎಂದು ಸಲ್ಲು ಕುಟುಂಬದವರು ತಿಳಿಸಿದ್ದಾರೆ ಎನ್ನಲಾಗಿದೆ. ಸಲ್ಮಾನ್​ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ಗೆ ಭದ್ರತೆ ಹೆಚ್ಚಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಯಾರನ್ನೂ ಭೇಟಿ ಮಾಡಲ್ಲ: ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ನಿರ್ಧಾರ
ಸಲ್ಮಾನ್​ ಖಾನ್​, ಬಾಬಾ ಸಿದ್ಧಿಕಿ
ಮದನ್​ ಕುಮಾರ್​
|

Updated on: Oct 13, 2024 | 3:39 PM

Share

ಎನ್​ಸಿಪಿ ಮುಖಂಡ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್​ ಖಾನ್​ ಅವರ ಭದ್ರತೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಬಾಬಾ ಸಿದ್ಧಿಕಿಗೆ ಸಲ್ಮಾನ್​ ಖಾನ್​ ಆಪ್ತರಾಗಿದ್ದರು. ಅವರ ನಿಧನದ ಬಳಿಕ ಸಲ್ಲು ಮನೆ ಮುಂಭಾಗ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ತಮ್ಮ ನಿವಾಸ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ಗೆ ಯಾರೂ ಭೇಟಿ ನೀಡಬೇಡಿ ಎಂದು ಸಲ್ಮಾನ್​ ಖಾನ್​ ಕುಟುಂಬದವರು ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಮೊದಲು ಸಲ್ಮಾನ್​ ಖಾನ್​ ಹತ್ಯೆಗೆ ಪ್ರಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದರು. ಈಗ ಅವರ ಆಪ್ತರಾದ ಬಾಬಾ ಸಿದ್ಧಿಕಿ ಕೊಲೆ ಆಗಿರುವುದರಿಂದ ಸಲ್ಲು ಫ್ಯಾಮಿಲಿಗೆ ಆತಂಕ ಹೆಚ್ಚಿದೆ.

ಬಾಬಾ ಸಿದ್ಧಿಕಿ ಅವರ ಕುಟುಂಬಕ್ಕೆ ಈ ಕಷ್ಟದ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಅವರು ಬೆಂಬಲವಾಗಿ ನಿಂತಿದ್ದಾರೆ. ಸಿದ್ಧಿಕಿ ಪುತ್ರ ಝೀಶಾನ್​ ಜೊತೆ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ. ಸ್ನೇಹಿತನನ್ನು ಕಳೆದುಕೊಂಡಿರುವ ಸಲ್ಮಾನ್​ ಖಾನ್​ಗೆ ತೀವ್ರ ಆತಂಕ ಉಂಟಾಗಿದೆ. ರಾತ್ರಿ ಅವರು ನಿದ್ದೆ ಮಾಡಿಲ್ಲ. ಈ ಮೊದಲೇ ನಿಗದಿ ಆಗಿದ್ದ ಎಲ್ಲ ಮೀಟಿಂಗ್​ಗಳನ್ನು ಅವರು ಕ್ಯಾನ್ಸಲ್​ ಮಾಡಿಕೊಂಡಿದ್ದಾರೆ.

ಸಲ್ಮಾನ್​ ಖಾನ್​ ಮಾತ್ರವಲ್ಲದೇ ಅವರ ಕುಟುಂಬದ ಬೇರೆ ಎಲ್ಲ ಸದಸ್ಯರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಸಲ್ಲು ಸಹೋದರರಾದ ಅರ್ಬಾಜ್​ ಖಾನ್​ ಮತ್ತು ಸೊಹೈಲ್​ ಖಾನ್​ ಕೂಡ ಆಗಾಗ ಬಾಬಾ ಸಿದ್ಧಿಕಿ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದರು. ಈಗ ಅವರ ನಿಧನದಿಂದ ಶೋಕ ಆವರಿಸಿದೆ. ಬಾಬಾ ಸಿದ್ಧಿಕಿ ಅಂತ್ಯಕ್ರಿಯೆ ಸಕಲ ತಯಾರಿಯ ಬಗ್ಗೆ ಸಲ್ಮಾನ್ ಖಾನ್​ ಅವರು ಉಸ್ತುವಾರಿ ವಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಾಬಾ ಸಿದ್ಧಿಕಿ ಮತ್ತು ಬಾಲಿವುಡ್: ಸಲ್ಲು-ಶಾರುಖ್​ ಖಾನ್ ಒಂದಾಗಿದ್ದೇ ಇವರಿಂದ

ಬಾಂದ್ರಾದಲ್ಲಿ ಇರುವ ಸಲ್ಮಾನ್ ಖಾನ್​ ಅವರ ನಿವಾಸಕ್ಕೆ ಬಾಲಿವುಡ್​ನ ಅನೇಕರು ಆಗಾಗ ಭೇಟಿ ನೀಡುತ್ತಾ ಇರುತ್ತಾರೆ. ಆದರೆ ಈಗ ತಮ್ಮನ್ನು ಯಾರೂ ಕೂಡ ಭೇಟಿ ಮಾಡುವುದು ಬೇಡ ಎಂದು ಸಲ್ಮಾನ್ ಖಾನ್ ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ. ಸಿನಿಮಾ ಶೂಟಿಂಗ್​ ಮತ್ತು ಬಿಗ್​ ಬಾಸ್ ಕಾರ್ಯಕ್ರಮದ ನಿರೂಪಣೆಯಲ್ಲಿ ಸಲ್ಮಾನ್​ ಖಾನ್​ ಬ್ಯುಸಿ ಆಗಿದ್ದರು. ಆದರೆ ಆ ಕೆಲಸಗಳಿಗೆ ಅವರು ಬ್ರೇಕ್​ ಹಾಕುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!