Manipur Files: ‘ಗಂಡಸ್ತನ ಇದ್ದರೆ ಮಣಿಪುರ ಫೈಲ್ಸ್​ ಸಿನಿಮಾ ಮಾಡಿ’: ವಿವೇಕ್​ ಅಗ್ನಿಹೋತ್ರಿಗೆ ನೆಟ್ಟಿಗರ ಸವಾಲು; ನಿರ್ದೇಶಕ ಕೊಟ್ಟ ಉತ್ತರ ಏನು?

Vivek Agnihotri: ‘ಸಮಯ ವ್ಯರ್ಥ ಮಾಡಬೇಡಿ. ಗಂಡಸ್ತನ ಇದ್ದರೆ ಮಣಿಪುರ್​ ಫೈಲ್ಸ್​ ಅಂತ ಸಿನಿಮಾ ಮಾಡಿ’ ಎಂದು ವ್ಯಕ್ತಿಯೊಬ್ಬರು ಚಾಲೆಂಜ್​ ಮಾಡಿದ್ದಾರೆ. ಈ ಟ್ವೀಟ್​ ವೈರಲ್​ ಆಗಿದೆ.

Manipur Files: ‘ಗಂಡಸ್ತನ ಇದ್ದರೆ ಮಣಿಪುರ ಫೈಲ್ಸ್​ ಸಿನಿಮಾ ಮಾಡಿ’: ವಿವೇಕ್​ ಅಗ್ನಿಹೋತ್ರಿಗೆ ನೆಟ್ಟಿಗರ ಸವಾಲು; ನಿರ್ದೇಶಕ ಕೊಟ್ಟ ಉತ್ತರ ಏನು?
ವಿವೇಕ್​ ಅಗ್ನಿಹೋತ್ರಿ

Updated on: Jul 23, 2023 | 9:13 AM

ಬಾಲಿವುಡ್​ನ ಖ್ಯಾತ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ನೈಜ ಘಟನೆ ಆಧಾರಿತ ಸಿನಿಮಾಗಳನ್ನು ಮಾಡಿ ಫೇಮಸ್​ ಆಗಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಘಟನೆಯನ್ನು ಆಧರಿಸಿ ಮೂಡಿಬಂದ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಗೆಲುವು ಸಿಕ್ಕಿತ್ತು. ಸದ್ಯ ಅವರು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ ನೆಟ್ಟಿಗರಿಂದ ವಿವೇಕ್​ ಅಗ್ನಿಹೋತ್ರಿಗೆ ಒಂದು ಸವಾಲು ಎದುರಾಗಿದೆ. ಧೈರ್ಯ ಇದ್ದರೆ ಮಣಿಪುರದಲ್ಲಿ (Manipur) ನಡೆದ ಅಮಾನವೀಯ ಘಟನೆಗಳ ಕುರಿತು (Manipur Files) ಸಿನಿಮಾ ಮಾಡಿ ಎಂದು ನೆಟ್ಟಿಗರೊಬ್ಬರು ಸವಾಲು ಹಾಕಿದ್ದಾರೆ. ಅದಕ್ಕೆ ವಿವೇಕ್​ ಅಗ್ನಿಹೋತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಣಿಪುರದಲ್ಲಿ ಯುವತಿಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ ಅಮಾನುಷ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ಟ್ವೀಟ್​ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ‘ಸಮಯ ವ್ಯರ್ಥ ಮಾಡಬೇಡಿ. ಗಂಡಸ್ತನ ಇದ್ದರೆ ಮಣಿಪುರ್​ ಫೈಲ್ಸ್​ ಅಂತ ಸಿನಿಮಾ ಮಾಡಿ’ ಎಂದು ಕಮೆಂಟ್​ ಮಾಡಿದ್ದಾರೆ. ಈ ಟ್ವೀಟ್​ ವೈರಲ್​ ಆಗಿದೆ. ಇದನ್ನು ವಿವೇಕ್​ ಅಗ್ನಿಹೋತ್ರಿ ಅವರು ನಿರ್ಲಕ್ಷಿಸಿಲ್ಲ. ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.

‘ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಎಲ್ಲ ಸಿನಿಮಾವನ್ನು ನನ್ನಿಂದಲೇ ಮಾಡಿಸುತ್ತೀರಾ? ನಿಮ್ಮ ಟೀಮ್​ ಇಂಡಿಯಾದಲ್ಲಿ ಗಂಡಸ್ತನ ಇರುವ ಫಿಲ್ಮ್​​ ಮೇಕರ್​ ಯಾರೂ ಇಲ್ಲವೇ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಮರುಪ್ರಶ್ನೆ ಹಾಕಿದ್ದಾರೆ. ಇದರಲ್ಲಿ ಅವರು ಬಳಸಿರುವ ಇಂಡಿಯಾ ಎಂಬ ಪದದ ಬಗ್ಗೆ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಪ್ರತಿಪಕ್ಷಗಳೆಲ್ಲ ಸೇರಿ ‘ಇಂಡಿಯಾ’ ಎಂಬ ಮೈತ್ರಿಕೂಟ ಮಾಡಿಕೊಂಡಿವೆ. ಅದರ ಹಿನ್ನೆಲೆಯಲ್ಲೇ ವಿವೇಕ್​ ಅಗ್ನಿಹೋತ್ರಿ ಈ ಪದವನ್ನು ಬಳಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Vivek Agnihotri: ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾದ ಬಜೆಟ್​ ಎಷ್ಟು? ಮುಚ್ಚುಮರೆ ಇಲ್ಲದೇ ಲೆಕ್ಕ ನೀಡಿದ ವಿವೇಕ್​ ಅಗ್ನಿಹೋತ್ರಿ

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ತೋರಿಸಲಾಗದೇ ಉಳಿದಿರುವ ಅನೇಕ ವಿಷಯಗಳನ್ನು ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ ವೆಬ್​ ಸರಣಿ ಮೂಲಕ ತೋರಿಸಲು ವಿವೇಕ್​ ಅಗ್ನಿಹೋತ್ರಿ ಮುಂದಾಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ವೆಬ್​ ಸಿರೀಸ್​ನ ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಜೀ5 ಒಟಿಟಿ ಮೂಲಕ ಇದು ಬಿಡುಗಡೆ ಆಗಲಿದೆ. ಅದರ ಜೊತೆಗೆ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗಾಗಿಯೂ ವಿವೇಕ್ ಅಗ್ನಿಹೋತ್ರಿಯ ಅಭಿಮಾನಿಗಳು ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us